ಅಕ್ಕಮಹಾದೇವಿ ಮಹಿಳಾ ವಿವಿದಲ್ಲಿ ವಿವಿದ ಕೋರ್ಸ್‌ಗಳಿಗೆ ಅರ್ಜಿ ಅಹ್ವಾನ
Applications invited for various courses at Akkamahadevi Women's University
ಅಕ್ಕಮಹಾದೇವಿ ಮಹಿಳಾ ವಿವಿದಲ್ಲಿ ವಿವಿದ ಕೋರ್ಸ್‌ಗಳಿಗೆ ಅರ್ಜಿ ಅಹ್ವಾನ
ವಿಜಯಪುರ, 06 ; ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎಂ.ಎ., ಬಿ.ಲಿಬ್‌ಎಸ್.ಸಿ, ಎಂ.ಲಿಬ್‌ಎಸ್.ಸಿ, ಎಂಎಸ್‌ಡಬ್ಲ್ಯು, ಎಂ.ಕಾಂ, ಎಂ.ಎಸ್.ಸಿ, ಎಂಸಿಎ, ಎಂಬಿಎ ಸೇರಿದಂತೆ ವಿವಿಧ ಸ್ನಾತಕೋತ್ತರ, ಪಿಜಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಆಸಕ್ತ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನವಾಗಿದೆ. ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್ ತಿತಿತಿ.ತಿಣ.ಚಿಛಿ.ಟಿ ಅಥವಾ ಯುಯುಸಿಎಂಎಸ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ಮುದ್ರಿತ ಪ್ರತಿಯನ್ನು ವಿಶ್ವವಿದ್ಯಾನಿಲಯದ ಆಯಾ ವಿಭಾಗಗಳ ಮುಖ್ಯಸ್ಥರ ಕಚೇರಿಗೆ ತಲುಪಿಸಬೇಕು ಎಂದು ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳಾ ವಿಶ್ವವಿದ್ಯಾಲಯದಲ್ಲಿ ಸದ್ಯ ಈ ಕೆಳಗಿನ ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿದ್ದು ಆಸಕ್ತ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಳ್ಳಬಹುದು: ಲಭ್ಯವಿರುವ ಕೋರ್ಸ್‌ಗಳು: ಕಲಾ ನಿಕಾಯ: ಎಂ.ಎ- ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಪ್ರದರ್ಶಕ ಕಲೆಗಳ ವಿಭಾಗ (ಎಂ.ಮ್ಯೂಜಿಕ್-ಹಿಂದೂಸ್ತಾನಿ ಮ್ಯೂಜಿಕ್), ಸಮಾಜ ವಿಜ್ಞಾನ ನಿಕಾಯ: ಎಂ.ಎ.: ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಮಹಿಳಾ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ. ಗ್ರ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ (ಒಂದು ವರ್ಷದ ಬಿ.ಲಿಬ್‌ಎಸ್.ಸಿ ಹಾಗೂ ಒಂದು ವರ್ಷದ ಎಂ.ಲಿಬ್‌ಎಸ್.ಸಿ) ಮತ್ತು ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (ಎಂಎಸ್‌ಡಬ್ಲ್ಯು), ವಿಜ್ಞಾನ ನಿಕಾಯ: ಎಂ.ಎಸ್.ಸಿ.- ಭೌತಶಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಸಂಖ್ಯಾಶಾಸ್ತ್ರ, ಜೈವಿಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕ, ಕಂಪ್ಯೂಟರ್ ಸೈನ್ಸ್ ಮತ್ತು ಎಂಸಿಎ. ಶಿಕ್ಷಣ ನಿಕಾಯ: ಎಂ.ಈಡಿ, ಬಿಪಿಈಡಿ, ಎಂ.ಪಿ.ಈಡಿ, ವಾಣಿಜ್ಯ ನಿಕಾಯ: ಎಂ.ಕಾಂ. ಮತ್ತು ಎಂಬಿಎ,. ಮತ್ತು ವಿವಿಧ ವಿಷಯಗಳಲ್ಲಿ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳು. ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅತ್ಯಾಧುನಿಕ ಬೋಧನಾ ತಂತ್ರಗಳು- ಸ್ಮಾರ್ಟಬೋರ್ಡ್ ಮತ್ತು ಡಿಜಿಟಲ್ ಕ್ಲಾಸ್‌ರೂಂ, ಮಲ್ಟಿಮೀಡಿಯಾ ಲ್ಯಾಬ್ ಮತ್ತು ಲಾಂಗ್ವೇಜ್ ಲ್ಯಾಬ್, ಸುಸಜ್ಜಿತ ಪ್ರಯೋಗಾಲಯಗಳು, ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ, ಸಾಪ್ಟವೇರ್ ಟೆಕ್ನಾಲಜಿ ಪಾರ್ಕ್ , 24ಥ7 ಇಂಟರ್‌ನೆಟ್ ಸೌಲಭ್ಯ, ಮಕ್ಕಳ ಲಾಲನೆ-ಪಾಲನೆಗೆ ಡೇಕೇರ್ ಸೆಂಟರ್, ನಗರದ ವಿವಿಧ ಭಾಗಗಳಿಂದ ವಿಶ್ವವಿದ್ಯಾಲಯಕ್ಕೆ ವಾಹನ ವ್ಯವಸ್ಥೆ ಮುಂತಾದ ಸೌಲಭ್ಯಗಳಲ್ಲಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಒದಗಿಸಲಾಗಿದೆ. ಮಹಿಳೆಯರು ಸುಲಭವಾಗಿ, ಆಕರ್ಷಕವಾಗಿ ಮತ್ತು ಕೈಗೆಟುಕುವ ದರದಲ್ಲಿ ಉನ್ನತ ಶಿಕ್ಷಣ ಪಡೆಯಲು ಸೂಕ್ತ ವಾತಾವರಣ ನಿರ್ಮಾಣ ಮಾಡುವಲ್ಲಿ ಮಹಿಳಾ ವಿಶ್ವವಿದ್ಯಾಲಯ ಹಲವಾರು ಕ್ರಮಗಳನ್ನು ಕೈಕೊಂಡಿದೆ. ಪ್ರವೇಶ ಮತ್ತು ಪರೀಕ್ಷಾ ಶುಲ್ಕ ಹಾಗೂ ಕಾಲೇಜುಗಳಿಗೆ ವಿಧಿಸುವ ಸಂಲಗ್ನ ಶುಲ್ಕಗಳು ಕಡಿಮೆಯಿವೆ. ಜ್ಞಾನ ಸಂಪಾದಿಸುವ ಆಸಕ್ತಿಯುಳ್ಳ ಮಹಿಳೆಯರು, ಉನ್ನತ ಶಿಕ್ಷಣವನ್ನು ಪಡೆಯುವ ಹಂಬಲ ಮತ್ತು ಬಲವನ್ನು ಹೊಂದಿದವರಿಗೆ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟ ರೀತಿಯ ಪಠ್ಯಕ್ರಮವನ್ನು ರೂಪಿಸಲಾಗಿದೆ. ಇಲ್ಲಿನ ವಿದ್ಯಾರ್ಥಿನಿಯರು ತಾವು ಓದುತ್ತಿರುವ ಕೋರ್ಸ್‌ನ ವಿಷಯಗಳಲ್ಲದೇ ಇತರ ವಿಷಯಗಳಲ್ಲಿ ಒಂದೊಂದು ವಿಷಯವನ್ನು ಪ್ರತಿ ಸೆಮಿಸ್ಟರ್‌ನಲ್ಲಿ ಓದುವ ಅವಕಾಶ ಕಲ್ಪಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಂಕರಗೌಡ ಸೋಮನಾಳ, ಕುಲಸಚಿವರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ- 586108. ತಿಜಣಜ: ತಿತಿತಿ.ತಿಣ.ಚಿಛಿ.ಟಿ ಸಂಪರ್ಕಿಸಬಹುದಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 