ಮಾನ್ಯ ಮುಖ್ಯಮಂತ್ರಿಗಳಿಗೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪರಿಹಾರಕ್ಕಾಗಿ ವಿವಿಧ ಬೇಡಿಕೆಗಳ ಮನವಿ

ಮಾನ್ಯ ಮುಖ್ಯಮಂತ್ರಿಗಳಿಗೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪರಿಹಾರಕ್ಕಾಗಿ ವಿವಿಧ ಬೇಡಿಕೆಗಳ ಮನವಿ Appeal to the Honorable Chief Minister with various demands for redressal of atrocities against wom


ಕೊಪ್ಪಳ 04: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಂಋಖಖ) ಕರ್ನಾಟಕ ರಾಜ್ಯ ಸಮಿತಿಯು ಮಾರ್ಚ್‌ 4ರಂದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ಆಂದೋಲನವನ್ನು ನವೆಂಬರ್ 25,2025 ರಿಂದ ಮಾರ್ಚ್‌ 25, 2026ರ ವರೆಗೆ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮ ಮತ್ತು ಸಹಿ ಸಂಗ್ರಹಣೆ ಪ್ರಯುಕ್ತ, ಮಾನ್ಯ ಮುಖ್ಯಮಂತ್ರಿಗಳಿಗೆ , ಎಐಎಂಎಸ್‌ಎಸ್ ರಾಜ್ಯ ಸಮಿತಿಯಿಂದ ನಿಯೋಗವೂಂದು ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಎಸ್ . ನೇತೃತ್ವದಲ್ಲಿ ಅಲಕಾ ರಾವ್, ಸೀಮಾ ಜಿ.ಎಸ್‌. ಹೇಮಾ, ಶಾಂತ ಅವರೊಂದಿಗೆ ಭೇಟಿ ಮಾಡಿದರು. ಅವರೊಂದಿಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಪ್ರಭಾವ , ಮರ್ಯಾದೆಗೇಡು ಹತ್ಯೆ ತಡೆಗಟ್ಟಲು ಮಾನ್ಯ ಕಾಯ್ದೆ , ಸರ್ಕಾರಿ ಕಛೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಿ , ಸಮಿತಿಯು ಸಕ್ರಿಯವಾಗಿರುವಂತೆ ಮಾಡುವುದು, ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು , ಅಪ್ರಾಪ್ತ ಮಕ್ಕಳ ಮೊಬೈಲ್ ಬಳಕೆ ಕುರಿತು ಮುಖ್ಯಮಂತ್ರಿಗಳ ಹತ್ತಿರ ಪ್ರಸ್ತಾಪಿಸಿ, ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.  ಧನ್ಯವಾದಗಳೊಂದಿಗೆ ಸುದ್ದಿ ಇವರಿಂದ ಶಾರದಾ ಗಡ್ಡಿ  ಚಿಲ್ಲ ಕಾರ್ಯದರ್ಶಿ