ಬೆಂಗಳೂರಿನ ಕೋಗಿಲೆ ಬಡಾವಣೆಯ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಮುಖ್ಯಮತ್ರಿಗೆ ಮನವಿ
Appeal to the Chief Minister demanding that houses be allotted to the victims of Bengaluru's Kogile
ಗದಗ 05: ರಾಜ್ಯ ಸರ್ಕಾರ ಪಂಚ್ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಎಲ್ಲಾ ಬಡವರ ಪರವಾಗಿ ನಮ್ಮ ಸರ್ಕಾರಇದೆಎಂದು ಬೆನ್ನು ತಟ್ಟಿಕೊಳ್ಳುತ್ತಿರುವುದು ಒಂದುಕಡೆ ಆದರೆ ಇನ್ನೂಂದು ಕಡೆ ಬಡವರ ಕನಸಿನ ಮನೆಗಳನ್ನು ಏಕಾಏಕಿಯಾಗಿ ತೆರವುಗೊಳಿಸಿ ನೂರಾರು ಕುಟುಂಬಗಳನ್ನು ಬೀದಿಗೆ ತಂದಿರುವುದನ್ನು ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಖಂಡಿಸುತ್ತೇವೆ ಕೊಡಲೇ ಬೆಂಗಳೂರಿನ ಕೋಗಿಲೆ ಬಡಾವಣೆಯ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಗದಗಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಗದಗಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ಕೋಗಿಲೆ ಬಡಾವಣೆಯ ನೂರಾರು ಕುಟುಂಬಗಳ ಮನೆಗಳನ್ನು ತೆರವುಗೊಳಿಸಿರುವುದು ಇದು ಬಡವರ ವಿರೋಧಿ ನೀತಿಯಾಗಿದೆ.ರಾಜ್ಯ ಸರ್ಕಾರ ಕೋಗಿಲೆ ಬಡಾವಣೆ ಹತ್ತಿರವಿರುವ ನೂರಾರು ಬಡವರ ಮನೆಗಳನ್ನು ಅನಧಿಕೈತ ಕಟ್ಟಡಗಳು ಎಂದು ನೆಪ್ಪ ಹೇಳಿ ತೆರವುಗೊಳಿಸಿದ್ದಾರೆ. ಸ್ಥಳೀಯ ಪ್ರದೇಶದ ನೂರಾರು ಕುಟುಂಬಗಳು ಕಳೆದ ಹಲವು ದಶಕಗಳಿಂದ ವಾಸವಾಗಿರುವ ಬಗ್ಗೆ ಸಾಕಷ್ಟು ದಾಖಲೆಗಳು ಇವೆ. ಮನುಷ್ಯ ವಾಸವಾಗಲು ಯೋಗ್ಯವಿಲ್ಲದ ಜಾಗೆಗಳಲ್ಲಿ ಸ್ಲಂಜನರು ವಾಸವಾಗಿದ್ದರು ಸಹ ಸರ್ಕಾರ ಸ್ಲಂ ನಿವಾಸಿಗಳ ಮನೆಗಳನ್ನು ಒಡೆದು ಹಾಕಿ ನೂರಾರು ಕುಟುಂಬಗಳನ್ನು ಇವತ್ತು ಬೀದಿ ತಂದಿದ್ದಾರೆ. ರಾಜ್ಯಸರ್ಕಾರದಿಂದ ಲಕ್ಷಾಂತರ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಿದ್ದೇವೆ, ರಾಜ್ಯದಲ್ಲಿ ಯಾರು ಕೂಡಾ ಮನೆ ಇಲ್ಲದೇ ಬೀದಿಯಲ್ಲಿ ಇರಬಾರದೆಂದು ಹೇಳುವ ನಮ್ಮ ಸರ್ಕಾರ ಹಾಗೂ ವಸತಿ ಸಚಿವರುಇವತ್ತು ನೂರಾರು ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಡಂಬಳ, ಸಾಕ್ರುಬಾಯಿ ಗೋಸಾವಿ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಮಂಜುನಾಥ ಶ್ರೀಗಿರಿ, ರಿಜ್ವಾನ ಮುಲ್ಲಾ, ಮೈಮುನ ಬೈರಕದಾರ,ದಾದು ಗೋಸಾವಿ, ಮಹ್ಮದಸಾಬ ಗಡಾದ, ಶಂಕ್ರ್ಪರೋಣದ, ವಿಶಾಲಕ್ಷಿ ಹಿರೇಗೌಡ್ರ, ನಜಮುನಿಸಾ ಮುರಗೋಡ, ಮಲೇಶಪ್ಪ ಕಲಾಲ, ಪ್ರೇಮಾ ಮಣ್ಣವಡರ, ಗೌರಮ್ಮದಾಸರ, ಮೀನಾಕ್ಷಿ ಗೋಸಾವಿ ಹಾಗೂ ನೂರಾರು ಸ್ಲಂ ನಿವಾಸಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 