ಸಂಸದ ಧೈರ್ಯಶೀಲ ಮಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ
Appeal to take action against MP Dareshila Mane
ಘಟಪ್ರಭಾ 24: ಬೆಳಗಾವಿಯ ಅಭಿವೃದ್ಧಿಗೆ ಹಾಗೂ ಕನ್ನಡಕ್ಕೆ ಶ್ರಮಿಸುತ್ತಿರುವ ಬೆಳಗಾವಿಯ ದಕ್ಷ, ನಿಷ್ಠಾವಂತ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ ರವರ ವಿರುದ್ಧ, ಹಕ್ಕುಚ್ಯುತಿ ಮಂಡನೆಗೆ ಮುಂದಾಗಿರುವ ಮಹಾರಾಷ್ಟ್ರದ ಸಂಸದ ಧೈರ್ಯಶೀಲ್ ಮಾನೆ ರವರ ಅಕ್ರಮವನ್ನು ಖಂಡಿಸಿ ಘಟಪ್ರಭಾದ ಮೃತ್ಯುಂಜಯ ಸರ್ಕಲ್ ದಲ್ಲಿ ಗೋಕಾಕ-ಸಂಕೇಶ್ವರ ರಾಜ್ಯ ಹೆದ್ದಾರಿ ರಸ್ತೆ ಬಂದ ಮಾಡಿ ಮಂಗಳವಾರದಂದು ಗೋಕಾಕ ಹಾಗೂ ಮೂಡಲಗಿ ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟಿಸಿ ಘಟಪ್ರಭಾ ಪೋಲಿಸ್ ಠಾಣೆಯ ಪಿ ಐ ಸಾಹೇಬರಾದ ಎಚ್ ಡಿ ಮುಲ್ಲಾ ಅವರ ಮುಖಾಂತರ ಸಂಸದ ಜಗದೀಶ ಶೆಟ್ಟರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಂಸದ ಧೈರ್ಯಶೀಲ ಮಾನೆ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ಸಂಸದರಾದ ತಾವು ಸಂಸತ್ತಿನಲ್ಲಿ ಈ ಕುರಿತು ಧ್ವನಿ ಎತ್ತಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಜೊತೆಗೆ ಕೇಂದ್ರದ ಗೃಹ ಮಂತ್ರಿಗಳಿಗೆ ತಾವು ಲಿಖಿತ ದೂರು ನೀಡಲು ಕರ್ನಾಟಕ ಸಂಸದರಿಗೆ ದೆಹಲಿ ನಿಯೋಗ ಕೊಂಡಯ್ಯಬೇಕು ಎಂದು ಸಂಸದ ಜಗದೀಶ ಶೆಟ್ಟರ ಅವರಿಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ತಮ್ಮಲ್ಲಿ ಮನವಿ ಪತ್ರದ ಮೂಲಕ ಕಳಕಳಿಯ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ, ಉಸ್ತುವಾರಿ ಅಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕಾರ್ಯಾಧ್ಯಕ್ಷ ಶೆಟ್ಟೆಪ್ಪ ಗಾಡಿವಡ್ಡರ, ಉಪಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಪ್ರದಾನ ಕಾರ್ಯದರ್ಶಿ ರೆಹಮಾನ್ ಮೂಕಾಶಿ, ತಾಲೂಕಾ ಸಂಚಾಲಕರ ಕೃಷ್ಣಾ ಬಂಡಿವಡ್ಡರ, ರವಿ ನಾವಿ, ಮಾರುತಿ ಚೌಕಶಿ, ಸಂಘಟನೆ ಕಾರ್ಯದರ್ಶಿ ಅಜೀಜ ಮೂಕಾಶಿ, ಕಾರ್ಯದರ್ಶಿ ಗಂಗಾರಾಮ ಚೌಹ್ವಾಣ, ಯಾಸಿನ್ ಮುಲ್ಲಾ, ಸಚಿನ್ ಕರವೇ ಮುಖಂಡ ಮಂಜುನಾಥ ಜೆಲ್ಲಿ, ಶಶಿ ಚೌಕಶಿ, ರಿಯಾಜ ಬಾಡಕರ, ಮಲ್ಲು ದೊಡಮನಿ, ಮಾರುತಿ ಚೌಕಾಶಿ ಪ್ರಶಾಂತ ಜಮಖಂಡಿ , ಯಲ್ಲಪ್ಪ ಅಟ್ಟಿಮಿಟ್ಟಿ, ಸಿದ್ದಪ್ಪ ತಳಗೇರಿ, ಮಲಿಕ್ ಮಾದರ್, ಮಲ್ಲೇಶ್ ಚೌಕಶಿ, ಸುರೇಶ ಚಿಗಡೊಳ್ಳಿ, ಲವಕುಶ ಕುಡ್ಡೆಮ್ಮಿ, ರಾಜು ವಗ್ಗನವರ, ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 