ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧೆ ನಾಮಕರಣಕ್ಕೆ ಮನವಿ
Appeal to rename Koppal district as Kishkindhe
ಗಂಗಾವತಿ 22: ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧ ಜಿಲ್ಲೆ ಎಂದು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಿಷ್ಕಿಂಧ ಲೋಕಸಭಾ ಕ್ಷೇತ್ರ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಪರಿಸರ ಪ್ರೇಮಿ ಕು. ಸಿಂಧು ಡಿ.ಯವರು ಹಣಕಾಸು ಸಚಿವ ನಿರ್ಮಲ ಸೀತರಾಮನ್ ಅವರಿಗು ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೂ ಕಮಲಾಪುರದಲ್ಲಿ ಮನವಿ ಸಲ್ಲಿಸಿದ್ದಾರೆ.
ಹನುಮಂತನ ನಾಡು ಶಬರಿ ವಾಸವಿದ್ದ ಬೀಡು, ಪಂಪಾಸರೋವರ ಇತರೆ ಐತಿಹಾಸಿಕ, ಬೌಗೋಳಿಕ ಹಾಗು ಪೌರಾಣಿಕವಾಗಿ ಅತ್ಯಂತ ಮಹತ್ವದ ಸ್ಥಳ ಇದಾಗಿದ್ದು, ರಾಮಾಯಣ, ಮಹಾಭಾರತದ ಕಾಲ ಘಟದಲ್ಲೂ ಈ ಸ್ಥಳ ಉಲ್ಲೇಖವಿದೆ, ಅಯೋಧ್ಯೆ ಮತ್ತು ಅಂಜನಾದ್ರಿ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಅಯೋಧ್ಯೆಗೆ ನೀಡಿದ ಪ್ರಾಮುಖ್ಯತೆಯನ್ನು ಅಂಜನಾದ್ರಿಗು ನೀಡಿ ಇಲ್ಲಿನ ಮೂಲ ಸೌಕರ್ಯ ಹೆಚ್ಚಿಸಿ ವಿಶ್ವದ ಪ್ರವಾಸಿ ತಾಣಗಲ್ಲೊಂದಾಗುವಂತೆ ಅಭಿವೃದ್ಧಿಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ದೇಶದ ಎಲ್ಲಾ ಲೋಕಸಭೆ ಹಾಗು ವಿಧಾನ ಸಭಾಗಳಲ್ಲಿ ಸುಗ್ರೀವನ ಮೂರ್ತಿ ಪ್ರತಿಷ್ಠಾಪನೆಯಾಗಬೇಕು, ಗಂಗಾವತಿ ಅಯೋಧ್ಯಾ, ಗಂಗಾವತಿ - ರಾಮೇಶ್ವರ ರೈಲುಗಳಿಗೆ ಕಿಷ್ಕಿಂಧೆ ಎಂದು ನಾಮಕರಣ ಮಾಡಬೇಕು ಎಂದು ಕೋರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 