ದನ ಮಾಂಸದ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ.
Appeal to municipal chiefs to clear beef shops.
ದನ ಮಾಂಸದ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ.
ಬ್ಯಾಡಗಿ 05 : ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿ ದನದ ಮೌಂಸ ಮಾರಾಟ ಅಂಗಡಿಗಳನ್ನು ತೆರವುಗೊಳಿಸುವಂತೆ ಸ್ಥಳೀಯ ಸಮಗಾರ ಹರಳಯ್ಯ ಸಮಾಜದ ಸಂಘದವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದರು. ಇದೆ ವೇಳೆ ಸಮಾಜದ ಮುಖಂಡ ಹಾಗೂ ನ್ಯಾಯವಾದಿ ಮಂಜುನಾಥ್ ಹಂಜಗಿ ಮಾತನಾಡಿ ಹಳೆ ಕದರಮಂಡಲಗಿ ರಸ್ತೆಯಲ್ಲಿ ಉರ್ದು ಶಾಲೆ ಮತ್ತು ಗಂಡು ಮಕ್ಕಳ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಿರುವ ಸಾರ್ವಜನಿಕ ವಾಗಿ ದನ ಗಳನ್ನು ಕಡಿದು ಮೌಂಸವನ್ನು ಮಾರಾಟ ಮಾಡುತ್ತಿದ್ದಾರೆ ಸದರಿ ಸ್ಥಳವು ಶಾಲಾ ಮಕ್ಕಳು.ಕದರಮಂಡಲಗಿ ಆಂಜನೇಯ ದೇವಸ್ಥಾನಕ್ಕೆ ಹೋಗುವ ಭಕ್ತರು ಮತ್ತು ಉಚ್ಚಂಗಮ್ಮ ದುರ್ಗಾದೇವಿ ದೇವಸ್ಥಾನ ಭಕ್ತರು ಮತ್ತು ಹಿಂದೂ ಮುಸ್ಲಿಂ ಶ್ರದ್ಧಾ ಕೇಂದ್ರವಾದ ಚಮನ್ ಷಾವಲಿ ದರ್ಗಾ ಭಕ್ತರು ದಿನನಿತ್ಯ ಸಂಚರಿಸಲು ಮೂಗಿಗೆ ಬಟ್ಟೆ ಕಟ್ಟಿಕೊಂಡು ಸಂಚರಿಸುವ ಪರಿಸ್ಥಿತಿ ಬಂದೊದಗಿದೆ ಹಾಗೂ ಸ್ಥಳೀಯ ಜಾಗವು ಪರಿಶಿಷ್ಟ ಜಾತಿಗೆ ಮೀಸಲು ಜಾಗದಲ್ಲಿ ಅನಧಿಕೃತ ವಾಗಿ ದನಗಳನ್ನು ಕಡೆದು ಮೌಂಸವನ್ನು ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ ಮತ್ತು ದೇವಸ್ಥಾನ ಹಾಗೂ ಶಾಲೆಗಳಿಗೆ ಬರುವ ಮಕ್ಕಳಿಗೆ .ಭಕ್ತಾದಿಗಳಿಗೆ ಬಹಳ ತೊಂದರೆ ಉಂಟಾಗಿದೆ ಕಾರಣ ಪುರಸಭೆಯ ಮುಖ್ಯಾಧಿಕಾರಿಗಳು ಸ್ಥಳವನ್ನು ಪರೀಶೀಲನೆ ಮಾಡಿ ಮೌಂಸದ ಅಂಗಡಿಗಳನ್ನು ಶೀಘ್ರವೇ ತೆರವುಗೊಳಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ತಾಲೂಕು ಸಂಚಾಲಕ ಚಂದ್ರಶೇಖರ್ ಗದಗ ಕರ್ ಮಾತನಾಡಿ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧವಾದರೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿಯೇ ದನದ ಮೋಸ ಮಾರಾಟವನ್ನು ರಾಜಾರೋಷವಾಗಿ ಮಾಡುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಎಚ್ಚೆತ್ತು ದನದ ಮೌಂಸ ಮಾರಾಟ ಮಾಡುವವರನ್ನು ನಿಷೇಧಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ರಾಜು ಪಂಡರಾಪುರ. ಮಾರುತಿ ಹಂಜಗಿ. ಚಮನಪ್ಪ ಅರಿಕೇರೆ, ಬುದ್ಧಿವಂತ ಹಂಜಗಿ .ಶ್ರೀಮಂತ ಬಾಗಲಕೋಟೆ ಸುಭಾಷ್ ಹಂಜಗಿ. ಅಪ್ಪು ಬಾಗಲಕೋಟೆ. ಚಂದ್ರಶೇಖರ್ ಗದಕರ. ಶಿವಪುತ್ರ್ಪ ಬೆಟಗೇರಿ. ಮಂಜುನಾಥ್ ಗದಗ್ ಕರ್ ಹಾಗೂ ಅನೇಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 