11ರಿಂದ 15ವರೆಗೆ ಮುಷ್ಕರ ಹಮ್ಮಿಕೊಳ್ಳುವದಾಗಿ ಮನವಿ

11ರಿಂದ 15ವರೆಗೆ ಮುಷ್ಕರ ಹಮ್ಮಿಕೊಳ್ಳುವದಾಗಿ ಮನವಿ Appeal to go on strike from 11 to 15


ಆಲಮೇಲ 03: ಆರೋಗ್ಯ ಇಲಾಖೆಯ ಮುಷ್ಕರದ ಸಲುವಾಗಿ ದಿನಾಂಕ 11ರಿಂದ 15ವರೆಗೆ ಮುಷ್ಕರ ಹಮ್ಮಿಕೊಳ್ಳುವದಾಗಿ ಮಂಗಳವಾರ ದಿ. 3ರಂದು ತಾಲೂಕಿನ ದಂಡಾಧಿಕಾರಿ ಮಲ್ಲಿಕಾರ್ಜುನ ಅರಕೇರಿ ಅವರಿಗೆ ಮನವಿ ಕೊಡಲಾಯಿತು.  ಆಲಮೇಲ ತಾಲೂಕಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ್ ಸಮಗ್ರವಾಗಿ ಮುಷ್ಕರದ ರೂಪರೇಷೆಗಳನ್ನು ದಂಡಾಧಿಕಾರಿಗಳಿಗೆ ಓದಿ ಹೇಳಿದರು.  

ಸಿಂದಗಿ ತಾಲೂಕ ಅಧ್ಯಕ್ಷ ಅಶೋಕ್ ತೆಲ್ಲೂರ ಹಾಗೂ ದೇವರ ಹಿಪ್ಪರಗಿ ತಾಲೂಕ ನೌಕರರ ಸಂಘದ ಅಧ್ಯಕ್ಷ ಅ ಃ ಗಡಿಗಿ ಹಾಗೂ ವುರಂದ ಸಂಘಗಳ ಮುಖಾಂತರ ಮನವಿ ಸಲ್ಲಿಸಲಾಯಿತು. ಸಾರ್ವಜನಿಕ ಆಸ್ಪತ್ರೆ ಆಲಮೇಲ ಮತ್ತು ಸಿಂದಗಿ ತಾಲೂಕಾ ನೌಕರರ ಸಂಘದ ಪದಾಧಿಕಾರಿ ಕಂದಾಯ ಅಧಿಕಾರಿ ಹಾಗೂ ನೌಕರ ಸಂಘದ ಪದಾಧಿಕಾರಿ ಅತ್ತಾರ ಸರ್ ಸಿದ್ದು ಕಡಬ ಗಾವ ಸಂತೋಷ್ ಕಾಳಶೆಟ್ಟಿ, ಸಿದ್ದಾರೂಢ ಗಾಣಿಗೇರ ಪವನ್ ಅಕ್ಕಲಕೋಟ ಸಿದ್ದು ಅಂಕಲಗಿ ಹಾಗೂ ಸಾರ್ವಜನಿಕ ಆಸ್ಪತ್ರೆ ಆಲಮೇಲ ನೌಕರರುಗಳಾದ ಉ ಖ ಪತ್ತಾರ ದತ್ತಾತ್ರೇಯ ಕುಲಕರ್ಣಿ ಸಂದೇಶ್ ಜೋಗುರ್ ಸಂತೋಷ್ ಕುಂಬಾರ್ ನಿಂಗಪ್ಪ ಬೋಡಿಕ ಉಪಸ್ಥಿತರಿದ್ದರು.