ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ
Appeal to find heirs of unidentified body
ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ
ಕೊಪ್ಪಳ 27 : ಗದಗ ರೈಲ್ವೆ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಅಕ್ಟೋಬರ್ 24 ರಂದು ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯು ಯಾವುದೋ ರೈಲು ಗಾಡಿಯ ಮುಂದೆ ಬಿದ್ದು ಮೃತಪಟ್ಟಿದ್ದು, ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ. ಈ ಬಗ್ಗೆ ಗದಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 42/2025 ಕಲಂ: 194 ಬಿ.ಎನ್.ಎಸ್.ಎಸ್. ಅಡಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಚಹರೆ:
ಮೃತ ವ್ಯಕ್ತಿಯು ಸುಮಾರು 5.5 ಅಡಿ ಎತ್ತರವಿದ್ದು, ದುಂಡನೆಯ ಮುಖ, ನೀಟಾದ ಮೂಗು, ಸಾದಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 1/2 ಇಂಚಿನಷ್ಟು ಕಪ್ಪು, ಬಿಳಿ ಮಿಶ್ರಿತ ಕೂದಲು ಹಾಗೂ 1/2 ಇಂಚಿನಷ್ಟು ಕಪ್ಪು ದಾಡಿ-ಮೀಸೆ ಇರುತ್ತವೆ. ಮೃತರ ಮೈಮೇಲೆ ಒಂದು ಬಿಳಿ ಬಣ್ಣದ ಫುಲ್ ಶರ್ಟ್, ಒಂದು ಬಿಳಿ ಕಲರಿನ ಟಿ-ಶರ್ಟ್, ಒಂದು ಕಪ್ಪು ಮತ್ತು ಬಿಳಿ ಗೆರೆಯುಳ್ಳ ನೀಲಿ ಕಲರಿನ ಲುಂಗಿ ಹಾಗೂ ಒಂದು ಚಾಕಲೇಟ್ ಕಲರಿನ ಎಲಾಸ್ಟಿಕ್ ಕಾಚಾ ಧರಿಸಿರುತ್ತಾರೆ.
ಮೇಲ್ಕಂಡ ಚಹರೆಗೆ ಹೋಲಿಕೆಯಾಗುವಂತಹ ವ್ಯಕ್ತಿ ಕಾಣೆಯಾಗಿದ್ದಲ್ಲಿ, ಸಂಬಂಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಗದಗ ರೈಲ್ವೇ ಪೊಲೀಸ್ ಠಾಣೆ ದೂ.ಸಂ: 08372-278744, ಮೊ.ಸಂ: 9480802128, ಇ-ಮೇಲ್: ರಚಿಜಚಿರಡಿಟಥಿಅಠಿ.ರಠ.ಟಿ ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ: 080-22871291 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 