ಇಟ್ಟಂಗಿ ಭಟ್ಟಿ ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ ತಹಸಿಲ್ದಾರ್ ಗೆ ಮನವಿ
Appeal to Tehsildar condemning attack on Ittangi Bhatti workers
ಇಟ್ಟಂಗಿ ಭಟ್ಟಿ ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ ತಹಸಿಲ್ದಾರ್ ಗೆ ಮನವಿ
ತಾಳಿಕೋಟಿ, 22 : ವಿಜಯಪುರದ ಗಾಂಧಿನಗರ ಸ್ಟಾರ್ ಚೌಕ ಬಳಿ ಇರುವ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಮೂವರು ದಲಿತ ಕಾರ್ಮಿಕರ ಮೇಲೆ ಮಾಲೀಕ ಮಾಡಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಅಂಬೇಡ್ಕರ್ ಸೇನೆ (ರಿ) ತಾಲೂಕ ಸಮಿತಿ ವತಿಯಿಂದ ಬುಧವಾರ ಸಿರಸ್ತೆದಾರ ಜೆ.ಆರ್. ಜೈನಾಪೂರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿಲಾಯಿತು.
ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಕಾರ್ಮಿಕರು ಸಂಕ್ರಾಂತಿ ಹಬ್ಬಕ್ಕಾಗಿ ಹೋದವರು ಮರಳುವಲ್ಲಿ ತಡವಾಗಿರುವ ಒಂದು ಸಣ್ಣ ಕಾರಣಕ್ಕಾಗಿ ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿ ಮಾಲೀಕ ಕೇಮು ರಾಠೋಡ ತನ್ನ ಸಹಚರ ರೊಂದಿಗೆ ಸೇರಿ ದಲಿತ ಸಮಾಜದ ಕಾರ್ಮಿಕರಾದ ಸದಾಶಿವ ಮಾದರ್ ಸದಾಶಿವ ಬಬಲಾದಿ ಉಮೇಶ ಮಾದರ್ ಈ ಮೂವರ ಮೇಲೆ ಪೈಪುಗಳನ್ನು ಬಳಸಿ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದಾನೆ, ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ.
ಈಗಾಗಲೇ ಈ ಹಲ್ಲೇಕೋರರನ್ನು ಪೊಲೀಸರು ಬಂದಿಸಿದ್ದಾರೆ, ಆದರೆ ಇವರು ಜಾಮೀನು ಪಡೆದುಕೊಂಡು ಹೊರಗೆ ಬಂದರೆ ಸೇಡಿನ ಮನೋಭಾವದಿಂದ ಮತ್ತೆ ಅವರ ಮೇಲೆ ಹಲ್ಲೆ ಮಾಡುವ ಅವಕಾಶಗಳಿವೆ ಆದ್ದರಿಂದ ಹಲ್ಲೆಗೆ ಒಳಗಾದ ನಮ್ಮ ಸಮಾಜದ ಕಾರ್ಮಿಕರಿಗೆ ಇಲಾಖೆಯವರು ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಈ ಸಮಯದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಸ್ಸು ಕಟ್ಟಿಮನಿ, ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿ ಮನಿ, ಕಾರ್ಯದರ್ಶಿ ಮಹದೇವ ಅಸ್ಕಿ, ಖಜಾಂಚಿಗಳಾದ ಪರಶುರಾಮ್ ತಳವಾರ, ಯಮನಪ್ಪ ನಾಯ್ಕೋಡಿ,ಪದಾಧಿಕಾರಿಗಳ ಶೇಖಪ್ಪ ಕಟ್ಟಿಮನಿ,ದ್ಯಾಮಣ್ಣ ಸೋಮನಾಳ, ಮಡು ಚಲವಾದಿ ಮತ್ತೀತರರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 