ಗರಡಿಮನೆ ನಿರ್ಮಾಣಕ್ಕೆ ಆಗ್ರಹಿಸಿ ಪಿಡಿಓಗೆ ಮನವಿ.
Appeal to PDO demanding construction of a guard house
ಗರಡಿಮನೆ ನಿರ್ಮಾಣಕ್ಕೆ ಆಗ್ರಹಿಸಿ ಪಿಡಿಓಗೆ ಮನವಿ.
ಬಾಗಲಕೋಟೆ 05: ಚಿಮ್ಮಡ ಗ್ರಾಮದ ಭೀಮನಗರದಲ್ಲಿ ಸುಸಜ್ಜಿದ ನೂತನಗರಡಿ ಮನೆ ನಿರ್ಮಿಸಬೇಕೆಂದು ಆಗ್ರಹಿಸಿ ಡಾ. ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪದಾಧಿಕಾರಿಗಳು ಇಲ್ಲಿನಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ನೀಡಿ ಒತ್ತಾಯಿಸಿದ್ದಾರೆ. ಇಲ್ಲಿನ ಪಿಡಿಓ ರವರು ವಾರ್ಡ ಸಂಖ್ಯೆ 9ರ ಆಸ್ತಿಸಂಖ್ಯೆ 918/4/1 ರಲ್ಲಿ ಗರಡಿಮನೆ ನಿರ್ಮಿಸುವುದಾಗಿ ಧ್ರಡಿಕರಣ ಪ್ರಮಾಣ ಪತ್ರ ನೀಡಿದ್ದಾರೆ. ಅದರನ್ವಯ ಬಾಗಲಕೋಟೆಯ ಪಿಆರ್‌ಇಡಿಯಿಂದ ಸಾರ್ವಜನಿಕ ಗರಡಿಮನೆ ನಿರ್ಮಾಣಕ್ಕೆ ಹತ್ತು ಲಕ್ಷರೂ.ಗಳ ಅನುದಾನವು ಈಗಾಗಲೇ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಾರಂಭಿಸಲು ವಿಳಂಬಧೋರಣೆ ಅನುಸರಿಸದೆ ಕೂಡಲೆ ಪ್ರಾರಂಭಿಸಬೇಕೆಂದು ಭೀಮಶಿ ದೊಡವಾಡ, ತೇರದಾಳ ಮತಕ್ಷೇತ್ರದ ಯೂಥಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಅಶೋಕ ಪೂಜಾರಿ, ಶಿಕ್ಷಕ ಯಲ್ಲಪ್ಪ ಬಜಂತ್ರಿ ಸೇರಿದಂತೆ ಹಲವಾರು ಜನಯುವಕರು ಒತ್ತಾಯಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 