ಮುಂಡಗೋಡ ಕೆಎಸ್‌ಆರ್ಟಿಸಿ ಬಸ್ ಘಟಕ ಅಭಿವೃದ್ಧಿಗೆ ಮನವಿ

ಮುಂಡಗೋಡ ಕೆಎಸ್‌ಆರ್ಟಿಸಿ ಬಸ್ ಘಟಕ ಅಭಿವೃದ್ಧಿಗೆ ಮನವಿ Appeal for development of Mundagoda KSRTC bus unit

 ಮುಂಡಗೋಡ 30: ಮುಂಡಗೋಡ ಕೆಎಸ್‌ಆರ್ಟಿಸಿ ಬಸ್ ಘಟಕವನ್ನು ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಮುಂಡಗೋಡ ತಾಲೂಕ ಘಟಕದಿಂದ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕ ಅಧ್ಯಕ್ಷ ಜಗದೀಶ್ ದೈವಜ್ಞ ಅವರ ನೇತೃತ್ವದಲ್ಲಿ ತಹಶೀಲ್ದಾರ ಜಿ.ಬಿ. ಭಟ್ ಅವರ ಮೂಲಕ ಮನವಿ ನೀಡಲಾಯಿತು. ಬಸ್ ಘಟಕದ ಆವರಣವನ್ನು ಕಾಂಕ್ರೀಟೀಕರಣ ಗೊಳಿಸುವುದು, ಡಿಪೋಗೆ ಹೊಸ ಬಸ್ಸುಗಳನ್ನು ಒದಗಿಸುವುದು, ಹಳೆಯ ಬಸ್ಸುಗಳಿಂದ ಉಂಟಾಗುತ್ತಿರುವ ಸಂಚಾರ ವ್ಯತ್ಯಯ ನಿವಾರಣೆ, ನಿಲ್ದಾಣಕ್ಕೆ ಅಗತ್ಯ ಸಿಬ್ಬಂದಿ ನೇಮಕ ಹಾಗೂ ಶೌಚಾಲಯಗಳ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಜಿಲ್ಲಾಧ್ಯಕ್ಷರು ಜಗದೀಶ್ ದೈವಜ್ಞ, ದುರ್ಗಪ್ಪ ಭೋವಿ, ವಿರುಪಾಕ್ಷಿ ಸಾಗರ, ಬಸವರಾಜ ಗೌಳಿ,  ಪ್ರಕಾಶ್ , ರಾಮಣ್ಣ ಗೌಳಿ, ಅರುಣ್ ,  ಮಾರುತಿ ಭೋವಿ,  ಸೇರಿದಂತೆ ಹಲವರು ಉಪಸ್ಥಿತರಿದ್ದರು.