ಬಿಸಿಯೂಟ ಯೋಜನೆಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸಿದ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ದ ಪ್ರಕರಣ ದಾಖಲಿಸಿಲು ಆಗ್ರಹಿಸಿ ಮನವಿ
Appeal demanding registration of case against agency and contractor for supplying poor quality food
ಕೊಪ್ಪಳ 26: ಬಿಸಿಯೂಟ ಯೋಜನೆಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿರುವ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ದ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯುನಿಯನ್(ಐ.ಎಫ್.ಟಿ.ಯು. ಸೇರೆ್ಡ) ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರ್ಪ ಅವರಿಗೆ ಶುಕ್ರವಾರ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ ಇವರ ಮುಖಾಂತರ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಕೊಪ್ಪಳ ಜಿಲ್ಲೆಯ ಸರಕಾರಿ ಹಾಗೂ ಅನುದಾನವನ್ನು ಪಡೆಯುವ ಖಾಸಗಿ ಶಾಲೆಗಳಿಗೆ ತೀರಾ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿರುವ ಭ್ರಷ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ದ ತಾವು ಪ್ರಕರಣವನ್ನು ದಾಖಲಿಸಬೇಕು ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ವಹಿಸಬೇಕು.ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಯು ಪೂರೈಕೆಯಾಗುತ್ತಿರುವುದು ಇದು ಇಂದು ನಿನ್ನೆಯ ಕತೆಯಲ್ಲ.ಈ ಹಿಂದೆ ಮಧ್ಯಾಹ್ನ ಉಪಹಾರ ಯೋಜನೆಯ / ಬಿಸಿಯೂಟ ಅಧಿಕಾರಿಗಳಿಗೆ ಕಳಪೆ ರೇಷನ್ ಕುರಿತಂತೆ ಹಲವಾರು ಬಾರಿ ತಿಳಿಸಿದರೂ.
ಅವರು ನಮ್ಮಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ , ಮಕ್ಕಳಿಗೆ ಅದೇ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಶಾಲೆಗಳಿಗೆ ವಿತರಿಸಲಾಗುತ್ತಿದೆ. ಇದನ್ನೆ ಅಡುಗೆಗೆ ಬಳಸಲಾಗುತ್ತಿದೆ. ಕಳಪೆ ಗುಣಮಟ್ಟದ ರೇಷನನ್ನು ಬಳಕೆ ಮಾಡುತ್ತಿರುವುದರಿಂದ ಅದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ.ಮುಂಚೆ ಕೆಲವು ಶಾಲೆಯ ಮಕ್ಕಳು ಬಿಸಿಯೂಟ ಸೇವೆಯಿಂದ ಅನಾರೋಗ್ಯಕ್ಕಿಡಾಗಿ ಆಸ್ಪತ್ರೆಗೆ ದಾಖಲಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.ಇದು ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು.ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳ ಬಳಕೆಯಿಂದ ಶಾಲಾ ಮಕ್ಕಳಿಗೆ ಒಂದು ರೀತಿಯ ಸಮಸ್ಯೆಯಾದರೆ. ಬಡಪಾಯಿ ಬಿಸಿಯೂಟ ನೌಕರರಿಗೆ ಇದು ಇನ್ನೊಂದು ರೀತಿಯ ಸಮಸ್ಯೆಯಾಗಿ ಕಾಡುತ್ತಿದೆ.ಕಳಪೆ ಗುಣಮಟ್ಟದ ರೇಷನ್ ದಿಂದಾಗಿ ಅಡುಗೆಯಲ್ಲಿ ಹುಳು ಪತ್ತೆಯಾದ ಕಾರಣಕ್ಕಾಗಿ ಬಹಳಷ್ಟು ನೌಕರರು ಕೆಲಸವನ್ನು ಕಳೆದುಕೊಂಡಿದ್ದಾರೆ . ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಿದ್ದಾರೆ. ಗುತ್ತಿಗೆದಾರರು ಶಾಲೆಗಳಿಗೆ ಪೂರೈಕೆ ಮಾಡಿದ ರೇಷನ್ನಿನಲ್ಲಿ ವಿಪರೀತ ಕಸಕಡ್ಡಿ.ನುಸಿ. ಬಾಲಹುಳ.ಇಲಿ.ಹೆಗ್ಗಣಗಳ ಇಕ್ಕಿ ಇರುವುದನ್ನು ನೀವು ಈಗಲೂ ನೋಡಬಹುದು.
ಇವತ್ತು ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಇದೆ ರೇಷನ್ ಇರುವುದನ್ನು ಕಾಣಬಹುದಾಗಿದೆ. ಈ ರೇಷನ್ ಸ್ವಚ್ಚಗೊಳಿಸುವುದು ಕಷ್ಟದ ಕೆಲಸ ಹಾಗೂ ಅದು ಅಡುಗೆಗೆ ಬಳಸಲು ಯೋಗ್ಯವಲ್ಲ ಅಂತ ಗೊತ್ತಿದ್ದರೂ ಅದನ್ನೆ ಸ್ವಚ್ಚಗೊಳಿಸಿ.ಅಡುಗೆಗೆ ಬಳಸಲು ಅಧಿಕಾರಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಅಡುಗೆಯವರ ಮೇಲೆ ಒತ್ತಡವನ್ನು ಹಾಕುತ್ತಾರೆ. ಅವರು ಹೇಳಿದಂತೆ ಕೇಳದಿದ್ದರೆ ಅಡುಗೆ ಕೆಲಸದಿಂದ ತೆಗೆದು ಹಾಕುವುದಾಗಿ. ಮೇಲಾಧಿಕಾರಿಗಳಿಗೆ ನಿಮ್ಮ ಮೇಲೆ ದೂರು ನೀಡುವುದಾಗಿ ಹೇಳಿ ಅಡುಗೆಯವರಿಗೆ ಬೆದರಿಕೆಯನ್ನು ಹಾಕಲಾಗುತ್ತಿದೆ.ಅಡುಗೆಯವರು ಅದೇಷ್ಟೆ ಸ್ವಚ್ಚ ಮಾಡಿದರೂ ಕಾಳುಗಳ ಒಳಗಡೆ ಸೇರಿರುವಂಥ ನುಸಿ, ಬಾಲಹುಳು ಅಡುಗೆ ಮಾಡಿದ ನಂತರ ಹೊರ ಬೀಳುತ್ತವೆ.ಅಡುಗೆಯಲ್ಲಿ ನುಸಿ ಹಾಗೂ ಬಾಲಹುಳು ಪತ್ತೆಯಾದಾಗ. ಅದಕ್ಕೆ ಬಳಕೆಗೆ ಯೋಗ್ಯವಲ್ಲದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಿದ ಏಜೆನ್ಸಿ ಹಾಗೂ ಗುತ್ತಿಗೆದಾರರು.
ಇದಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ದ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆ ಹೊರತು ಇದಕ್ಕೆ ಜವಾಬ್ದಾರರಲ್ಲದ ಬಿಸಿಯೂಟ ನೌಕರರನ್ನು ಹೊಣೆಗಾರರನ್ನಾಗಿಸಿ ಅವರನ್ನು ಕೆಲಸದಿಂದ ತಗೆದು ಹಾಕುವುದು ಸರಿಯಲ್ಲ.ಇದಕ್ಕೆ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ನೃಪತುಂಗ ಪ್ರೌಢಶಾಲೆಯ ಪ್ರಕರಣವೆ ಸಾಕ್ಷಿ. ಈ ಶಾಲೆಯ ಅಡುಗೆಯವರನ್ನು ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಕಷ್ಟಪಟ್ಟು ಸ್ವಚ್ಚ ಮಾಡಿದಾಗಲೂ. ಅಡುಗೆಯಲ್ಲಿ ನುಸಿ ಪತ್ತೆಯಾಗಿವೆ. ಇದಕ್ಕೆ ಅಡುಗೆಯವರು ಜವಾಬ್ದಾರರಲ್ಲ.ಈ ಸತ್ಯ ಗೊತ್ತಿದ್ದು ಭ್ರಷ್ಟ ಅಧಿಕಾರಿಗಳು ಅಡುಗೆಯವರನ್ನು ಹೊಣೆಗಾರರನ್ನಾಗಿಸಿ ಅವರನ್ನು ಕೆಲಸದಿಂದ ತಗೆದು ಹಾಕಿದ್ದಾರೆ. ತಾವು ಈ ನಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಿದ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ವಹಿಸಿ. ಬಿಸರಳ್ಳಿ ಗ್ರಾಮದ ನೃಪತುಂಗ ಪ್ರೌಢಶಾಲೆಯ ಬಿಸಿಯೂಟ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರು ಮತ್ತೆ ಕೆಲಸದಲ್ಲಿ ಮುಂದುವರಿಯಲು ಅವಕಾಶವನ್ನು ಮಾಡಿ ಆದೇಶವನ್ನು ನೀಡಬೇಕು ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್. ಎಸ್.ಎ.ಗಫಾರ್.ಗಾಳೆಪ್ಪ ಮುಂಗೋಲಿ.ಮಖಬೂಲ್ ರಾಯಚೂರು.ಶಿವಪ್ಪ ಹಡಪದ್ ಮುಂತಾದ ಮುಖಂಡರು ಮನವಿ ಸಲ್ಲಿಸಿ ಆಗ್ರಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 