ನಿಂಬೆಯ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಮನವಿ
Appeal demanding announcement of special package for lemon crop
ಇಂಡಿ: ಕರ್ನಾಟಕ ರಾಜ್ಯದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ನಿಂಬೆ ಬೆಳೆಗೆ ಪ್ರಸಿದ್ಧಿ ಹೊಂದಿದ ಪ್ರದೇಶವಾಗಿದೆ.ಇದನ್ನು ಮನಗಂಡು ಸರ್ಕಾರ ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆಮಾಡಿ ನಿಂಬೆ ಬೆಳೆಗಾರಿಗೆ ಸಂತೋಷ ಉಂಟುಮಾಡಿತು.ಆದರೆ ಬೆಲೆ ಕುಸಿತವಾದಾಗ ತೊಗರಿಗೆ ಕಬ್ಬಿಗೆ ಬೆಂಬಲ ಬೆಲೆ ನೀಡುವ ಸರ್ಕಾರ ನಿಂಬೆ ಬೆಲೆ ಕುಸಿತವಾದಾಗ ಅಭಿವೃದ್ಧಿ ಮಂಡಳಿ ಯಾಗಲಿ ಮತ್ತು ಸರ್ಕಾರ ನಿಂಬೆಗೆ ಮಲತಾಯಿ ಧೋರಣೆ ತೋರುವ ಸರ್ಕಾರದ ನಿರ್ಧಾರಕ್ಕೆ ಬೇಸತ್ತು ಇಂದು ಇಂಡಿ ನಗರದಲ್ಲಿ ಪಕ್ಷಾತೀತವಾಗಿ ನಿಂಬೆ ಬೆಳೆಗಾರರು ಬ್ರಹತ್ ಪ್ರತಿಭಟನೆಯನ್ನು ಶ್ರೀ ಶಾಂತೇಶ್ವರ ದೇವಾಲಯ ದಿಂದ ತಾಲೂಕಾ ಆಡಳಿತ ಕಚೇರಿಗೆವರೆಗೆ ಶಾಂತಿ ಪೂರ್ವಕವಾಗಿ ಉಪವಿಭಾಗಾಧಿಕಾರಿಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿಂಬೆ ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಇದೆ ಸಂದರ್ಭದಲ್ಲಿ ನಿಂಬೆಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ ನೀಡಿ ನಿಂಬೆ ಬೆಳೆಗಾರರಿಗೆ ಸಂಕಷ್ಟಕ್ಕೆ ಸಿಲುಕಿಸಿದ ಸರ್ಕಾರದ ಧೋರಣೆಯನ್ನು ಖಂಡಿಸಿ ವಿವಿಧ ನಾಯಕರುಗಳಾದ ಕಾಸುಗೌಡ ಬಿರಾದಾರ,ಬಿ ಡಿ ಪಾಟೀಲ, ಶ್ರೀಶೈಲಗೌಡ ಪಾಟೀಲ,ಅನೀಲ ಜಮಾದರ,ಅತ್ತಾರ ಪಟೇಲ್, ಎಸ್ ಟಿ ಪಾಟೀಲ,ಬಾಳು ಮುಳಜಿ, ಸಂತೋಷ ಕೆಂಬೋಗಿ,ಸಿದ್ದಪ್ಪ ತಳವಾರ, ಮಹಾದೇವ ಗುಡ್ಡಡಗಿ, ಯುವರಾಜ ಪಾಟೀಲ್, ನಾಗನಾಥ ಬಿರಾದರ ಯುವರಾಜ ಕೆಂಗನಾಳ,ಶಿವಶರಣ ಹಂಜಗಿ,ಮುಂತಾದವರು ಮಾತನಾಡಿದರು . ಹೋರಾಟದಲ್ಲಿ, ಹಣಮಂತರಾಯಗೌಡ ಪಾಟೀಲ, ಅಯುಬ್ ನಾಟೀಕರ, ರಾಘವೇಂದ್ರ ಕಾಪಸೆ,ಡಾ ರಮೇಶ ರಾಠೋಡ ಸಿದ್ದು ಡಂಗಾ, ದೇವೇಂದ್ರ, ಅನೀಲಗೌಡ ಬಿರಾದಾರ,ರಾಮಸಿಂಗ ಕನ್ನೂಳಿ,ಕುಂಬಾರ, ನಿಯಾಝ್ ಅಗರಖೇಡ, ಜಗನ್ನಾಥ ಇಂಡಿ,ಸುನೀಲಗೌಡ ಬಿರಾದಾರ,
ಅಶೋಕ ಅಕಲಾದಿ, ಮಂಜು ದೇವರ, ಸೋಮು ನಿಂಬರಗಿಮಠ,ಮಹಿಬೂಬ ಬೇವನೂರ,ಅಪ್ಪು ಮಂಗಳೂರು,ಅದೃಶಪ್ಪ ವಾಲಿ, ಸುಭಾಸ್ ಪಾಟೀಲ, ಕುಂಬಾರ ಸರ, ಲಕ್ಕಿ ಲಚ್ಚ್ಯಾಣ, ಯಶವಂತ ಕಾಡೇಗೋಳ, ಸುದರ್ಶನ್ ಉಪಾಧ್ಯಾಯರು,ಪಜಲು ಮುಲ್ಲಾ, ಅಂಬಣ್ಣ ಸುಣಗಾರ,,ಜುಟ್ಟು ಮರಡಿ ಜಟೇಪ್ಪ ಸಾಲೋಟಗಿ, ಸಿದ್ದಪ್ಪ ಗುನ್ನಾಪೂರ ಕೆಂಚು ನಿಂಬಾಳ, ಬಾಬು ಮೇತ್ರಿ, ಈರ್ಪ ಮಾಳಿಗೆ, ರಾಜು ಮುಲ್ಲಾ,ಸಂಜು ದಶವಂತ, ಬಾಳು ರಾಠೋಡ, ಶ್ರೀಶೈಲ ವಿಜಯಪುರ,ಗಜು ಗಿಣ್ಣಿ,ಮುಂತಾದವರು ಹೋರಾಟದಲ್ಲಿ ಉಪಸ್ಥಿತರಿದ್ದರು.ವಿವಿದ ಬೇಡಿಕೆಗಳಾದ 1.ನಿಂಬೆಗೆ ಕನಿಷ್ಠ 5000 ಬೆಂಬಲ ಬೆಲೆ ಘೋಷಿಸಬೇಕು2.ನಿಂಬೆಯನ್ನು ಅಭಿವೃದ್ಧಿ ಮಂಡಳಿಯಿಂದ ಖರೀದಿಸಬೇಕು 3.ಕೋಲ್ಡ ಸ್ಟೋರೇಜ್ ಸ್ಥಾಪನೆ ಮಾಡಬೇಕು 4.ಬೇಸಿಗೆಯ ಸಮಯದಲ್ಲಿ ಟ್ಯಾಂಕರ ಮೂಲಕ ನೀರು ಪೂರೈಕೆ ಮಾಡಬೇಕು 5.ನಿಂಬೆಗೆ ಸಂಬಂಧಪಟ್ಟ ಉಪ ಉತ್ಪನ್ನಗಳ ಕಾರ್ಖಾನೆಯ ಸ್ಥಾಪನೆಗೆ ಸರ್ಕಾರ ಕ್ರಮಕೈಗೊಳ್ಳಬೇಕು 6.ನಿಂಬೆ ಗಿಡಗಳಿಗೆ ಉಕಖ ಮಾಡಿ ಗುರುತಿಸಿ ಕಾರ್ಡ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 