ಮಾನವ ಸಾಗಾಣಿಕೆ ತಡೆ ದಿನಾಚರಣೆ: ಮಕ್ಕಳಿಗೆ ಪ್ರಮಾಣ ವಚನ

ಮಾನವ ಸಾಗಾಣಿಕೆ ತಡೆ ದಿನಾಚರಣೆ: ಮಕ್ಕಳಿಗೆ ಪ್ರಮಾಣ ವಚನ Anti-Human Trafficking Day: Pledge for children

ಮಾನವ ಸಾಗಾಣಿಕೆ ತಡೆ ದಿನಾಚರಣೆ: ಮಕ್ಕಳಿಗೆ ಪ್ರಮಾಣ ವಚನ 

ಸವಣೂರು 02: ಮಾನವ ಕಳ್ಳ ಸಾಗಾಣಿಕೆ ಕಾನೂನುಬಾಹಿರ ಅಪರಾಧ ಮತ್ತು ಅಸಂವಿಧಾನಿಕ ಚಟುವಟಿಕೆಯಾಗಿದ್ದು ಇದು ಸಮಾಜಕ್ಕೆ ಮಾರಕ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ್ ಎಸ್ ಎನ್ ಹೇಳಿದರು. 

     ತಾಲೂಕು ಕಾನೂನು ಸೇವೆಗಳ ಸಮಿತಿ,ನ್ಯಾಯವಾದಿಗಳ ಸಂಘ, ಶ್ರೀ ಗುರು ರಾಚೋಟೇಶ್ವರ ಪ್ರೌಢಶಾಲೆ ಸವಣೂರು ಇವರ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಮಕ್ಕಳಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಪ್ರಮಾಣವಚನ ಬೋಧಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ವಿ.ಬಿ ತುರುಕಾಣಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಬಲವಂತದಿಂದ, ಮೋಸದಿಂದ ಅಥವಾ ಶೋಷಣೆಗೆ ಗುರಿ ಪಡಿಸುವ ಉದ್ದೇಶದಿಂದ ಸ್ಥಳಾಂತರಿಸುವುದು ಇದಕ್ಕೆ ಮಹಿಳೆಯರು ,ಮಕ್ಕಳು ಹಾಗೂ ಶೋಷಿತ ವರ್ಗದವರು ಹೆಚ್ಚು ಬಲಿಯಾಗುತ್ತಿದ್ಧಾರೆ ಎಂದು ಹೇಳಿದರು. ಉಪನ್ಯಾಸಕರಾಗಿ ಆಗಮಿಸಿದ ನ್ಯಾಯವಾದಿಗಳಾದ ಎಸ್ ಎಸ್ ಕೇರಿಯವರ ಅವರು ಮಾನವ ಹಕ್ಕು ವಂಚಿಸಿ ಕಳ್ಳ ಸಾಗಾಣಿಕೆ ಮಾಡುವುದು, ಶೋಷಣೆ ಮಾಡುವುದು ಅಕ್ಷಮ್ಯ ಅಪರಾಧ ಇಂದಿನ ಸಮಾಜವನ್ನು ಬಾಧಿಸುತ್ತಿರುವ ಅತ್ಯಂತ ಭೀಕರ ಮತ್ತು ಅಮಾನವೀಯ ಅಪರಾಧ ಇದಾಗಿದೆ. ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಜಾಗೃತಿ ಮತ್ತು ಅರಿವು ತುಂಬಾ ಅವಶ್ಯಕ ಎಂದು ಹೇಳಿದರು.  

     ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ ಎನ್ ಅಡಿವೆಪ್ಪನವರ, ಸಹಾಯಕ ಸರ್ಕಾರಿ ಅಭಿಯೋಜಕ ಎಫ್ ಎಂ ಹಾದಿಮನಿ, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್‌ಹನುಮ ನಾಯಕ,ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.