ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
Anti-Human Trafficking Day
ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
ಯಮಕನಮರಡಿ, 01 : ಇಂದಿನ ಯುವಜನತೆ ವಿವಿಧ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಅತಿಯಾದ ಮೊಬೈಲ್ ಬಳಕೆ ಪ್ರೇಮ ಪ್ರಕರಣ, ಪೊಕ್ಸೊ ಪ್ರಕರಣ ಗಳು ಯುವ ಜನತೆಯ ದಿಕ್ಕು ತಪ್ಪಿಸುತ್ತಿವೆ, ಇಂದು ಯುವಜನತೆ ದೃತಿಗೆಡದೆ ಮುನ್ನಡೆಯಬೇಕಾಗಿದೆ ಎಂದು ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೆಶಕಿ ಸುರೇಖಾ ಪಾಟೀಲ ಹೇಳಿದರು,
ಅವರು ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಶ್ರೀಡಿ,ಬಿ,ಹೆಬ್ಬಾಳಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಿಶೊರಿಯರಿಗಾಗಿ ಮಕ್ಕಳ ಅಭಿವೃದ್ದಿ ಇಲಾಖೆ, ಮಹಿಳಾ ಕಲ್ಯಾಣ ಸಂಸ್ಥೆ, ಹಾಗೂ ವಿಹಾನ ಸಂಸ್ಥೆಗಳು ಜಂಟಿಯಾಗಿ ಏರಿ್ಡಸಿದ್ದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಕಿಶೋರಿಯರಿಗಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಕಳ್ಳಸಾಗಾಣಿಕೆ, ಭಿಕ್ಷಾಟಣೆ, ಹೆಣ್ಣು ಮಕ್ಕಳ ಮಾರಾಟ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಿಶೊರಿಯರು ಎಚ್ಚರಿಕೆ ವಹಿಸಬೆಕೆಂದರು.
ವೇದಿಕೆಯಲ್ಲಿದ್ದ ಯಮಕನಮರಡಿಯ ಪಿ,ಎಸ್,ಆಯ್, ಎಂ,ಕೆ,ಮುಗಳಿ ಮಾತನಾಡಿ ಪೋಲಿಸ ಇಲಾಖೆಯ ಮೂಲಕ ಮಹಿಳೆಯರ ಸುರಕ್ಷತೆ, ಸೈಬರ ಕೈಂ, ಡಿಜಿಟಲ್ ಸುರಕ್ಷತೆ ಬಗ್ಗೆ ಜಾಗೃತೆಯನ್ನು ಮೂಡಿಸುತ್ತಿದ್ದರೂ ನಿರಂತರವಾಗಿ ಕನುನೂ ಬಾಹಿರವಾಗಿ ಹಲವಾರು ಚಟುವಟಿಕೆಗಳು ನಡೆಯುತ್ತಿವೆ ಯುವಜನೆ ಮುಜಾಗೃತಾ ಕ್ರಮಗಳು ಅಪರಾಧ ತಡೆಗೆ ದಿಕ್ಸೂಚಿಯಾಗುತ್ತವೆ ಆದ್ದರಿಂದ ಯುವ ಜನತೆಯ ಜಾಗೃತಿ ಅತಿ ಮುಖ್ಯ ಎಂದರು.
ವೇದಿಕೆಯಲ್ಲಿ ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಮಹಾದೇವ ಕೋಳಿ, ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಂ,ಎಂ,ಮಗದುಮ್ಮ, ವಹಿಸಿದ್ದರು, ಕಾರ್ಯಕ್ರಮದಲ್ಲಿ ಮಹಾವೀರ ಸನಕಿ, ಸುಭಾಷ ಹೆಬ್ಬಳಿ, ವೈಜಯಂತಿ ಚೌಗಲಾ, ರೇಖಾ ಬೆಣಿವಾಡ, ಎ,ಎಮ್,ಕರ್ನಾಚಿ, ಮುಂತಾದವರು ಉಪಸ್ಥಿತರಿದ್ದರು,
ಕಾರ್ಯಕ್ರಮವನ್ನು ಶ್ರೀಮತಿ ದಾನಮ್ಮಾ ಕೊಣ್ಣೂರಿ ನಿರೂಪಿಸಿ ಕೊನೆಯಲ್ಲಿ ಶಿವಾನಂದ ಮಠಪತಿ ವಂದಿಸಿದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 