ಗದಗ ಗ್ರಾಮೀಣ ವಲಯದ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧರಣ ಸಭೆ
Annual General Meeting of Gadag Rural Teachers' Cooperative Society
ಗದಗ ಗ್ರಾಮೀಣ ವಲಯದ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧರಣ ಸಭೆ
ಗದಗ 29: ಶಿಕ್ಷಕರ ಆರ್ಥಿಕ ಸ್ವಾಯತ್ತತೆ ಮತ್ತು ತನ್ಮೂಲಕ ವೈಯುಕ್ತಿಕ ಸಮಸ್ಯೆಗಳಿಗೆ ಪರಿಹಾರವಾಗಿ ಆರ್ಥಿಕ ಭದ್ರತೆ ಒದಗಿಸುವಲ್ಲಿ ಗ್ರಾಮೀಣ ವಲಯದ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘ ಸಹಕಾರಿಯಾಗಿದೆ ಎಂದು ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಅವರು ಹೇಳಿದರು.
ಅವರು ಗದಗ ಗ್ರಾಮೀಣ ವಲಯದ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ 38 ನೆಯ ವರ್ಷದ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಪ್ರಗತಿ ಕುರಿತು ಅಭಿಮಾನ ವ್ಯಕ್ತ ಪಡಿಸಿ ಮಾತನಾಡಿ, ಸಂಘದ ಸದುಪಯೋಗ ಪಡೆದು ಶಿಕ್ಷಕರು ಅರ್ಥಿಕವಾಗಿ ಸಬಲತೆ ಜೊತೆಗೆ ಸ್ವಾವಲಂಬ ಜೀವನ ನಿರ್ವಹಿಸಿಬೇಕು ಯಾವುದೆ ಹೆಚ್ಚಿನ ಭದ್ರತೆ ಇಲ್ಲದೆ ಶೀಘ್ರದಲ್ಲಿ ದೊರೆಯುವ ಸಹಕಾರ ಸಂಘದ ಹಣವನ್ನು ನಿರಂತರವಾಗಿ ಮರುಪಾವತಿ ಮಾಡುವದು ಸಹ ಸಂಘದ ಬೆಳವಣಗೆಗೆ ಪೂರಕವಾಗುತ್ತದೆ ಎಂದು ಹೇಳಿದರು.
ವಿಶ್ರಾಂತ ಡಿಡಿಪಿಐ ಎಮ್. ಎ. ರಡ್ಡೇರ ಸಹಕಾರಿ ಸಂಘದ ಬೆಳೆದು ಬಂದ ಹೆಜ್ಜೆಯ ಗುರುತುಗಳನ್ನು ಸ್ಮರಿಸಿದರು. ಸಂಘದ ಗೌರವಾಧ್ಯಕ್ಷರು ಗದಗ ಗ್ರಾಮಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ವಿ. ನಡವಿನಮನಿ ಮಾತನಾಡಿ, ವಲಯದ ಬಹು ದೊಡ್ಡ ಶಿಕ್ಷಕರ ಪತ್ತಿನ ಸಹಕಾರಿ ಸಂಘ ಇದಾಗಿದ್ದು ಯಾವುದೆ ನೂನ್ಯತೆಗಳಿಲ್ಲದೆ ಮುನ್ನಡೆದುಕೊಂಡು ಬರುತ್ತಿರುವದು ಈ ಸಂಘದ ವಿಶೇಷತೆಯಾಗಿದೆ ಎಂದು ಹೇಳಿದರು.
ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ನೂತನ ಅಧ್ಯಕ್ಷರಾದ ಡಾ.ಬಸವರಾಜ ಬಳ್ಳಾರಿ ಹಾಗೂ ಗೌರವಾಧ್ಯಕ್ಷರಾದ ಡಿ. ಎಸ್. ತಳವಾರ ಮಾತನಾಡಿ, ಸಂಘ ಸ್ವಂತ ಕಟ್ಟಡ ಹೊಂದುವಲ್ಲಿ ಮತ್ತು ಶಿಕ್ಷಕರಿಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಶೀಘ್ರ ಸ್ಪಂದಿಸಿ ಪರ್ಯಾಯ ರೂಪದಲ್ಲಿ ಸಹಾಯ ಮಾಡಿದ ಸಂಘದ ಅಧ್ಯಕ್ಷರಾದ ಸುರೇಶ ಕೊಪ್ಪದ ಅವರ ಕ್ರಿಯಾತ್ಮಕ ಸೇವೆಯನ್ನು ಗುಣಗಾನ ಮಾಡಿದರು. ನಿರಂತರವಾಗಿ 18 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ನಿರ್ದೇಶಕರಾಗಿ ಶಿಕ್ಷಕರ ಬೇಕು ಬೇಡಿಕೆ ಈಡೆರಿಸುವಲ್ಲಿ ಇವರ ಪರಿಶ್ರಮ ಸಾರ್ಥಕ ಸಾಧನೆ ಎಂದು ಅಭಿಪ್ರಾಯ ಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರು, ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಸಂಘಟನಾ ಕಾರ್ಯದರ್ಶಿ ಮತ್ತು ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಿರಿಯ ನಿರ್ದೇಶಕರಾದ ಸುರೇಶ ಕೊಪ್ಪದ ಅವರು 1987-88ರಲ್ಲಿ ಹಂಚಿನಾಳ ಗುರುಗಳ ನೇತೃತ್ವದಲ್ಲಿ ಪ್ರಾರಂಭವಾದ ಈ ಸಂಸ್ಥೆ ಬೆಳೆದು ಹೆಮ್ಮರವಾಗಿದೆ. ಕಳೆದ 38 ವರ್ಷಗಳಿಂದ ಸಂಘದ ಬೆಳವಣಿಗೆಗೆ ಕಾರಣರಾದ ನಿರ್ದೇಶಕ ಮಂಡಳಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೇವೆಯನನ್ನು ಸ್ಮರಿಸಿದರು. ಪ್ರಾರಂಭದಲ್ಲಿ ರೂ 1,62,000 ಇದ್ದ ಶೇರು ಬಂಡವಾಳ ಇಂದು 3 ಕೋಟಿ ತಲುಪಿದೆ. ಇಂದೂ 4.38 ಲಕ್ಷ ರೂ. ಪ್ರಗತಿ ಹೊಂದಿದ್ದು ಪ್ರಸಕ್ತ ಆರ್ಥಿಕ ವರ್ಷದಲ್ಲಿ 9.30 ಡಿವಿಡೆಂಡ್ ಹಣ ವಿತರಣೆ ಮಾಡಿದ ಹೆಮ್ಮೆ ನಮ್ಮದಾಗಿದೆ. ಪ್ರತಿ ವರ್ಷವು ಎ ಗ್ರೇಡ ಲೆಕ್ಕ ತಪಾಷಣೆ ಹೊಂದಿರುವದು ನಮ್ಮ ಸಂಘದ ಪಾರದರ್ಶಕ ಆಡಳಿತ ಕೈಗನ್ನಡಿಯಾಗಿದೆ ಎಂದರು.
ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ, ಡಾ. ರವಿ ಗುಂಜೀಕರ, ಸದಸ್ಯ ಶಿಕ್ಷಕರಾದ ವೈ.ಎಫ್ ನಾಯಕ, ಎಸ್. ಎಸ್. ಗಾಣಿಗೇರ, ಎಸ್. ವಿ. ಅಂಬೋರೆ, ಎಸ್. ಎಸ್. ಹುಬ್ಬಳ್ಳಿ, ಎಸ್.ಬಿ.ಹೊರಕೇರಿ, ಎಚ್.ವೈ. ನಿಡಗುಂದಿ, ಬಿ. ಡಿ, ಜಡದೇಲಿ, ಎಮ್. ಜಿ. ರಾಠೋಡ, ಕೆ. ಎಲ್. ಚವಾಣ, ಎಮ್. ಎಚ್. ಮುಲ್ಲಾ, ವೈ.ಎಚ್. ಪ್ರಜರೆ, ಎ. ಎಸ್. ಕಮ್ಮಾರ ಇವರನ್ನು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯ ಮಕ್ಕಳನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಂಕರ ಹಡಗಲಿ, ಬಿಆರ್‌ಸಿ ಸಮನ್ವಯಾಧಿಕಾರಿಗಳಾದ ಜೆ. ಎ. ಭಾವಿಕಟ್ಟಿ. ಎನ್‌ಜಿಓ ನಿರ್ದೇಶಕರಾದ ಮಲಕಶೆಟ್ಟಿ, ಶಿಕ್ಷಕರ ಸಂಘದ ನಿರ್ದೇಶಕರಾದ ವಿರೇಶ ವಾಲ್ಮೀಕಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನಿರ್ದೇಶಕಿ ಎಸ್.ಆರ್.ಶಲವಡಿ, ಉಪಾಧ್ಯಕ್ಷರಾದ ಶ್ರೀಮತಿ ಏಳುಕೋಟಿ ಸ್ವಾಗತಿಸಿದರು. ಎಫ್. ಎಸ್. ಗಾಣಿಗೇರ ಪ್ರಾಸ್ತಾವಿಕ ಮಾತನಾಡಿದರು. ಬಿ. ಎಸ್. ಗುಜಮಾಗಡಿ ವಾರ್ಷಿಕ ವರದಿ ವಾಚನ ಮಾಡಿದರು. ಎಸ್. ಪಿ. ಕುರಿ ನಿರೂಪಿಸಿದರು. ಆರ್. ಜೆ. ತೆಗ್ಗಿನಮನಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 