ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
Annual Friendship Conference at Public School
ಕೊಲ್ಹಾರ 08: ತಾಲೂಕಿನ ಕೂಡಗಿ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಕೆಪಿಎಸ್ ಮಕ್ಕಳ ಉತ್ಸವ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಪ್ಪ ತೊರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರುಪ್ರತಿಯೊಬ್ಬ ವಿದ್ಯಾರ್ಥಿಯು ಗುಣಮಟ್ಟದ ಶಿಕ್ಷಣ ಪಡೆದರೆ ಮಾತ್ರ ಸಮಾಜ ಮತ್ತು ವ್ಯಕ್ತಿಯ ಬದುಕಿನಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿದೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಅವಶ್ಯ ಶಿಕ್ಷಕಿ ಪ್ರತಿಭಾ ತೊರವಿ ಮಾತನಾಡಿ, ’ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದು ಕಷ್ಟ. ಆದರೆ, ನಿಮ್ಮಲ್ಲಿ ಜ್ಞಾನ, ಕೌಶಲ್ಯ, ಶ್ರದ್ಧೆ ಹಾಗೂ ಶಿಸ್ತು ಇದ್ದರೆ ನೀವೂ ಯಾವದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ’ ಎಂದು ಕಿವಿಮಾತು ಹೇಳಿದರು.
ಶಿಕ್ಷಕರಾದ ಹಸನ್ ಎಡಿಗೇರಿ ಮಾತನಾಡಿ ಪ್ರತಿ ವಿದ್ಯಾರ್ಥಿಯ ಪಾಲಕರು ಮಕ್ಕಳನ್ನು ಬಹಳ ಜಾಗೃತೆಯಿಂದ, ಮೊಬೈಲ್ ನಿಂದ ದೂರ ಇಟ್ಟು ಓದಿಸಬೇಕು ನಿಮ್ಮ ನಿಮ್ಮ ಮಕ್ಕಳ ಜವಾಬ್ದಾರಿ ಶಿಕ್ಷಕರ ಜೊತೆಗೆ ಹೆಚ್ಚಿಗೆ ನಿಮಗೆ ಇರುತ್ತದೆ ಎಂದು ಪಾಲಕರನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯ ಗುರುಗಳಾದ ಎ ಎಚ್ ಹೊರ್ತಿ ಮಾತನಾಡಿಇಂದಿನ ಮಕ್ಕಳು ನಾಳಿನ ಭವಿಷ್ಯದ ಉಜ್ವಲ ನಕ್ಷತ್ರಗಳಾಗ ಬೇಕು. ಕಲಿತ ಶಾಲೆಗೆ ಹೆತ್ತವರಿಗೆ ಹೆಸರು ತರುವ ಮಕ್ಕಳು ನೀವಾಗ ಬೇಕೆಂದು, ನೀವು ಶಿಕ್ಷಣ ಪಡೆದ ಶಾಲೆಗೆ ಮುಂದೊಂದು ದಿನ ವಿಶೇಷ ಅತಿಥಿಯಾಗಿ ಆಗಮಿಸಬೇಕು ಎಂದರುಕಾರ್ಯಕ್ರಮದಲ್ಲಿ ಗಂಗಾಧರಯ್ಯ ಹಿರೇಮಠ,ಸಾಹೇಬಗೌಡ ಪಾಟೀಲ,ಭರಮಣ್ಣ ಬಿದರಿ, ಶ್ರೀಶೈಲ ಗೊಗಿಹಾಳ, ಕಾಶಿಬಾಯಿ ಉಳ್ಳಾಗಡ್ಡಿ ಅನ್ನಪೂರ್ಣ ಮಠಪತಿ, ಕಮಲಾ ಶಿಲ್ಪಿ,ಮುತ್ತು ಮಂಕಣಿ ಸೇರಿದಂತೆ ಶಾಲೆಯ ಶಿಕ್ಷಕರು ,ಸದಸ್ಯರು, ವಿದ್ಯಾರ್ಥಿನಿಯರು ,ಉಪಸ್ಥಿತರಿದ್ದರು
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 