ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ
ರಾಯಬಾಗ 02: ಪ್ರತಿಯೊಂದು ಮಗು ಶಿಕ್ಷಣ ಪಡೆಯುವಲ್ಲಿ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ ಎಂದು ಬಿಇಒ ಬಸವರಾಜಪ್ಪ ಆರ್. ಹೇಳಿದರು.ಶುಕ್ರವಾರ ತಾಲೂಕಿನ ದಿಗ್ಗೆವಾಡಿ ಗ್ರಾಮದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಗಂಗಪ್ಪ ಸಾತಪ್ಪ ಮೈಶಾಳೆ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರ ನೀಡಬೇಕೆಂದರು.ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಶೋಕ ಮೈಶಾಳೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್.ಕೆ.ಗುರವ, ಕೆನರಾ ಬ್ಯಾಂಕ ಬಾವನ ಸೌಂದತ್ತಿ ಶಾಖೆ ವ್ಯವಸ್ಥಾಪಕ ಹನುಮಂತ ನಾಯಿಕ, ಸಿ.ಬಿ.ಕೆ.ಎಸ್.ಎಸ್.ಕೆ ನಿರ್ದೇಶಕ ಮಲ್ಲಪ್ಪ ಮೈಶಾಳೆ, ಪ್ರಕಾಶ ಮೈಶಾಳೆ, ವಿವೇಕಾನಂದ ಭೋಸ್ಲೆ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.ಮುಖ್ಯ ಶಿಕ್ಷಕ ಎಮ್.ಎಸ್.ಪಾಟೀಲ ಸ್ವಾಗತಿಸಿದರು, ಆರ್.ಎಮ್.ಪೂಜಾರಿ ನಿರೂಪಿಸಿದರು, ಪಿ.ಎಸ್.ಕಾಂಬಳೆ ವಂದಿಸಿದರು.