ಯಾದನವಾಡಿ-ಉಳ್ಳಗಡ್ಡಿವಾಡಿಗೆ ರೂ3 ಕೋಟಿ ಅನುದಾನ ಘೋಷಣೆ: ಪ್ರಕಾಶ ಹುಕ್ಕೇರಿ

ಯಾದನವಾಡಿ-ಉಳ್ಳಗಡ್ಡಿವಾಡಿಗೆ ರೂ3 ಕೋಟಿ ಅನುದಾನ ಘೋಷಣೆ: ಪ್ರಕಾಶ ಹುಕ್ಕೇರಿ Announcement of Rs 3 crore grant for Yadanavadi-Ullagaddiwadi: Prakash Hukkeri


ಚಿಕ್ಕೋಡಿ, 27 : ಯಕ್ಸಂಬಾ ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಾದನವಾಡಿ ಹಾಗೂ ಉಳ್ಳಗಡ್ಡಿವಾಡಿ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ.3.00 ಕೋಟಿ ಅನುದಾನ ಮಂಜೂರು ಮಾಡುವುದಾಗಿ ಕರ್ನಾಟಕ ನವದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ. 

ಗುರುವಾರ ಮತ್ತು ಶುಕ್ರವಾರ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ವಾರ್ಡ್‌ ಸದಸ್ಯರೊಂದಿಗೆ ಚರ್ಚಿಸಿದ ಅವರು, ಯಾದನವಾಡಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ರೂ.1 ಕೋಟಿ, ಅಂಗನವಾಡಿ ಕಟ್ಟಡ ನಿರ್ಮಾಣ, ಸ್ಮಶಾನ ಕಂಪೌಂಡ್ ಹಾಗೂ ತೋಟಪಟ್ಟಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು. 

ಉಳ್ಳಗಡ್ಡಿವಾಡಿ ಗ್ರಾಮದಲ್ಲಿ ಪರಿಮಿತಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ರೂ.1 ಕೋಟಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರಕ್ಕೆ ರೂ.50 ಲಕ್ಷ ಹಾಗೂ ಪ್ರಾಥಮಿಕ ಕನ್ನಡ ಶಾಲೆಗೆ ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವುದಾಗಿ ತಿಳಿಸಿದರು.ಇದಕ್ಕೂ ಮೊದಲು ತಮ್ಮ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ಯಾದನವಾಡಿ ಬಸ್ ನಿಲ್ದಾಣದಿಂದ ಮೂರಾರ್ಜಿ ವಸತಿ ಶಾಲೆ ಮಾರ್ಗವಾಗಿ ಕೆರೆಯವರೆಗೆ ರಸ್ತೆ ನಿರ್ಮಾಣಕ್ಕೆ ರೂ.1 ಕೋಟಿ ಹಾಗೂ ಯಕ್ಸಂಬಾ-ಸದಲಗಾ ಮುಖ್ಯರಸ್ತೆಯಿಂದ ವಿವಿಧ ತೋಟಗಳ ಮುಖಾಂತರ ಸದಲಗಾ ಮಾರ್ಗ ಸಂಪರ್ಕ ರಸ್ತೆಗೆ ರೂ.50 ಲಕ್ಷ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು. 

ಅದೇ ರೀತಿ ಉಳ್ಳಗಡ್ಡಿವಾಡಿ ಗ್ರಾಮದ ದೇಸಾಯಿ ಮತ್ತು ಸಪ್ತಸಾಗರೆ ತೋಟಗಳ ಮೂಲಕ ಯಕ್ಸಂಬಾ-ಸಿದ್ದಾಪುರವಾಡಿ ಸಂಪರ್ಕ ರಸ್ತೆಗೆ ರೂ.1 ಕೋಟಿ ಹಾಗೂ ಪ್ರಾಥಮಿಕ ಶಾಲೆಯಿಂದ ಪ್ಯಾಕ್ಟರಿ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಮಂಜೂರಾಗಿದೆ. ಗ್ರಾಮಗಳ ಎಲ್ಲಾ ಅಗತ್ಯ ಕಾಮಗಾರಿಗಳಿಗೆ ಹಂತ ಹಂತವಾಗಿ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸುನೀಲ ಸಪ್ತಸಾಗರೆ, ಉಪಾಧ್ಯಕ್ಷ ವಿನೋದ ಚಿತಳೆ ಹಾಗೂ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.