ಕಬ್ಬಿನ ಬಿಲ್ ಘೋಷಣೆ ಮಾಡಿ, ಕಾರ್ಖಾನೆ ಪ್ರಾರಂಭಿಸಿ: ರೈತರಿಂದ ರಸ್ತೆ ತಡೆ
Announce sugarcane bill, start factory: Farmers block road
ಕಾಗವಾಡ, 03 : ಸಕ್ಕರೆ ಕಾರ್ಖಾನೆಗಳು ಈ ವರ್ಷ ಪ್ರತಿ ಟನ್ ಕಬ್ಬಿಗೆ 3750 ರೂಪಾಯಿ ದರ ಘೋಷಣೆ ಮಾಡಬೇಕು. ಮತ್ತು ಕಳೆದ ಹಂಗಾಮಿನಲ್ಲಿ ಪೂರೈಸಿದ ಕಬ್ಬಿನ ಬಾಕಿ ಬಿಲ್ 200 ರೂಪಾಯಿಗಳನ್ನು ಪಾವತಿಸಿಯೇ ಕಾರ್ಖಾನೆಗಳನ್ನು ಪ್ರಾರಂಭಿಸಬೇಕೆಂದು ರೈತ ಮುಖಂಡ ಶೀತಲ ಪಾಟೀಲ ಆಗ್ರಹಿಸಿದ್ದಾರೆ. ಅವರು, ಸೋಮವಾರ ದಿ. 03 ರಂದು ಪಟ್ಟಣದ ಚೆನ್ನಮ್ಮಾ ವೃತ್ತದಲ್ಲಿ ಸ್ವಾಭಿಮಾನಿ ರೈತ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರ ರೈತರು ಸೇರಿ ರಾಜ್ಯ ಹೆದ್ದಾರಿಯನ್ನು ತಡೆದು, ಪ್ರತಿಭಟನೆ ನಡೆಸಿ, ತಹಶೀಲ್ದಾರ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿ, ಕಾರ್ಖಾನೆಗಳು ದರ ಘೋಷಣೆ ಮಾಡುವಂತೆ ಒತ್ತಾಯಿಸಿ ಮಾತನಾಡುತ್ತಿದ್ದರು. ಈ ವೇಳೆ ರೈತ ಮುಖಂಡ ಸುರೇಶ ಚೌಗಲೆ, ವಕೀಲರಾದ ರಾಹುಲ ಕಟಗೇರಿ, ಬಿ.ಜೆ. ಮೋಳೆ, ಡಾ. ಅಮೋಲ ಸರಡೆ ಮುಂತಾದವರು ಮಾತನಾಡಿ, ಕಾರ್ಖಾನೆಗಳ ಧೋರಣೆಗಳನ್ನು ಟೀಕಿಸಿದರು. ಮತ್ತು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ರೈತರು, ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ, ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ ರವೀಂದ್ರ ಹಾದಿಮನಿ, ಮಾತನಾಡಿ, ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಈ ವೇಳೆ ಗ್ರೇಟ್-2 ತಹಶೀಲ್ದಾರ ರೇಷ್ಮಾ ಜಕಾತಿ, ನಿವೃತ್ತ ಶಿಕ್ಷಕ ಎಂ.ಬಿ. ಉದಗಾಂವೆ, ಕಾಕಾ ಪಾಟೀಲ, ವಿನಾಯಕ ಚೌಗಲೆ, ಸಿದ್ದು ವಡೆಯರ, ರಾಜು ಪಾಟೀಲ, ಅಶೋಲ ಪಾಟೀಲ, ಕಾಕಾ ಚೌಗುಲೆ, ರಾಜು ಕರವ, ಸಚೀನ ಕವಟಗೆ, ಅಜೀತ ಕರವ, ಬಾಬಾಸಾಬ ಚೌಗುಲೆ, ಪೋಪಟ ಪಾಟೀಲ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಬ್ಬು ಬೆಳೆಗಾರ ರೈತರು, ಸ್ವಾಭಿಮಾನಿ ರೈತ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 