ಅನ್ನ ಭಾಗ್ಯದ ಅಕ್ಕಿ ಹೊರ ರಾಜ್ಯಗಳಿಗೆ ಮಾರಾಟ: ಕೃಷಿ ಕೂಲಿಕಾರ ಸಂಘ ಆರೋಪ
Anna Bhagya rice sold to outside states: Agricultural Workers' Association alleges
ಅನ್ನ ಭಾಗ್ಯದ ಅಕ್ಕಿ ಹೊರ ರಾಜ್ಯಗಳಿಗೆ ಮಾರಾಟ: ಕೃಷಿ ಕೂಲಿಕಾರ ಸಂಘ ಆರೋಪ
ಕೊಪ್ಪಳ 04: ಕೇಂದ್ರ ಮತ್ತುರಾಜ್ಯ ಸರ್ಕಾರ ಬಡವರು ಹಸಿವಿನಂದ ಇರಬಾರದುಎಂದು ಪಡಿತರ ವ್ಯವಸ್ಥೆಯ ಮೂಲಕ ಅಕ್ಕಿಯನ್ನು ಪೂರೈಕೆ ಮಾಡುತ್ತಿದ್ದು, ಇದನ್ನು ಸರ್ಕಾರದ ಅಧಿಕಾರಿಗಳು ಮತ್ತು ವಾಣಿಜ್ಯೋದ್ಯಮಿಗಳು ಸೇರಿಕೊಂಡು ಪಡಿತರಅಕ್ಕಿಯನ್ನು ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕರಿಗೆ ಮನವಿ ಸಲ್ಲಿಸಿದರು. ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿನ ಸರ್ಕಾರದ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರಅಕ್ಕಿಯನ್ನುದಾಸ್ತಾನು ಮಾಡಿ ಸದರಿ ಪಡಿತರಅಕ್ಕಿಯನ್ನು ಹೊರದೇಶಕ್ಕೆ ಸಾಗಾಣಿಕೆ ಮಾಡುವ ಹುನ್ನಾರ ನಡೆದಿರುತ್ತದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಕೊಪ್ಪಳ ಮಾದ್ಯಮಕ್ಕೆ ತಿಳಿಸಿದ್ದಾರೆ.
ಇದೆ ರೀತಿಯಾಗಿ ಅಕ್ರಮದಾಸ್ತಾನ ಮಾಡಿದವರ ಮೇಲೆ ಯಾವುದೆಕ್ರಮ ಕೈಗೊಳ್ಳದೆ ಕೇವಲ ಅಧಿಕಾರಿಗಳ ಮೇಲೆ ಕ್ರಮಕೈಗೊಂಡಿದ್ದು ನೋಡಿದರೆ ಇದರಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಭಾವಿ ವಾಣಿಜ್ಯೋದ್ಯಮಿಗಳು ಕೂಡ ಶಾಮೀಲಾಗಿರುವುದುಕಂಡು ಬರುತ್ತದೆ, ಇದನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿಖಂಡಿಸುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸಮಗ್ರವಾಗಿತನಿಖೆ ಮಾಡಿ, ಅಕ್ರಮವಾಗಿ ಪಡಿತರಅಕ್ಕಿಯನ್ನುದಾಸ್ತಾನ ಮಾಡಿರುವ ವಾಣಿಜ್ಯೋದ್ಯಮಿಗಳನ್ನು ಪತ್ತೆ ಹಚ್ಚಿ ವಾಣಿಜ್ಯೋದ್ಯಮಿಗಳ ಮೇಲೆ ಮತ್ತುಇದಕ್ಕೆ ಸಹಾಯ ಸಹಕಾರ ನೀಡಿದಅಧಿಕಾರಿಗ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 