ಅಂಜುಮನ್ ಸಂಸ್ಥೆಯ ಸದಸ್ಯರಿಗೆ ಪೋಲಿಸ್ ಠಾಣೆಯಲ್ಲಿ ಸನ್ಮಾನ
Anjuman members felicitated at police station
ಹಾವೇರಿ 31 : ನಗರದ ಅಂಜುಮನ್ ಸಂಸ್ಥೆಯ ಸದಸ್ಯರಿಗೆ ಹಾವೇರಿ ಶಹರ ಪೊಲೀಸ್ ಠಾಣೆಯ ಸಿಪಿಐ ಮೋತಿಲಾಲ ಪವಾರ ಹಾಗೂ ಸಿಬ್ಬಂದಿ ವರ್ಗದವರಿಂದ ನಗರದ ಪೋಲಿಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಿಸಿ ಮಾತನಾಡಿದ ಮೋತಿಲಾಲ ಪವಾರ ಅವರು ಅಂಜುಮನ್ ಸಂಸ್ಥೆಯ ಸರ್ವ ಸದಸ್ಯರು ಮೂರು ವರ್ಷಗಳಿಂದ ಉತ್ತಮ ಕಾರ್ಯ ಮಾಡಿದ್ದು,ನಮ್ಮ ಇಲಾಖೆಗೆ ಸಹಕರಿಸಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉತ್ತಮ ಕಾರ್ಯ ಕೆಲಸಗಳನ್ನು ಮಾಡುತ್ತಿದ್ದು ಸೌಹಾರ್ದತೆ ಮೂಡಲು ಸಹಕಾರಿಯಾಗುತ್ತಿದ್ದಾರೆ ಎಂದು ಶುಭ ಹಾರೈಸಿದರು .ಈ ಸಂದರ್ಭದಲ್ಲಿಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರಾದ ಇರ್ಫಾನ್ ಖಾನ್ ಪಠಾಣ,ಉಪಾಧ್ಯಕ್ಷರಾದ ಅನವರ್ ಕಡೆಮನಿ, ಚಮನ್ ಶರೀಫ್ ಮುಲ್ಲಾ, ಕಾರ್ಯದರ್ಶಿಯಾದ ಮುಜಫರ್ ಕೊಟ್ಟಿಗೆರಿ, ಸದಸ್ಯರುಗಳಾದ ಜಮೀರ್ ಜಿಗರಿ, ಸಾಧಿಕ್ ಸವಣೂರ, ವಾಷಿಂ ಸನ್ನು ಖಾನನವರ, ಬಾಬುಲಾಲ್ ಬಾಲೇಬಾಯಿ, ಹಜರತ್ ಅಲಿ ತಶಿಲ್ದಾರ್, ಖಮರ್ ಕಲ್ಯಾಣಿ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಸದಸ್ಯರು, ಮುಖಂಡರು ಹಾಗೂ ಶಹರ ಪೋಲಿಸ್ ಠಾಣೆಯ ಕಾರ್ಯವೃಂದದವರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 