ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲೆ ಅಂಜಲಿ ಮಾನೆರವರಿಗೆ “ವಿಶೇಷ ಗೌರವ ಪುರಸ್ಕಾರ” ಪ್ರಧಾನ

ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲೆ ಅಂಜಲಿ ಮಾನೆರವರಿಗೆ “ವಿಶೇಷ ಗೌರವ ಪುರಸ್ಕಾರ” ಪ್ರಧಾನ Anjali Mane, Principal of Balamandir High School, was awarded the “Special Honorary Award” by the C

 

ಕಾರವಾರ 27: ಕರ್ನಾಟಕರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕಾರವಾರ (ಉ.ಕ.)ಇವರ ವತಿಯಿಂದ ಆಯೋಜಿಸಲಾದ ‘ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಸುಧಾರಣಾ ಸಭೆ ಹಾಗೂ ಸಭಾಪತಿಗಳಿಗೆ ಗೌರವ ವಂದನೆ’ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಸಮ್ಮೇಳನದಲ್ಲಿ, ಕರ್ನಾಟಕ ವಿಧಾನ ಪರಿಷತ್ತಿನ ಗೌರವಾನ್ವಿತ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿಅವರಿಂದ ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲೆ ಅಂಜಲಿ ಮಾನೆಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ಬದ್ಧತೆ ಮತ್ತು ಶ್ರಮವನ್ನು ಮನಗಂಡು “ವಿಶೇಷ ಗೌರವ ಪುರಸ್ಕಾರ” ನೀಡಿ ಸನ್ಮಾನಿಸಲಾಯಿತು. ಈ ಗೌರವಾನ್ವಿತ ಸನ್ಮಾನವನ್ನು ಹರ್ಷದಿಂದ ಸ್ವಾಗತಿಸಿ, ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ  ಎಸ್‌.ಪಿ.ಕಾಮತ, ಉಪಾಧ್ಯಕ್ಷ  ಎ.ಜಿ. ಹಳದಿಪುರ, ಕಾರ್ಯದರ್ಶಿ  ಆರ್‌.ಎಸ್‌. ಹಬ್ಬು, ಆಡಳಿತಾಧಿಕಾರಿ  ಜಿ.ಪಿ.ಕಾಮತ, ಜೊತೆಗೆ ಬಾಲಮಂದಿರ ಪ್ರೌಢಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.