ಮಕ್ಕಳಿಗೆ ಮೊದಲನೇ ತಾಯಿ ಎಂದರೆ ಅಂಗನವಾಡಿ ಶಿಕ್ಷಕರು ಮತ್ತು ಕಾರ್ಯಕರ್ತರು ಮಕ್ಕಳ ಮತ್ತು ದೇಶದ ನಾಡಿನ ಪೂರ್ವ ಪ್ರಾಥಮಿಕ ಭವಿಷ್ಯ ಅವರ ಮೇಲೆ ನಿಂತಿದೆ: ಪ್ರಕಾಶ್ ಕೋಳಿವಾಡ

ಮಕ್ಕಳಿಗೆ ಮೊದಲನೇ ತಾಯಿ ಎಂದರೆ ಅಂಗನವಾಡಿ ಶಿಕ್ಷಕರು ಮತ್ತು ಕಾರ್ಯಕರ್ತರು ಮಕ್ಕಳ ಮತ್ತು ದೇಶದ ನಾಡಿನ ಪೂರ್ವ ಪ್ರಾಥಮಿಕ  ಭವಿಷ್ಯ ಅವರ ಮೇಲೆ ನಿಂತಿದೆ: ಪ್ರಕಾಶ್ ಕೋಳಿವಾಡ Anganwadi teachers and workers are the first mothers of children. The future of the children and th

                         ರಾಣಿಬೆನ್ನೂರು 4 : ಸಮಾಜದಲ್ಲಿ ಭವಿಷ್ಯದ ನಾಗರಿಕರಾಗಿ ಬೆಳೆಯಲಿರುವ ಮಕ್ಕಳಿಗೆ ಮೊದಲನೇ ತಾಯಿ ಎಂದರೆ ಅಂಗನವಾಡಿ ಶಿಕ್ಷಕರು ಮತ್ತು ಕಾರ್ಯಕರ್ತರು ಎನ್ನುವುದನ್ನು ಯಾರು ಮರೆಯುವಂತಿಲ್ಲ. ಮಕ್ಕಳ ಮತ್ತು ದೇಶದ ನಾಡಿನ ಪೂರ್ವ ಪ್ರಾಥಮಿಕ  ಭವಿಷ್ಯ ಅವರ ಮೇಲೆ ನಿಂತಿದೆ ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.ಅವರು ರವಿವಾರ ಇಲ್ಲಿನ   ಕಾಕಿ ಜನ ಸೇವಾ ಸಂಸ್ಥೆ ಗಣೇಶೋತ್ಸವ ಮಂಟಪದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಣೆಬೆನ್ನೂರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆಯೋಜಿಸಿದ್ದ, ಅಂಗನವಾಡಿ ಮಕ್ಕಳಿಗೆ ವಿವಿಧ ಪರಿಕರಗಳ ವಿತರಣೆ ಮತ್ತು ಪೂರ್ವ ಪ್ರಾಥಮಿಕ ಮಕ್ಕಳ ಆಟಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ,  ಮಾತನಾಡಿದರು.

                         ಕಾಂಗ್ರೆಸ್ ಸರ್ಕಾರ ಬಡವರ ದೀನ ದಲಿತರ, ಅಲ್ಪಸಂಖ್ಯಾತರ, ಮತ್ತು ಯಾವುದೇ ಜಾತಿ, ಮತ, ಭೇದ, ಭಾವವಿಲ್ಲದೆ ಎಲ್ಲ ಮಕ್ಕಳಿಗೂ ಎಲ್ಲ  ರೀತಿಯ ಸಕಲ ಸವಲತ್ತುಗಳನ್ನು ಕಲ್ಪಿಸುತ್ತಾ ಬಂದಿದೆ ಎಂದರು. ಪಂಚ ಗ್ಯಾರಂಟಿ ಯೋಜನೆಗಳು, ಮತ್ತು ಮಕ್ಕಳ ಅಭಿವೃದ್ಧಿ ಪರ ಸೇವ ಕಾರ್ಯಗಳು ಸರಕಾರದ ಹೆಮ್ಮೆ ಇದರಲ್ಲಿ ಯಾವುದೇ ರಾಜಿ ಇಲ್ಲ. ಮಕ್ಕಳು ಭವಿಷ್ಯದಲ್ಲಿ ಈ ದೇಶದ ರೂವಾರಿಗಳು ಎನ್ನುವ ದೂರದೃಷ್ಟಿ ಸರಕಾರಕ್ಕೀದೆ. ದಷ್ಟ ಮತ್ತು ಪುಷ್ಟವಾಗಿ , ಬೆಳೆದು ಆರೋಗ್ಯವಂತರಾಗಿ, ಮಕ್ಕಳು ಭವಿಷ್ಯದ ಶಿಕ್ಷಣವನ್ನು ಪೂರೈಸಬೇಕಾಗಿದೆ ಎಂದರು.   

                        ಯಾರು ಅಪಪ್ರಚಾರಗಳಿಗೆ ಕಿವಿ ಕೊಡಬಾರದು. ಅಪ ಪ್ರಚಾರ, ಆರೋಪ, ಪ್ರತ್ಯಾರೋಪ ರಾಜಕೀಯದಲ್ಲಿ ಇದು ಸಹಜ, ಅವರ ಎಲ್ಲಾ ಆರೋಪಗಳಿಗೆರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು,ನಿತ್ಯವೂ  ನಡೆಯುತ್ತಿರುವ  ಸಾವಿರಾರು ಕೋಟಿ ರೂಪಾಯಿಗಳ ಅನುದಾನ ವಿತರಣೆಯೇ ಸಾಕ್ಷಿಯಾಗುತ್ತಲ್ಲಿದೆ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೇವತಿ ಹೊಸಮಠ ಅವರು, ಅಧ್ಯಕ್ಷತೆ ವಹಿಸಿ ಮಾತನಾಡಿ  ಇಲಾಖೆ ಜಿಲ್ಲೆಯಲ್ಲಿ ಸರ್ಕಾರ ನೀಡುವ ಎಲ್ಲಾ ಯೋಜನೆಗಳನ್ನು ಮಕ್ಕಳಿಗೆ ಪರಿಪೂರ್ಣವಾಗಿ ತಲುಪಿಸುವ ಗುರಿ ಇಟ್ಟುಕೊಂಡಿದ್ದೇವೆ. ಸರ್ಕಾರದ ಯೋಜನೆಗಳು ಮತ್ತು ಹೊಸ ಹೊಸ ಆವಿಷ್ಕಾರಗಳು ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಿ ಮಕ್ಕಳಲ್ಲಿ ಚಿಂತನೆ, ಮನೋಭಾವನೆ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.

                         ವೇದಿಕೆಯಲ್ಲಿ ಮಂಜನ ಗೌಡ  ಪಾಟೀಲ್, ನೀಲಕಂಠಪ್ಪ ಕುಸಗೂರ, ವೀರೇಶ್ ಮೋಟಗಿ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ್, ಶೇರುಖಾನ್ ಕಾಬೂಲಿ, ಮಲ್ಲೇಶಪ್ಪ ಮದ್ಲೇರ, ಚಂದ್ರ​‍್ಪ ಬೇಡರ, ಮಂಜುನಾಥ ಸಣ್ಣಿಂಗಣ್ಣನವರ, ಮಂಜುನಾಥ ಚಲವಾದಿ  ಸೇರಿದಂತೆ ಮತ್ತಿತರ ಗಣ್ಯರು ಇಲಾಖೆ ಸಿಬ್ಬಂದಿ ಅಂಗನವಾಡಿ ಮುಖ್ಯಸ್ಥರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಲಾವಿದೆ ವೀಣಾ ಮಾಜಿಗೌಡ್ರ ಪ್ರಾರ್ಥಿಸಿ, ಸಂಗೀತ ಸೇವೆ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪಾರ್ವತಮ್ಮ ಹುಂಡೆಕಾರ ಅವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.