ಅಂಗನವಾಡಿ ಕೇಂದ್ರ ಮತ್ತು ಅಂಬೇಡ್ಕರ್ ಕಾಲೋನಿ ಸಿ ಸಿ ರಸ್ತೆ ನಿರ್ಮಾಣ ವಿವಿಧ ಕಾಮಗಾರಿಗಳ ಚಾಲನೆ

 ಅಂಗನವಾಡಿ ಕೇಂದ್ರ ಮತ್ತು ಅಂಬೇಡ್ಕರ್ ಕಾಲೋನಿ ಸಿ ಸಿ ರಸ್ತೆ ನಿರ್ಮಾಣ ವಿವಿಧ ಕಾಮಗಾರಿಗಳ ಚಾಲನೆ Anganwadi Center and Ambedkar Colony CC Road construction various works launched

 ಅಂಗನವಾಡಿ ಕೇಂದ್ರ ಮತ್ತು ಅಂಬೇಡ್ಕರ್ ಕಾಲೋನಿ ಸಿ ಸಿ ರಸ್ತೆ ನಿರ್ಮಾಣ ವಿವಿಧ ಕಾಮಗಾರಿಗಳ ಚಾಲನೆ

ಬ್ಯಾಡಗಿ 14:  ಗ್ರಾಮಗಳು ಅಭಿವೃದ್ಧಿಯಾದಂತೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಶಾಸಕ ಬಸವರಾಜ್ ಶಿವಣ್ಣನವರ್ ಹೇಳಿದರು. ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಸುಮಾರು ಒಂದು ಕೋಟಿ 15 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಮತ್ತು ಅಂಬೇಡ್ಕರ್ ಕಾಲೋನಿ ಸಿ ಸಿ ರಸ್ತೆ ನಿರ್ಮಾಣ ಮತ್ತು ದೇವಸ್ಥಾನಗಳ ಜೀವನೋದ್ಧಾರ ಮತ್ತು ಕೆರೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಚಾಲನೆ ನೀಡಿ  ಗ್ರಾಮ ಪಂಚಾಯತಿಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಲು ಅಧಿಕಾರಿಗಳು ಜನಪ್ರತಿನಿಧಿಗಳು ಪಕ್ಷ ವೇದವಲ್ಲ ಕೆಲಸ ಮಾಡಬೇಕು ಸರ್ಕಾರದ ಯೋಜನೆಗಳು ಲಾಭ ಜನಸಾಮಾನ್ಯರಿಗೆ ತಲುಪಿದಾಗ ಕ್ಷೇತ್ರದಲ್ಲಿರುವ ಎಲ್ಲಾ ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಿ ಜಾತಿಭೇದ ಎನ್ನದೆ ಸರ್ವರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕ್ಷಮಿಸುತ್ತೇನೆ ನನಗೆ ಸಿಕ್ಕಿರುವ ಅವಕಾಶದಲ್ಲಿ ಬ್ಯಾಡಗಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕೆಲಸವನ್ನು ಮಾಡುತ್ತೇನೆ ಮತಕ್ಷೇತ್ರದ ಸರ್ವಂಗಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಮತದಾರರ ಋಣವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ತೀರಿಸುತ್ತೇನೆ ಜನತೆ ಮತ್ತು ಅಧಿಕಾರಿಗಳು ಸಹಕಾರ ನೀಡುವಂತೆ ಮನವಿ ಮಾಡಿದರು. ಗ್ರಾ ಪಂ ಅಧ್ಯಕ್ಷ ಪ್ರಕಾಶ್ ಕುಲಕರ್ಣಿ ಮಾತನಾಡಿ ಗ್ರಾಮದಲ್ಲಿ ಇನ್ನು ಕೇವಲ 10ಅ ಅಷ್ಟು ಕೆಲಸವಾಗಿದ್ದು ಇನ್ನೂ ಗ್ರಾಮದಲ್ಲಿ ನಡೆಯುವ ಸಂತೆ ಸ್ಥಳ ಅಭಿವೃದ್ಧಿಪಡಿಸಬೇಕು ಗ್ರಾಮದಲ್ಲಿ ಸ್ಮಶಾನ ನಿರ್ಮಾಣ ಮಾಡಿಕೊಡಬೇಕು ಮತ್ತು ಗ್ರಾಮದಲ್ಲಿರುವ ಗ್ರಂಥಾಲಯ ನಿರ್ಮಾಣ ಹಾಗೂ ದ್ಯಾಮವ್ವ ದೇವಿಯ ದೇವಸ್ಥಾನದ ಚೌಕಿ ಮುನೆ ನಿರ್ಮಾಣ .ಗಟಾರಗಳನ್ನು ದುರಸ್ತಿ ಮಾಡಿಕೊಡಬೇಕು ಮಲ್ಲೂರು ಮಾಸನಿಗೆ ರಸ್ತೆಯನ್ನು ನಿರ್ಮಾಣ ಮಾಡಿಸಿಕೋಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸದಸ್ಯರಾದ ವಿಠ್ಠಲ್ ಜಾಧವ್ ಬಡೇಸಾಬ್ ನದಾಫ. ಮೊಹಮ್ಮದ್ ಹನೀಫ ಪಾಟೀಲ್‌. ಶಿವಾಜಿ ಕದಂ. ಅಂಜುಮನ್ ಅಧ್ಯಕ್ಷ ಮಹಮ್ಮದ್ ಹನೀಫ್ ಮಾಳಿ.ಡಾ.ಕೆ ಸಿ ಹಿರೇಮಠ. ಪಿಡಿಒ ಹನುಮಂತಪ್ಪ ಯರೆಸಿಮಿ. ಗುತ್ತಿಗೆದಾರ ಜಾವಿದ್ ಅಲಿ ದೊಡ್ಡಮನಿ. ಮತ್ತು ಗ್ರಾಂ ಪಂ ಸಿಬ್ಬಂದಿಗಳು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.