ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅಂದರ್
Andar is a person who was selling illegal marijuana
ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅಂದರ್
ಮುಂಡಗೋಡ : ಪಟ್ಟಣದ ಬಂಕಾಪುರ ರಸ್ತೆಯ ಹೆಬ್ಬಾರ್ ನಗರ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮುಂಡಗೋಡ ಪೋಲಿಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿತನಾದ ಇಂದ್ರಾ ನಗರ ಪ್ಲಾಟಿನ್ ಸೈಯದ್ ಅಲಿ ಹುಸೇನ್ ಸಾಬ್ ಬೆಂಡಿಗೇರಿ ಎಂಬುವವ ಬಂಕಾಪುರ ರಸ್ತೆಯ ಹೆಬ್ಬಾರ್ ನಗರ ಕ್ರಾಸ್ ಬಳಿ ಸ್ಕೂಟಿಯ ಡಿಕ್ಕಿಯಲ್ಲಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಇಲ್ಲಿಯ ಪೋಲಿಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.ದಾಳಿ ವೇಳೆ ಸುಮಾರು 15000 ರೂ.ಬೆಲೆ ಬಾಳುವ 260ಗ್ರಾಂ ತೂಕದ ಗಾಂಜಾವನ್ನು ಹಾಗೂ ಗಾಂಜಾ ಮಾರಾಟಕ್ಕೆ ಬಳಸಿದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.ಈ ವೇಳೆಯಲ್ಲಿ ಸಿಪಿಐ ರಂಗನಾಥ್ ನಿಲಮ್ಮನವರ ಮುಂಡಗೋಡ, ಪಿಎಸ್‌ಐ ಪರಶುರಾಮ್ ಮಿರ್ಜಗಿ ಮುಂಡಗೋಡ ಮತ್ತು ಸಿಬ್ಬಂದಿಗಳಾದ ಕೋಟೆಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ್ ಮುಧೋಳ್, ಬಸವರಾಜ್ ಒಡೆಯರ್, ಮಂಜುನಾಥ್ ಓಣಿಕೆರಿ ಪಾಲ್ಗೊಂಡಿದ್ದರು
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 