ಸಂತೋಷ ಹೊಂಗಲರಿಗೆ ಸನ್ಮಾನ

An honor to the happy Hongals

ಸಂತೋಷ ಹೊಂಗಲರಿಗೆ ಸನ್ಮಾನ  

ಬೆಳಗಾವಿ 27: ಇತ್ತೀಚೆಗೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿಯವರ ಆದೇಶದ ಮೇರೆಗೆ ಡಾ. ಬಾಬು ಜಗಜೀವನ ರಾಂ  ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಸಂತೋಷ ಹೊಂಗಲ ರವರಿಗೆ ಬೆಳಗಾವಿ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ನಿವಾರಣೆ ಸಮಿತಿಯ ನಾಮ ನಿರ್ದೇಶೀತ  ಸದಸ್ಯರನ್ನಾಗಿ ಆಯ್ಕೆ ಮಾಡಿದರು. 

         ಬೆಳಗಾವಿ ಜಿಲ್ಲೆ ಚರ್ಮ ಕುಶಲಕರ್ಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸದಾ ಶ್ರಮಿಸುವುದಾಗಿ ಸಂತೋಷ ಹೊಂಗಲರವರು ಹೇಳಿದರು.    ನಾಥ ಪೈ ಸರ್ಕಲ್ ಶಹಾಪಪೂರ, ಬೆಳಗಾವಿಯಲ್ಲಿ ಯಳ್ಳೂರ ವೇಸ್ ಚರ್ಮಕಾರ ಯುವಕ ಮಂಡಳ ವತಿಯಿಂದ ಆಯೋಜಿಸಲಾದ ಗಣರಾಜ್ಯೋತ್ಸವ  ಕಾರ್ಯಕ್ರಮದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಿಗಮವು ಚೆನ್ನೈ ನಲ್ಲಿ ಚರ್ಮಕುಶಲಕರ್ಮಿಗಳಿಗೆ 60 ದಿನಗಳ ಉನ್ನತ ಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಏರಿ​‍್ಡಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು  ಹಾಗೂ ನಿಗಮದ ವಿವಿಧ  ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಬಲರಾಗಲು ಕರೆ ನೀಡಿದರು. 

 ಬೆಳಗಾವಿ ಚರ್ಮಕಾರ ಮಹಾಮಂಡಳದ ಅಧ್ಯಕ್ಷ ರವಿ ಶಿಂದೆ, ಮುಖಂಡರಾದ ಕಿಶೋರ ಪವಾರ, ಹಿರಾಗ ಪವಲಯಲಾಲ ಚವಾಣ, ಪರಶುರಾಮ ಘಾಡಿ, ಉದಯ ಕದಮ, ದಿನಕರ ಚವಾಣ, ಮಹಿಳಾ ಮಂಡಳದ ಪ್ರಣಾಳಿ ಶಿಂದೆ, ಮೀನಾ ಹುಬಳಿಕರ, ರೇಣುಕಾ ಶಿಂದೆ ಉಪಸ್ಥಿತರಿದ್ದರು. ಕಿಶೋರ ಪವಾರ ನಿರೂಪಿಸಿದರು, ಸದಾನಂದ ಕದಮ ವಂದಿಸಿದರು.