ಗವಿಮಠದ ಶಾಂತವನದಲ್ಲಿ ಅನ್ವೇಷಣೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ
ಕೊಪ್ಪಳ 16: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಧ್ಯಾತ್ಮ, ಸಂಸ್ಕೃತಿ, ಸಾಮಾಜಿಕ ಜಾಗೃತಿಯ ತ್ರಿವೇಣಿ ಸಂಗಮ. ಲಕ್ಷ ಲಕ್ಷ ಭಕ್ತ ಸಾಗರ ಸೇರುವ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕಳೆದ ವರ್ಷದಿಂದ ಶ್ರೀ ಗವಿಮಠದ ಶಾಂತವನದಲ್ಲಿ ಅನ್ವೇಷಣೆ ಕಾರ್ಯಕ್ರಮ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಾತ್ರಾ ಮಹೋತ್ಸವದ ಮೊದಲ ದಿನವಾದ ಇಂದು ಕಜ್ಜಿದೋಣಿಯ ಪೂಜ್ಯರಾದ ದೇವಾನಂದ ಶರಣರು ಅನ್ವೇಷಣೆ ಅಧ್ಯಾತ್ಮ ಪ್ರವಚನದಲ್ಲಿ ನಿಜಗುಣ ಶಿವಯೋಗಿಗಳವರ ಕೈವಲ್ಯ ಪದ್ಧತಿ ಐದನೇ ಪದ್ಯದಲ್ಲಿರುವ ಪಡೆವೆ ನೀ ಪರ್ವ ಮುಕ್ತಿ ಸುಖವ ವಿಷಯವನ್ನು ಕುರಿತು ಮಾತನಾಡಿದರು ಮತ್ತು ಕಾಕರಗಲ್ ಪೂಜ್ಯರಾದ ಹನುಮಂತರಾಯ ಜೀವ ಮತ್ತು ಆತ್ಮ ಅಂದರೆ ಏನು ವಿಷಯದ ಕುರಿತು ಮಾತನಾಡಿದರು. ನೂರಾರು ಭಕ್ತರು ಆಧ್ಯಾತ್ಮ ಪ್ರವಚನದಲ್ಲಿ ಭಾಗವಹಿಸಿದ್ದರು.