ನಮ್ಮ ಸಂಸ್ಕೃತಿ ನವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ: ದುಂಡಿಗೌಡ್ರ
An attempt to introduce our culture to the new generation: Dundigowdra
ನಮ್ಮ ಸಂಸ್ಕೃತಿ ನವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ: ದುಂಡಿಗೌಡ್ರ
ಶಿಗ್ಗಾವಿ 11: ಹಳ್ಳಿಗಳಲ್ಲಿ ಸಾರ್ವಜನಿಕ ಗಣೇಶನನ್ನು ಸ್ಥಾಪಿಸಿ ನಮ್ಮ ಸಂಸ್ಕೃತಿಯನ್ನು ನವ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನು ಯುವಕರು ಮಾಡುತ್ತಿದ್ದಾರೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ಬಾಡ ಗ್ರಾಮದಲ್ಲಿ ಶ್ರೀ ಬಸವೇಶ್ವರ ಗಜಾನನ ಯುವಕ ಮಂಡಳಿವತಿಯಿಂದ ಆಯೋಜಿಸಿದ ಬೈಕ್ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂತಹ ಸ್ಪರ್ಧೆಗಳನ್ನು ಏರಿ್ಡಸಿ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಅಪಘಾತದ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಅಲ್ಲದೇ ಸ್ಪರ್ಧಾಳುಗಳು ಸ್ಪರ್ಧೆಯನ್ನು ಕೇವಲ ಮನರಂಜನೆ ಎಂದೂ ಭಾವಿಸದೆ ತಮ್ಮ ದಿನನಿತ್ಯವು ಸಹಿತ ಜಾಗರೂಕತೆಯಿಂದ ಚಲಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿಕೆ.ಎಂ.ಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ಎಮ್. ಎನ್, ವೆಂಕೋಜಿ, ಗುರುನಗೌಡ ಪಾಟೀಲ, ನಜೀರ ಶೇತಸನದಿ, ಸುರೇಶ ಚನ್ನಪ್ಪನವರ, ನಾಗರಾಜ ವೆಂಕೋಜಿ, ಪ್ರವೀಣ ಚಿನ್ನಪ್ಪನವರ, ಮಂಜುನಾಥ ಸಣ್ಣಬಸಪ್ಪನವರ, ಜಗದೀಶ ದೇವಶೆಟ್ಟಿ, ಪ್ರಕಾಶ ತೊಂಡುರ,ಗುರುರಾಜ ಸಿದ್ದಪ್ಪನವರ, ಬಸವರಾಜ ಲಂಗೋಟಿ,ಸುನೀಲ ಸಿದ್ದಣ್ಣವರ, ರಮೇಶ ಬಾರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 