ಅಮೃತ-2 ಯೋಜನೆ ತಪ್ಪು ಮಾಹಿತಿ ಹಿ ನರಹರಿ ಕಟ್ಟಿ ಸ್ಪಷ್ಟನೆ
Amruta-2 project misinformation, Narahari Katti clarification
ಅಮೃತ-2 ಯೋಜನೆ ತಪ್ಪು ಮಾಹಿತಿ ಹಿ ನರಹರಿ ಕಟ್ಟಿ ಸ್ಪಷ್ಟನೆ
ಶಿಗ್ಗಾವಿ 12: ಸವಣೂರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಶ್ವತ ಕುಡಿಯುವ ನೀರಿನ ಯೋಜನೆ ಬಗ್ಗೆ ಇತ್ತೀಚೆಗೆ ಶಾಸಕ ಯಾಸೀರಖಾನ್ ಪಠಾಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ತಮ್ಮ ನಾಯಕತ್ವದಲ್ಲಿ ಶಿಗ್ಗಾವಿ, ಬಂಕಾಪೂರ ಹಾಗೂ ಸವಣೂರ ಪಟ್ಟಣಗಳಿಗೆ ಸುಮಾರು 361 ಕೋಟಿ ಮೌಲ್ಯದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮ ವರದಿಗೆ ಪ್ರತಿಕ್ರಿಯೆ ನೀಡಿದ ಯುವ ಮುಖಂಡ ನರಹರಿ ಕಟ್ಟಿ ಶಾಸಕರ ಹೇಳಿಕೆಯು ಸಂಪೂರ್ಣ ಸತ್ಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಶಾಸಕರ ಪ್ರಕಾರ, ಈ ಯೋಜನೆ ಹೊಸದು ಅಲ್ಲ; ಇದು ಕೇಂದ್ರ ಸರ್ಕಾರದ ಅಮೃತ-2 ಯೋಜನೆಯ ಭಾಗವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಅರ್ಧಭಾಗದ ವೆಚ್ಚವನ್ನು ಹೊರುತ್ತವೆ. ಈ ಯೋಜನೆಗೆ ಸಂಬಂಧಿಸಿದ ಮೂಲ ಪ್ರಸ್ತಾವನೆ ಮತ್ತು ಮಂಜೂರಾತಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗಲೇ ನಡೆದಿತ್ತು. ಆ ಅವಧಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸಹಕಾರದೊಂದಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿತ್ತು. ಅಖಂಡ ಕರ್ನಾಟಕದ ನಗರಗಳಿಗೆ ಸುಮಾರು 7200 ಕೋಟಿ ಅನುದಾನವನ್ನು ಬೊಮ್ಮಾಯಿ ಸರ್ಕಾರ ಒದಗಿಸಿತ್ತು. ಕ್ಷೇತ್ರದ ಜನರು ಅವರನ್ನು ಅಧುನಿಕ ಭಗೀರಥ ಎಂದು ಕೊಂಡಾಡಿದ್ದಾರೆ. ನರಹರಿ ಕಟ್ಟಿ ಅವರು ಮನವಿ ಮಾಡುತ್ತಾ ಜನಪ್ರತಿನಿಧಿಗಳು ನಿಖರ ಮಾಹಿತಿ ಹಂಚಿಕೊಳ್ಳುವುದು ಅತ್ಯಗತ್ಯ. ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಬದಲು, ಹಿಂದಿನ ಸರ್ಕಾರದ ಪ್ರಯತ್ನಗಳಿಗೂ ಗೌರವ ನೀಡುತ್ತಾ, ಯೋಜನೆಗಳ ನಿಜಸ್ವರೂಪವನ್ನು ಜನತೆಗೆ ತಲುಪಿಸಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ವಿಶ್ವನಾಥ ಹರವಿ, ಮುಖಂಡರಾದ ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ, ಹೊನ್ನಪ್ಪ ಹೂಗಾರ ,ಶಿವಾನಂದ ಸೊಬರದ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 