ಹಿರಿಯ ಸಾಹಿತಿ ಶಿವಾನಂದ ಬೆಳಕೂಡರ ಅಮೃತ ಮಹೋತ್ಸವ
Amrit Mahotsav of veteran writer Shivananda Belakuda
ರಾಯಬಾಗ 30: ಒಬ್ಬ ವ್ಯಕ್ತಿ ಜನರ ಚಿತ್ತದಲ್ಲಿ ಅಚ್ಚಳಿಯದೇ ಉಳಿಯಬೇಕಾದರೆ ಅವರ ನಿಚ್ಚಳವಾದ ಕಾರ್ಯಗಳೇ ಸಾಕ್ಷಿ ಎಂದು ಹಾರೂಗೇರಿಯ ಶರಣ ವಾಹಿನಿಯ ಅಧ್ಯಕ್ಷ ಐ.ಆರ್.ಮಠಪತಿ ಹೇಳಿದರು. ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ಆಂಗ್ಲ ಭಾಷೆ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಅವರ ಅಮೃತ ಮಹೋತ್ಸವ ಹಾಗೂ ಮೂಡಲ ಅಭಿನಂದನಾ ಗ್ರಂಥದ ಲೋಕಾರೆ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೆಳಕೂಡ ದಂಪತಿಗಳಿಗೆ ಶುಭ ಕೋರಿದರು.
ಜಾನಪದ ತಜ್ಞ ಬಾಲಕೃಷ್ಣ ಜಂಬಗಿಯವರು ಕೃತಿ ಲೋಕಾರೆ್ಣಗೊಳಿಸಿ ಮಾತನಾಡಿ, ಶಿವಾನಂದ ಬೆಳಕೂಡ ಅವರೊಂದಿಗಿನ ತಮ್ಮ ಒಡನಾಟದ ಹಳೆಯ ದಿನಗಳ ಮಧುರ ನೆನಪನ್ನು ಮೆಲಕು ಹಾಕುತ್ತ ಇಂದು ಸಾಹಿತಿ ಶಿವಾನಂದ ಬೆಳಕೂಡ ಅವರ ಅಮೃತ ಮಹೋತ್ಸವ, ದಾಂಪತ್ಯದ ಸ್ವರ್ಣ ಮಹೋತ್ಸವ ಹಾಗೂ ಮೂಡಲ ಅಭಿನಂದನಾ ಗ್ರಂಥದ ಲೋಕಾರೆ್ಣ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಅರ್ಥಗರ್ಭಿತವಾಗಿ ನೆರವೇರಿದ್ದು ಬಾಗೆ ನಾಡಿನ ಜನರ ಪ್ರೀತಿ ಹಾಗೂ ಸಾಂಸ್ಕೃತಿಗೆ ಸಾಕ್ಷಿಯಾಗಿದೆ ಎಂದರು. ಬೆಳಗಾವಿಯ ಸಾಹಿತಿ ಕೆ.ಎನ್.ದೊಡಮನಿ, ಗೋಕಾಕದ ಸಾಹಿತಿ ಪ್ರೋ.ಚಂದ್ರಶೇಖರ ಅಕ್ಕಿ, ಮೂಡಲಗಿ ಸಾಹಿತಿ ಬಾಲಶೇಖರ ಬಂದಿಯವರು ಮಾತನಾಡಿ ಶಿವಾನಂದ ಬೆಳಕೂಡ ಅವರು ನಡೆದು ಬಂದ ದಾರಿ, ಬಾಲ್ಯದ ನೆನಪುಗಳು, ಗುರು ಶಿಷ್ಯರೊಂದಿಗಿನ ಸಂಬಂಧದ ಕುರಿತು ವಿವರಿಸಿದರು.
ಅಧ್ಯಕ್ಷತೆಯನ್ನು ಸಾಹಿತಿ ಎಮ್.ಬಿ.ಹೂಗಾರ ವಹಿಸಿದ್ದರು. ಡಾ.ಪಿ.ಜಿ.ಕೆಂಪನ್ನವರ, ಡಾ.ವೈ.ಬಿ.ಹಿಮ್ಮಡಿ, ಶ್ರೀಶೈಲ ಹೊಸುರ, ಅಶೋಕ ಅಂಗಡಿ, ಸಾಗರ ಝೆಂಡೆನ್ನವರ, ಶೋಭಾ ಕುಲಕರ್ಣಿ ಸೇರಿದಂತೆ ಸಾಹಿತಿಗಳು, ಅಭಿಮಾನಿಗಳು, ಅಪಾರ ಶಿಷ್ಯವೃಂದ, ಪಟ್ಟಣದ ನಾಗರಿಕರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 