ಲೋಕದರ್ಶನ ವರದಿ
ಶಿರಹಟ್ಟಿ 30: ಯಳವತ್ತಿ ಗುಂಡೇಶ್ವರ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಗುರುವಾರ ಸಂಜೆ 5.30 ಗಂಟೆಗೆ ಕಡುಬಿನ ಕಾಳಗವು ಸ್ಥಳೀಯ ಭಜನಾ ಸಂಘಗಳು ಸೇರಿದಂತೆ ಮುಂತಾದ ಸಪ್ತ ಸ್ವರಗಳ ನಿನಾದದೊಂದಿಗೆ ಹಿರೇಮಠದ ಮೃತ್ಯುಂಜಯ್ಯ ಸ್ವಾಮಿಗಳು ಬೆಲ್ಲದ ಚೂರುಗಳನ್ನು ಭಕ್ತರ ಕಡೆಗೆ ಎಸೆಯುವುದರ ಮೂಲಕ ಸಂಭ್ರಮದಿಂದ ಜರುಗಿತು. ಸ್ವಾಮಿಗಳು ಎಸೆದ ಬೆಲ್ಲದ ಚೂರುಗಳನ್ನು ಭಕ್ತರು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು. ಪರಂಪರೆಯಂತೆ ಗುಂಡೇಶ್ವರನ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಗೂ ಕೊನೆಯ ಎರಡು ಸುತ್ತುಗಳ ರಥದ ಬೀದಿಯಲ್ಲಿ ಹಾಗೂ ರಥದ ಸುತ್ತದ ನೆರೆದ ಭಕ್ತರ ಕಡೆಗೆ ಬೆಲ್ಲದ ಚೂರುಗಳನ್ನು ಎಸೆದು ಸಂಭ್ರಸಿದರು.