ಜುಮ್ಮಾ ಮಸೀದಿ ಕಾಮಗಾರಿ ಸ್ಥಳಕ್ಕೆ ಅಮ್ಜದ್ ಪಟೇಲ್ ಭೇಟಿ

ಜುಮ್ಮಾ ಮಸೀದಿ ಕಾಮಗಾರಿ ಸ್ಥಳಕ್ಕೆ ಅಮ್ಜದ್ ಪಟೇಲ್ ಭೇಟಿ  Amjad Patel visits Jumma Masjid construction site

                       ಕೊಪ್ಪಳ 09: ತಾಲೂಕಿನ ಹೊಸ ಗೊಂಡಬಾಳ ಗ್ರಾಮದ ಜುಮ್ಮಾ ಮಸೀದಿ ಕಾಂಪೌಂಡ್ ಕಟ್ಟಡ ಕಾಮಗಾರಿ ಸ್ಥಳಕ್ಕೆ ಮಂಗಳವಾರದಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ  ಅಮ್ಜದ್ ಪಟೇಲ್ ರವರು ಗ್ರಾಮದ ಮುಸ್ಲಿಂ ಸಮುದಾಯದ ಕೋರಿಕೆ ಮೇರೆಗೆ ಭೇಟಿ ಮಾಡಿ ಕಾಮಗಾರಿ ಯನ್ನು ವೀಕ್ಷಿಸಿದರು, ಸದರಿ ಕಾಮಗಾರಿ ಗುಣಮಟ್ಟದಿಂದ ಸಾಗಿದ್ದು ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದರು ಗ್ರಾಮದ ಜನರ ಕೋರಿಕೆ ಮೇರೆಗೆ ಸದರಿ ಕಾಂಪೌಂಡ್ ಕಟ್ಟಡ ಕಾಮಗಾರಿ ಗಳಿಗಾಗಿ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಸಚಿವ ಜಮೀರ್ ಅಹ್ಮದ್ ರವರಲ್ಲಿ ಮನವರಿಕೆ ಮಾಡಿಕೊಂಡು ವಕ್ಫ್‌ ಇಲಾಖೆ ವತಿಯಿಂದ 10 ಲಕ್ಷ ಅನುದಾನ ಮಂಜೂರು ಮಾಡಿಸಿ ಅದರಲ್ಲಿ ಈಗಾಗಲೇ 5 ಲಕ್ಷ ಅನುದಾನ ಬಿಡುಗಡೆಗೊಂಡು ಅದರಲ್ಲಿ ಕಾಮಗಾರಿ ನಡೆಯುತ್ತಿದೆ,

                    ನಂತರದ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ಕೊಡಿಸುವುದರ ಜೊತೆಗೆ ಗ್ರಾಮದಲ್ಲಿ ಶಾದಿ ಮಹಲ್ ಕಟ್ಟಡ ಅಲ್ಲದೆ ಶೌಚಾಲಯ ಕಟ್ಟಡ ನಿರ್ಮಾಣ ಕೂಡ ನಿರ್ಮಾಣ ಮಾಡಲು ಸಂಬಂಧಿಸಿದ ಸಚಿವರಿಗೆ ಸ್ಥಳೀಯ ಶಾಸಕರಿಗೆ ಮನವರಿಕೆ ಮಾಡಿ ಅವರಿಂದ ವಿಶೇಷ ಅನುದಾನ ಕೊಡಿಸುವದಾಗಿ ಹೊಸ ಗೊಂಡಬಾಳ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್  ಪಟೇಲ್ ಭರವಸೆ ನೀಡಿದರು, ಇದೆ ವೇಳೆ ಮಸೀದಿ ಕಮಿಟಿ ಪರವಾಗಿ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಅವರೊಂದಿಗೆ ನಾಟಕ ಅಕಾಡೆಮಿ ಸದಸ್ಯ ಹಾಗೂ ಸಮಾಜದ ಮುಖಂಡ ಚಾಂದ್ ಪಾಷ ಕಿಲ್ಲೇದಾರ್ ಸೇರಿದಂತೆ ಹೊಸ ಗೊಂಡಬಾಳ ಗ್ರಾಮದ ಮುಸ್ಲಿಂ ಮುಖಂಡರು ಮಸೀದಿ ಕಮಿಟಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.