ಅಂಬಿಗರ ಚೌಡಯ್ಯನವರ ವಚನ ಜ್ಯೋತಿ ರಥಯಾತ್ರೆ
Ambigara Choudaiah's Vachana Jyoti Rath Yatra
ಹೊಸಪೇಟೆ 02: 12ನೇ ಶತಮಾನದಲ್ಲಿ ಬಸವಾದಿ ಶರಣರ ವಚನ ಕ್ರಾಂತಿಯಲ್ಲಿ ಬಾಳಿಬೆಳಗಿದ ನಿಜ ಶರಣ ಅಂಬಿಗರ ಚೌಡಯ್ಯನವರ ವಚನ ಜ್ಯೋತಿ ರಥಯಾತ್ರೆಯು ಹೊಸಪೇಟೆ ನಗರಕ್ಕೆ ಆಗಮಿಸಿದಾಗ ಗಂಗಾಮತ ಸಮಾಜದ ಮುಖಂಡರು ಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಂಡರು. ಪೂಜೆಯ ಸಲ್ಲಿಕೆಯ ನಂತರ ವಚನಜ್ಯೋತಿ ರಥಯಾತ್ರೆ ಸಂಚಾಲಕರಾದ ನಿಂಗಣ್ಣನವರು ಮಾತನಾಡಿ ಯಾತ್ರೆಯು ಡಿಸೆಂಬರ್ 07 ರಂದು ಕಲಬುರಗಿ ಜಿಲ್ಲೆಯ ಶಹಬಾದ ತಾಲೂಕಿನ ಭಂಕೂರ ಗ್ರಾಮದಿಂದ ಆರಂಭವಾಗಿ ಈಗಾಗಲೇ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಸಂಚಾರ ಮಾಡಿದ್ದು, ಜನವರಿ 14 ರಂದು ಯಾತ್ರೆ ಆರಂಭವಾದ ಮೂಲ ಸ್ಥಳದಲ್ಲಿಯೇ ಮುಕ್ತಾಯಗೊಳ್ಳಲಿದೆ ಎಂದರು. 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲಿನವರಾಗಿದ್ದ ದೋಣಿ ನಡೆಸುವ ಅಂಬಿಗ ವೃತ್ತಿ ಮಾಡುತ್ತಿದ್ದ ಚೌಡಯ್ಯನವರು ತಮ್ಮ ವಚನ ಸಾಹಿತ್ಯದ ಮುಖಾಂತರ ವಿಚಾರ ಕ್ರಾಂತಿಯ ಕಿಡಿಹಚ್ಚಿ ಅನ್ಯಾಯ, ಅಸಮಾನತೆ ಮತಾಂಧತೆ, ಮೂಡ ನಂಬಿಕೆಗಳ ವಿರುದ್ಧ ಸಿಡಿದೆದ್ದು, ಸಮಾನತೆ ಐಕ್ಯತೆ ಮೂಡಿಸಲು ಹೋರಾಡಿದರು. ತಮ್ಮ ನೇರನಡೆನುಡಿ,ನಿಷ್ಠೂರವಾದಿವಚನಕಾರರಲ್ಲಿ ಪ್ರಜ್ವಲಮಾನವಾಗಿ ಬೆಳಗುವ ದೃವತಾರೆಯಾಗಿದ್ದರೆಂದು ನುಡಿದರು.
ನಂತರ ವಿಜಯನಗರ ಜಿಲ್ಲಾ ಗಂಗಾಮತ ಸಮಾಜದ ಗೌರವಾಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ಅಂಬಿಗರ ಚೌಡಯ್ಯನವರ ವಚನಸಾಹಿತ್ಯದ ಮೂಲಕ ತಳ ಸಮುದಾಯಗಳಲ್ಲಿ ಸ್ವಾಭಿಮಾನ ಸಮಾನತೆಯ ಅರಿವು ಮೂಡಿಸುವುದೇ ವಚನಜ್ಯೋತಿ, ರಥಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಇದೇ ಜನವರಿ 14 ಮತ್ತು 15, ಸಂಕ್ರಮಣದ ಸಂದರ್ಭದಲ್ಲಿ ಚೌಡಯ್ಯನವರ ಜನ್ಮ ಹಾಗೂ ಐಕ್ಯ ಸ್ಥಳವಾದ ಸುಕ್ಷೇತ್ರ ನರಸೀಪುರ (ಚೌಡಯ್ಯದಾನಪುರ ಹಾವೇರಿ ಜಿಲ್ಲೆ)ದಲ್ಲಿ ಅಂಬಿಗರ 10ನೇ ಶರಣಸಂಸ್ಕೃತಿ ಉತ್ಸವ, ವಚನಗ್ರಂಥ ಮಹಾರಥೋತ್ಸವ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿಗಳು, ವಿವಿಧ ಸಮುದಾಯಗಳ ಮಠಾಧೀಶರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಸಮಾಜ ಬಾಂಧವರು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಸ್.ಗಾಳೆಪ್ಪ, ಬಾರಕೀರ ನಾಗರಾಜ, ಮಡ್ಡಿ ಹನುಮಂತಪ್ಪ, ಪೇಂಟರ್‌ವೆಂಕಪ್ಪ, ಉದಯಕುಮಾರ, ಗುರುರಾಜ್, ಮುಷ್ಠೂರುಮರಿಯಪ್ಪ, ಗುರುಶಾಂತ, ನರಸಾಪುರ ಮಂಜುನಾಥ, ನಂದಿಹಳ್ಳಿನಾಗರಾಜ, ಬಸವರಾಜ್, ಎಸ್.ಭರ್ಮಪ್ಪ, ಎಸ್.ನಾಗರಾಜ, ಉಮಾಪತಿ, ಎಸ್.ಯಂಕಪ್ಪ, ಅನ್ವೇರಿಹುಲುಗಪ್ಪ, ವಡ್ಡಿನ ಹುಲುಗಪ್ಪ, ಮಡ್ಡಿ ಉಮೇಶ್, ನಾಗೇಶ್ ಮುಂತಾದರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 