ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಅಂಬೇಡ್ಕರ್ ಸದಾ ಸ್ಮರಣೀಯರು
Ambedkar who laid a solid foundation for the construction of modern India will always be remembered
ಹಾನಗಲ್ 07 :ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ಇಲ್ಲಿನ ತಾಪಂ ಕಚೇರಿ ಎದುರಿನ ಪುತ್ಥಳಿಗೆ ಶಾಸಕ ಶ್ರೀನಿವಾಸ ಮಾನೆ ಪುಷ್ಪನಮನ ಸಲ್ಲಿಸಿ, ಗೌರವಾರ್ಿಸಿದರು.
ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಅಂಬೇಡ್ಕರ್ ಸದಾ ಸ್ಮರಣೀಯರು. ಸಮಾಜಕ್ಕೆ ಬೆಳಕು ತಂದ ಮಹಾಮಾನವತಾವಾದಿ ಎಲ್ಲರೂ ಸಮಾನರು,ಎಲ್ಲರಿಗೂ ಗೌರವ ಸಿಗಬೇಕು ಎಂದು ಜೀವನಪೂರ್ತಿ ಹೋರಾಡಿದರು. ಜಾತಿ ಬೇಧ, ಅಸಮಾನತೆ ನಿವಾರಿಸಲು ಮಾಡಿದ ಹೋರಾಟ ದೇಶವನ್ನು ಬದಲಿಸಿತು. ನಾವು ಇಂದು ಅನುಭವಿಸುತ್ತಿರುವ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ ಎಲ್ಲವೂ ಅಂಬೇಡ್ಕರ್ ಅವರ ಕೊಡುಗೆ ಎಂದು ತಿಳಿಸಿದರು.
ತಹಶೀಲ್ದಾರ್ ರೇಣುಕಾ ಎಸ್.ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಉಮೇಶ ಮಾಳಗಿ, ಉಮೇಶ ದೊಡ್ಡಮನಿ, ಫಯಾಜ ಲೋಹಾರ, ಭರಮಣ್ಣ ಶಿವೂರ,ಅಶೋಕ ಹಲಸೂರ, ವಸಂತ ವೆಂಕಟಾಪೂರ, ಶಿವು ತಳವಾರ, ನಾಗಪ್ಪ ಸವದತ್ತಿ, ಬಸವರಾಜ ಡುಮ್ಮನವರ, ಶಿವು ಭದ್ರಾವತಿ, ರಾಜಕುಮಾರ ಶಿರಪಂಥಿ, ಸುರೇಶ ನಾಗಣ್ಣನವರ, ಯಲ್ಲಪ್ಪ ಕಲ್ಲೇರ, ರವಿ ಜಾಲಗೇರಿ, ಬಸಣ್ಣ ವಾಲಿಕಾರ, ತಾಪಂ ಇಒ ಪರಶುರಾಮ ಪೂಜಾರ,ಸುಭಾಸ ತಳವಾರ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 