ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಯ ಹರಿಕಾರರು-ನಾಗರಾಜ ಕಂದಾರಿ
Ambedkar was the pioneer of social equality-Nagaraja Kandari
ಕೊಪ್ಪಳ 06: ನಗರದ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು. ಅಂಬೇಡ್ಕರ್ ಅವರು ಸಾಮಜಿಕ ಸಮಾನತೆಯ ಹರಿಕಾರರು ಹಾಗೂ ಈ ದೇಶ ಕಂಡ ಮಹಾನ್ ಮಾನವತಾವಾದಿ ಎಂದು ದಲಿತ ಮುಖಂಡ ನಾಗರಾಜ ಕಂದಾರಿ ತಿಳಿಸಿದರು. ಸಮ-ಸಮಾಜ ನಿರ್ಮಾಣ ಮಾಡಲು ಈ ದೇಶಕ್ಕೆ ಸುಸಜ್ಜಿತ ಸಂವಿಧಾನ ಬರೆದು ಕೊಟ್ಟಂತಹ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಆದರಿಂದ ಎಲ್ಲರು ಶಿಕ್ಷಣವಂತರಾಗಬೇಕು ಎಂದು ನಾಗರಾಜ ಕಂದಾರಿ ಕರೆ ನೀಡಿದರು. ಜೊತೆಗೆ ಎಲ್ಲಾ ಬಡ ಸಮುದಾಯದವರು ಸಂಘಟಿತರಾಗಿ ಅಂಬೇಡ್ಕರ ಅವರ ಮಾರ್ಗದಲ್ಲಿ ಮುನ್ನಡೆಯೋಣ ಎಂದು ತಿಳಿಸಿದರು. ನಂತರ ದಲಿತ ಸಂಘಟಣೆಯ ಹಿರಿಯ ಮುಖಂಡರಾದ ಡಾಽಽ ಬಿ.ಜ್ಞಾನಸುಂದರ್ ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನಶಿಲ್ಪಿ ನಮ್ಮ ದೇಶಕ್ಕೆ ಒಂದು ಒಳ್ಳೆಯ ಸಮಾನತೆಯ ಸಂವಿಧಾನವನ್ನು ಬರೆದು ಕೊಟ್ಟಂತಹ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.
ಎಲ್ಲಾ ಸಮಾಜದವರು ಅಂಬೇಡ್ಕರ್ ಅವರನ್ನು ಗೌರವದಿಂದ ಸ್ಮರಿಸಬೇಕೆಂದು ತಿಳಿಸಿದರು ಹಾಗೂ ಸರಕಾರ ಬಡ ಸಮುದಾಯಕ್ಕೆ ಸರಿಯಾದ ಮೀಸಲಾತಿ ಕೊಡಲು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀ ಆದಿಲ್ ಪಟೇಲ ಸಮಾಜದ ಮುಖಂಡರುಗಳಾದ ಸಿದ್ದರಾಮ ಹೊಸಮನಿ, ಗವಿಸಿದ್ದಪ್ಪ ಬೆಲ್ಲದ, ರಾಮಣ್ಣ ಕಂದಾರಿ, ಲಕ್ಷ್ಮಣ ಬಂಗಾರಿ, ಮಂಜುನಾಥ ಆರೆಂಟನೂರು, ಬಸವರಾಜ ಚೀಲವಾಡಗಿ, ಉಮೇಶ ಬೆಲ್ಲದ್, ಜಿ.ಕೆ ಮಂಜುನಾಥ, ಬಾಷುಸಾಬ್ ಕಮ್ಮಾರ, ಅಬ್ದುಲ್ ಜಿಲಾನ್‌ಸಾಬ್ ಶೇಖ್(ಏಖಖಖಿಅ), ಶಾಂತಕುಮಾರ ದೊಡ್ಡಮನಿ, ಮಹೇಶ ದೊಡ್ಡಮನಿ, ಚಂದ್ರು ಕಟ್ಟಿಮನಿ ಹಾಗೂ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 