ಭಾರತಕ್ಕೆ ಅಗ್ರಸ್ಥಾನ ತಂದು ಕೊಟ್ಟ ನಾಯಕ ಅಂಬೇಡ್ಕರ : ಶಾಸಕ ಸಿದ್ದು ಸವದಿ
Ambedkar, the leader who brought India to the top: MLA Siddu Savadi
ರಬಕವಿ-ಬನಹಟ್ಟಿ 26 : ವಿಶ್ವದ ಏಕೈಕ ದೊಡ್ಡ ಪ್ರಜಾಪ್ರಭುತ್ವದೇಶವಾದ ಭಾರತಕ್ಕೆ ಇಂದು ವಿಶ್ವ ಮಾನ್ಯ ದೊರೆತಿದೆ. ಇದಕ್ಕೆ ಮೂಲ ಕಾರಣವಾಗಿರುವುದು ಅಂಬೇಡ್ಕರ ರವರು ರಚಿಸಿರುವ ಸಂವಿಧಾನ. ಡಾ. ಅಂಬೇಡ್ಕರವರು ಭಾರತಕ್ಕೆ ಅಗ್ರಸ್ಥಾನ ತಂದುಕೊಟ್ಟ ಮಹಾನ ನಾಯಕ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯ ಎಸ್. ಟಿ. ಸಿ. ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ರಬಕವಿ-ಬನಹಟ್ಟಿಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಭಾರತ ಸಂವಿದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಸಚಿವರಾಗಿ ಡಾ. ಅಂಬೇಡ್ಕರವರು ದೇಶದ ಪ್ರಗತಿಯ ಪರವಾಗಿ ಮತ್ತುದೇಶದ ಎಲ್ಲಾ ವರ್ಗದಜನತೆಯ ಕ್ಷೇಮಾಭಿವೃದ್ಧಿಗಾಗಿ ಸಂವಿಧಾನವನ್ನು ರಚಿಸಿದರು. ಆಡಳಿತದ ಒಕ್ಕೂಟದ ವ್ಯವಸ್ಥೆಯಲ್ಲಿದೇಶದಕಟ್ಟಕಡೆಯ ವ್ಯಕ್ತಿಗೂನ್ಯಾಯದೊರೆಯಬೇಕೆಂಬ ಆಶಯ ಸಂವಿಧಾನದಾಗಿದೆ. ವ್ಯಕ್ತಿಗೌರವ, ದೇಶದಏಕತೆಗೆ ಮತ್ತು ಸಮಗ್ರತೆಗೆ ಸಹಕಾರಿಆಗಿದೆಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರ ಗೀರೀಶ ಸ್ವಾದಿ, ಪೌರಾಯುಕ್ತ ರಮೇಶ ಜಾಧವ, ಎಸ್.ಆರ್.ಎ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯಡಾ. ಜಿ.ಆರ್.ಜುನ್ನಾಕರ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಆಲಗೂ, ಡಾ. ಎಂ.ಎಚ್.ಶಿರಹಟ್ಪಿ. ನಗರಯೋಜನಾ ಪ್ರಾಧಿಕಾರಾಧ್ಯಕ್ಷದಾನಪ್ಪ ಹುಲಜತ್ತಿ, ಜಮಖಂಡಿ ಸಮಾಜಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕಜಗದೇವ ಪಾಸೋಡಿ,ದಲಿತ ಮುಖಂಡರಾದ ಬಸವರಾಜ ದೊಡಮನಿ, ಬಾಬು ಮಹಾಜನ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 