ಕಾರವಾರ 12 : ನವೆಂಬರ್ 16, 17 ಮತ್ತು 18ನೇ ದಿನಾಂಕಗಳಂದು ವಿದ್ಯಾಗಿರಿಯ ರತ್ನಾಕರವಣರ್ಿ ವೇದಿಕೆಯಲ್ಲಿ, ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ 15ನೇ ವರ್ಷದ ಕನ್ನಡ ನಾಡು-ನುಡಿ-ಸಂಸ್ಕೃತಿಯ ಆಳ್ವಾಸ್ ನುಡಿಸಿರಿ ಸಮ್ಮೇಳನವು ನಡೆಯಲಿದೆ ಎಂದು ಮಾಧ್ಯಮ ಸಂಯೋಜಕರಾದ ಪ್ರಸಾದ್ ಶೆಟ್ಟಿ ,ಗೌರಿ ಜೋಶಿ ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ನುಡಿಸಿರಿಯ ವಿವರ ನೀಡಿದರು. ನವೆಂಬರ 16ರಂದು ಬೆಳಿಗ್ಗೆ 8.30ರಿಂದ 9.30ರವರೆಗೆ ರಾಜ್ಯದ ಪ್ರತಿಷ್ಠಿತ 85 ಸಾಂಸ್ಕೃತಿಕ ಕಲಾ ತಂಡಗಳಿಂದ ಭವ್ಯ ಮೆರವಣಿಗೆ ನಡೆಯಲಿದೆ.
ಬೆಳಗ್ಗೆ 8.30ಕ್ಕೆ ಸಾಂಸ್ಕೃತಿಕ ಮೆರವಣಿಗೆಯನ್ನು ಬರೋಡಾದ ಶಶಿಧರ ಶೆಟ್ಟಿ ಉದ್ಘಾಟಿಸಲಿದ್ದು, ಕನರ್ಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿರುವ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಧ್ವಜಾರೋಹಣ ಗೈಯ್ಯಲಿದ್ದಾರೆ. ಕನ್ನಡ ಹಂಪಿ ವಿವಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಸವರ್ಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಕನ್ನಡದ ಖ್ಯಾತ ಸಂಶೋಧಕರಾದ ಡಾ.ಷ.ಶೆಟ್ಟರ್ ಉದ್ಘಾಟಿಸಲಿದ್ದಾರೆ ಎಂದರು.
ಸಮ್ಮೇಳನದ ಪರಿಕಲ್ಪನೆ - ಕನರ್ಾಟಕ ದರ್ಶನ :
ಪ್ರತಿ ವರ್ಷದಂತೆ ಈ ವರ್ಷವೂ ಆಳ್ವಾಸ್ ನುಡಿಸಿರಿ ಪ್ರಧಾನ ಪರಿಕಲ್ಪನೆಯೊಂದನ್ನು ಮುಂದಿಟ್ಟುಕೊಂಡು ಮುಂದುವರಿಯುತ್ತಿದೆ. ಈ ವರ್ಷದ ಪ್ರಧಾನ ಪರಿಕಲ್ಪನೆ ಕನರ್ಾಟಕ ದರ್ಶನ : ಬಹುರೂಪಿ ಆಯಾಮಗಳು ಎಂದಾಗಿದೆ. ಕನರ್ಾಟಕದ ಲಿಖಿತ ಮತ್ತು ಮೌಖಿಕ ಇತಿಹಾಸಗಳನ್ನು ಅವಲೋಕಿಸಿದಾಗ ಕನರ್ಾಟಕತ್ವವನ್ನು ರೂಪಿಸಿದ ವೈವಿಧ್ಯಮಯ ಕಾಣ್ಕೆಗಳು, ದೃಷ್ಟಿಗಳು, ತತ್ತ್ವಜ್ಞಾನಗಳು ಅಗಾಧವಾಗಿ ಕಾಣಿಸುತ್ತವೆ. ಅವುಗಳು ನಾಡು, ಸಾಹಿತ್ಯ, ಸಂಸ್ಕೃತಿ, ಜಾನಪದ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾಮರ್ಿಕವೇ ಮುಂತಾದ ವಿಚಾರಗಳಲ್ಲಿ, ಅವುಗಳ ಆಲೋಚನೆ ಮತ್ತು ಆಚರಣೆಗಳಲ್ಲೂ ಕಂಡುಬರುತ್ತವೆ. ಈ ಎಲ್ಲಾ ನೋಟಗಳು ಕಾಲದಿಂದ ಕಾಲಕ್ಕೆ ಕನ್ನಡ ನಾಡನ್ನು ಸುಧಾರಣೆಗೊಳಪಡಿಸುತ್ತಾ ಕನರ್ಾಟಕದ ಅನನ್ಯತೆ-ಅಸ್ಮಿತೆಗಳನ್ನು ಆಂತರಿಕವಾಗಿಯೂ ಬಾಹ್ಯವಾಗಿಯೂ ಪೋಷಿಸುತ್ತಾ ಬಂದಿವೆ. ಈ ಬದಲಾವಣೆಗಳ, ಭಿನ್ನತೆಗಳ ಒಟ್ಟಂದದಿಂದಲೇ ಕನರ್ಾಟಕತ್ವ ಅಥವಾ ಕನ್ನಡತ್ವ ಪ್ರಾಪ್ತವಾಗಿದೆ. ಈ ರೀತಿಯ ಅನನ್ಯತೆಗೆ ಕಾರಣವಾದ ಅಂಶಗಳನ್ನು ಸ್ಥೂಲವಾಗಿ ಗುರುತಿಸಿ ಅವುಗಳ ಬಹುರೂಪಗಳನ್ನು ಚಚರ್ೆಗೊಳಪಡಿಸುವ ಹಾಗೂ ಮರುವಿವೇಚಿಸುವ ಮೂಲಕ ಪ್ರಸ್ತುತೀಕರಿಸಬಹುದಾದ ವಿಶೇಷತೆಗಳ ಕುರಿತು ದೃಷ್ಟಿ ಹರಿಯುವಂತೆ ಮಾಡುವ ಸಣ್ಣ ಪ್ರಯತ್ನವಿದು ಎಂದು ಗೌರಿ ವಿವರಿಸಿದರು.
ನಾಲ್ಕು ಗೋಷ್ಠಿಗಳು :
ಕನರ್ಾಟಕ ದರ್ಶನ : ಬಹುರೂಪಿ ಆಯಾಮಗಳು ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ 4 ಗೋಷ್ಠಿಗಳನ್ನು ಅಳವಡಿಸಲಾಗಿದೆ. ಮೊದಲನೆಯ ಗೋಷ್ಠಿ ಕನರ್ಾಟಕ ದರ್ಶನ - ಸಾಹಿತ್ಯ. ಈ ವಿಚಾರದಲ್ಲಿ ರಾಮಾಯಣ : ಸಮಕಾಲೀನ ನೆಲೆಗಳು ಕುರಿತು ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಹಾಗೂ ಮಹಾಭಾರತ : ಸಮಕಾಲೀನ ನೆಲೆಗಳು ಕುರಿತು ವಿದ್ವಾನ್ ಉಮಾಕಾಂತ ಭಟ್ಟ, ಮೇಲುಕೋಟೆಯವರು ವಿಚಾರ ಮಂಡಿಸಲಿದ್ದಾರೆ.
ಎರಡನೆಯ ಗೋಷ್ಠಿ ಕನರ್ಾಟಕ ದರ್ಶನ - ಅಧ್ಯಾತ್ಮ ಪರಂಪರೆ. ಈ ಗೋಷ್ಠಿಯಲ್ಲಿ ವಚನದ ಕುರಿತು ಡಾ. ವಿಜಯ ಕುಮಾರ ಎಸ್.ಕಟಗಿಹಳ್ಳಿಮಠ, ಕೀರ್ತನದ ಕುರಿತು ಡಾ.ಎಚ್.ಎನ್.ಮುರಳೀಧರ, ಸೂಫಿ ಕುರಿತು ರಂಜಾನ್ ದಗರ್ಾ, ತತ್ತ್ವಪದದ ಕುರಿತು ಡಾ.ಬಸವರಾಜ ಸಬರದ ವಿಚಾರ ಮಂಡಿಸಲಿದ್ದಾರೆ.
ಮೂರನೆಯ ಗೋಷ್ಠಿ ಕನರ್ಾಟಕ ದರ್ಶನ - ಬಹುಭಾಷಾ ಪರಂಪರೆ. ಈ ಗೋಷ್ಠಿಯಲ್ಲಿ ಶಿಕ್ಷಣ ಮತ್ತು ಸಾಮರಸ್ಯದ ಕುರಿತು ಬಿ.ಗಣಪತಿ ವಿಚಾರ ಮಂಡಿಸಲಿದ್ದಾರೆ.
ನಾಲ್ಕನೆಯ ಗೋಷ್ಠಿ ಕನರ್ಾಟಕ ದರ್ಶನ - ಜಾನಪದ ಪರಂಪರೆ. ಈ ಗೋಷ್ಠಿಯಲ್ಲಿ ಜನಪದ ಸಾಹಿತ್ಯದ ಕುರಿತು ಡಾ. ಪಿ.ಕೆ.ರಾಜಶೇಖರ, ಜನಪದ ಆರಾಧನೆಯ ಕುರಿತು ಡಾ.ಅಂಬಳಿಕೆ ಹಿರಿಯಣ್ಣ ಹಾಗೂ ಜನಪದ ಕಲಾ ಪರಂಪರೆಯ ಕುರಿತು ಡಾ.ಡಿ.ಬಿ.ನಾಯಕ ವಿಚಾರ ಮಂಡಿಸಲಿದ್ದಾರೆ.
ನವೆಂಬರ 15ಕ್ಕೆ ಆಳ್ವಾಸ್ ವಿದ್ಯಾಥರ್ಿಸಿರಿ:
ನವಂಬರ್ 15 ಗುರುವಾರ, ಬೆಳಿಗ್ಗೆ 9.30ಕ್ಕೆ ಆಳ್ವಾಸ್ ವಿದ್ಯಾಥರ್ಿಸಿರಿ ಉದ್ಘಾಟನೆ. ವಿದ್ಯಾಥರ್ಿಗಳಿಗಾಗಿ ವಿದ್ಯಾಥರ್ಿಗಳಿಂದಲೇ ನಡೆಯುವ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ಆಳ್ವಾಸ್ ವಿದ್ಯಾಥರ್ಿಸಿರಿ. ಈ ವರ್ಷ ನವೆಂಬರ್ 15 ಗುರುವಾರದಂದು ಉದ್ಘಾಟನೆಗೊಳ್ಳಲಿದ್ದು ಚಿನ್ಮಯ ವಿದ್ಯಾಲಯ, ವಿದ್ಯಾನಗರ, ಕಾಸರಗೋಡಿನ ಕು.ಸನ್ನಿಧಿ ಟಿ.ರೈ, ಪೆರ್ಲರ ಅಧ್ಯಕ್ಷತೆಯಲ್ಲಿ ಒಂದು ದಿನದ ಸಮ್ಮೇಳನ ನಡೆಯಲಿದೆ. ಪ್ರಸಿದ್ಧ ಚಲನಚಿತ್ರ ನಟಿ, ಕಲಾವಿದೆ ವಿನಯ ಪ್ರಸಾದ್ ಉದ್ಘಾಟಿಸಲಿರುವ ಈ ಸಮ್ಮೇಳನದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಭಾನ್ವಿತ ವಿದ್ಯಾಥರ್ಿಗಳು ತಮ್ಮ ಸಾಹಿತ್ಯಕ- ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸಲಿದ್ದಾರೆ. ಆಳ್ವಾಸ್ ವಿದ್ಯಾಥರ್ಿಸಿರಿ - 2018ರ ಪುರಸ್ಕಾರಕ್ಕಾಗಿ ಮಕ್ಕಳ ರಂಗಭೂಮಿ ಚಟುವಟಿಕೆಗಳಿಗೆ ಶ್ರೀ ಮೂತರ್ಿ ದೇರಾಜೆ, ಮಕ್ಕಳ ರಂಗವಿನ್ಯಾಸಕಾರರು, ಸಮಸಾಂಪ್ರತಿ, ವಿಟ್ಲ, ಮಕ್ಕಳ ವ್ಯಕ್ತಿತ್ವ ಸಂವರ್ಧನೆಗಾಗಿ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆ, ಶಕ್ತಿನಗರ, ಮಂಗಳೂರು. ಬಾಲಪ್ರತಿಭೆಗಾಗಿ ಮಾಸ್ಟರ್ ಸದ್ಗುಣ ಐತಾಳ್, ಶಾರದಾ ವಿದ್ಯಾಲಯ, ಮಂಗಳೂರು ಹಾಗೂ ಆಳ್ವಾಸ್ ವಿದ್ಯಾಥರ್ಿಸಿರಿ ಗೌರವ ಪ್ರಶಸ್ತಿಯನ್ನು ಹಿರಿಯ ಮಕ್ಕಳ ಸಾಹಿತಿಗಳಾದ ಶ್ರೀ ಎ.ಕೆ.ರಾಮೇಶ್ವರ ಗದಗರವರಿಗೆ ನೀಡಿ ಸನ್ಮಾನಿಸಲಾಗುವುದು. ಸಂಜೆ ಗಂಟೆ 4.30ಕ್ಕೆ ಡಾ| ಎಂ.ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆಯಲಿದೆ ಎಂದರು.
ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ:
ರತ್ನಾಕರವಣರ್ಿ ವೇದಿಕೆ - ಸಂತ ಶಿಶುನಾಳ ಶರೀಫ ಸಭಾಂಗಣ, ಕು.ಶಿ.ಹರಿದಾಸ ಭಟ್ಟ ವೇದಿಕೆ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ವೇದಿಕೆಗಳಲ್ಲಿ ಮುಸ್ಸಂಜೆಯಿಂದ ತಡರಾತ್ರಿಯವರೆಗೆ ಹಾಗೂ ಡಾ| ವಿ.ಎಸ್.ಆಚಾರ್ಯ ಸಭಾಭವನದ ಮಿಜಾರುಗುತ್ತು ಭಗವಾನ್ ಶೆಟ್ಟಿ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲುರಂಗ ಮಂದಿರ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಕೃಷಿ ಆವರಣದ ಆನಂದ ಬೋಳಾರ್ ವೇದಿಕೆಗಳಲ್ಲಿ ಹಗಲು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗರಿಗೆದರಲಿವೆ ಎಂದು ಗೌರಿ ಹೇಳಿದರು.
ಅನ್ಯಕಾರ್ಯ ನಿಮಿತ್ತ ರಜಾ ಸೌಲಭ್ಯ:
ಮೂರು ದಿನಗಳ ಕಾಲ ನಡೆಯುವ ಆಳ್ವಾಸ್ ನುಡಿಸಿರಿ-2018ರಲ್ಲಿ ಭಾಗಿಗಳಾಗುವ ಪ್ರತಿನಿಧಿಗಳಿಗೆ ಅನ್ಯಕಾರ್ಯ ನಿಮಿತ್ತ ರಜಾ ಸೌಲಭ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗಳು ಮಂಜೂರು ಮಾಡಿದ್ದು ಅವೆರಡರ ಅಧೀನದಲ್ಲಿರುವ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಪ್ರಸಾದ್ ಮತ್ತು ಗೌರಿ ಹೇಳಿದರು.