ಅಧಿಕಾರ ದುರುಪಯೋಗ ಆರೋಪ ಸತ್ಯಕ್ಕೆ ದೂರ: ಮದರಕಲ್ಲ
Allegations of abuse of power are far from the truth: Madarakalla
ತಾಳಿಕೋಟೆ 01: ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಪ್ರಜಾ ಸೌಧ ಕಟ್ಟಡಕ್ಕೆ ಸ್ಥಳ ದಾನ ಮಾಡಿರುವುದರ ಹಿಂದೆ ಪಟ್ಟಣದ ಅಭಿವೃದ್ಧಿಯ ಹಿತ ಹೊರತುಪಡಿಸಿದರೆ ಯಾವ ಸ್ವಾರ್ಥ ಹಿತಾಸಕ್ತಿಯೂ ಇಲ್ಲ ಎಂದು ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಹೇಳಿದರು. ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಜಾಸೌಧ ಸ್ಥಳ ದಾನಿಗಳಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಪ್ರಜಾ ಸೌಧ ನಿರ್ಮಾಣಕ್ಕೆ ಸ್ಥಳ ಸಿಗದೇ ಇರುವುದರಿಂದ ಪಟ್ಟಣದ ಒಳಿತಿಗಾಗಿ ಜಿಲ್ಲಾಧಿಕಾರಿಗಳ ಹಾಗೂ ಶಾಸಕರ ವಿನಂತಿ ಮೇರೆಗೆ ನಮ್ಮ ಸ್ವಂತ ಮಾಲಕೀಯ 2 ಎಕರೆ ಜಮೀನನ್ನು ಏನನ್ನೂ ಪಡೆದುಕೊಳ್ಳದೆ ದಾನದ ರೂಪದಲ್ಲಿ ಕೊಟ್ಟಿದ್ದೇವೆ ಇದು ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು ಇದರ ಕುರಿತು ಪತ್ರಿಕೆಗಳಲ್ಲಿಯೂ ವರದಿ ಪ್ರಕಟವಾಗಿವೆ.
ಜಿಲ್ಲಾಧಿಕಾರಿಗಳು ಹಲವಾರು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಅಂತಿಮಗೊಳಿಸಿದ್ದಾರೆ ಆದರೀಗ ಕೆಲವರು ಹೋರಾಟ ಸಮಿತಿಯನ್ನು ಮಾಡಿಕೊಂಡು ಇದು ಪಟ್ಟಣದಿಂದ ದೂರವಾಗಿದ್ದು ಸ್ಥಳಕೊಟ್ಟವರ ಸ್ವಾರ್ಥಸಾಸಕ್ತಿ ಇದೆ ಇದಕ್ಕಾಗಿ ಇವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು ತಾಲೂಕ ಆಡಳಿತವು ಇವರೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಿದ್ದಾರೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ ನಾವು ಯಾವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ, ಇದರಲ್ಲಿ ಶಾಸಕರ ಮತ್ತು ತಾಲೂಕ ಆಡಳಿತದ ಯಾವ ಹಸ್ತಕ್ಷೇಪವು ಇಲ್ಲ, ಎಲ್ಲವೂ ಸ್ಪಷ್ಟವಾಗಿದೆ ಇದರ ಕುರಿತು ಸಂಪೂರ್ಣ ದಾಖಲೆ ಪತ್ರಗಳನ್ನು ನಾವು ಕೊಡಲು ಸಿದ್ದರಿದ್ದೇವೆ. ನಾವು ಈ ಪಟ್ಟಣದಲ್ಲಿಯೇ ಹಲವಾರು ವರ್ಷಗಳಿಂದ ಜೀವಿಸುತ್ತಿದ್ದೇವೆ ನಮಗೂ ಊರಿನ ಕುರಿತು ಅಪಾರ ಕಾಳಜಿ ಇದೆ ನಮ್ಮ ಸಾಮಾಜಿಕ ಬದುಕು ಇಡೀ ಪಟ್ಟಣದ ಜನತೆಯ ಮುಂದೆ ಇದೆ ನಾವೆಂದೂ ಅನ್ಯಾಯ ಹಾಗೂ ಜನರಿಗೆ ಮೋಸ ಮಾಡುವಂತಹ ಕೆಲಸ ಮಾಡಿದವರಲ್ಲ.
ಈ ಯೋಜನೆಯ ನಿರ್ಣಯ ಸರ್ಕಾರ ಭವಿಷ್ಯದ ದೃಷ್ಟಿಯಿಂದ ತೆಗೆದುಕೊಂಡಿದೆ. ಪಟ್ಟಣ ಮುಂದೆ ನಗರಸಭೆಯಾಗಿ ಪರಿವರ್ತನೆಯಾಗಲಿದೆ ಆಗ ಸ್ಥಳಗಳು ಸಿಗುವುದು ಕಷ್ಟ ಇದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಈಗಲಾದರೂ ಯಾರಾದರೂ ಪಟ್ಟಣದ ಸಮೀಪದಲ್ಲಿ ಸ್ಥಳ ಕೊಡಲು ಸಿದ್ದರಿದ್ದರೆ ನಮ್ಮದು ಯಾವುದೇ ಅಭ್ಯಂತರ ಇಲ್ಲ ಆದರೆ ಯಾವುದಾದರೂ ಸರ್ಕಾರಿ ಇಲಾಖೆಯ ಸ್ಥಳ ತೋರಿಸಿ ಇಲ್ಲಿ ಮಾಡಿ ಅಂತ ಹೇಳುವುದು ಸರಿಯಲ್ಲ ಅದು ಸಾಧ್ಯವೂ ಇಲ್ಲ ಹಾಗೆ ಆಗುವುದಿದ್ದರೆ ಜಿಲ್ಲಾಧಿಕಾರಿಗಳೇ ಆ ಕೆಲಸವನ್ನು ಮಾಡುತ್ತಿದ್ದರು ಹತ್ತು ವರ್ಷಗಳವರೆಗೆ ಕಾಯುವ ಅಗತ್ಯ ಇರ್ಲಿಲ್ಲ. ಸುಖಾ ಸುಮ್ಮನೆ ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ಸಾರ್ವಜನಿಕರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುವುದು, ಅನಗತ್ಯ ನಮ್ಮ ವ್ಯಕ್ತಿತ್ವ ಹರಣ ಮಾಡುವುದು ಸರಿಯಲ್ಲ ಮಾತನಾಡುವಾಗ ಹಿಡಿತ ಇರಬೇಕು, ನಮಗೆ ಯಾರ ಮೇಲೆಯೂ ದ್ವೇಷ ಇಲ್ಲ ಮುಂದೆ ಪಟ್ಟಣದ ಅಭಿವೃದ್ಧಿ ಕೆಲಸಗಳು ಇನ್ನೂ ಸಾಕಷ್ಟು ಇವೆ ಅವುಗಳನ್ನು ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಈ ರೀತಿಯ ಬೆಳವಣಿಗೆಯಿಂದ ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಹೂಗಾರ,ಡಾ.ನಜೀರ ಕೋಳ್ಯಾಳ, ಸಿದ್ದರಾಮಪ್ಪ ಚೌದ್ರಿ ಮೈಲೇಶ್ವರ, ಬಾಬು ಗೌಡ ಹಾವರಗಿ, ರಾಜು ಹಂಚಾಟೆ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 