ಮಕ್ಕಳ ಸರ್ವತೋಮುಖ ಅಭಿವೃದಿಯೇ ದೇಶದ ಭವಿಷ್ಯ : ಕಂಬಾರ

ಮಕ್ಕಳ ಸರ್ವತೋಮುಖ ಅಭಿವೃದಿಯೇ ದೇಶದ ಭವಿಷ್ಯ : ಕಂಬಾರ   All-round development of children is the future of the country: Kambara

ಬೆಳಗಾವಿ 21: ಮಕ್ಕಳ ಸರ್ವತೋಮುಖ ಅಭಿವೃದಿಯೇ ದೇಶದ ಭವಿಷ್ಯ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯೆಕೀಯ ನೀರೀಕ್ಷಕ ಡಾ. ಸಂಜಯ ಕಂಬಾರ  ಅವರು ಹೇಳಿದರು. 

.ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಪಲ್ಸ್‌ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕ್ಕೊಳ್ಳಲಾಗಿದ್ದು  ಈ ಪೋಲಿಯೋ ರೋಗವೂ ಮಕ್ಕಳ ಬಾಲ್ಯ ಹಾಗೂ ಭವಿಷ್ಯದ ಮೇಲೆ ಅಘಾದವಾದ ಪರಿಣಾಮ ಬೀರುತ್ತದೆ ಹಾಗೇ ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು 1994 ರಲ್ಲಿ ಪ್ರಾರಂಭವಾದ ಈ ಪಲ್ಸ್‌ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ.  ಆದ್ದರಿಂದ ಮಕ್ಕಳ ಭವಿಷ್ಯದಲ್ಲಿ ಕಷ್ಟಕ್ಕೊಳಗಾಗದಂತೆ ಮಾಡಲು ತಮ್ಮ ಎಲ್ಲಾ 5 ವರ್ಷದೊಳಗಿನ ಮಕ್ಕಳನ್ನು ಕರೆದುಕೊಂಡು ಬಂದು ಇದರ ಸದುಪಯೋಗ ಪಡೆದಕೊಳ್ಳಬೇಕಾಗಿ ಎಂದು ತಿಳಿಸಿದರು,  

ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಮ್ ಎಸ್ ಕಡ್ಡಿ ಅವರು ಮಾತನಾಡಿ ಪೋಲಿಯೋ ರೋಗವು ಇಂದು ನಮ್ಮ ಭಾರತದಲ್ಲಿ ನಿರ್ಮೂಲನೆ ಆಗಿದೆ, ಆದರೆ ನಮ್ಮ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ತಾನ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ದಾಖಲಾಗುತ್ತಿರುವದರಿಂದ ಇದು ನಮ್ಮ ದೇಶದ ಮಕ್ಕಳಿಗೆ ಭಾದಿಸದಂತೆ ಮಾಡಲು ಇಂದೇ ನಾವು ನಮ್ಮ ಎಲ್ಲ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ ಪೋಲಿಯೋ ಲಸಿಕೆಯನ್ನು ಹಾಕಿಸಲೇಬೇಕು ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಡಾ.ಸ್ನೇಹಲ ವೇರ್ಣೇಕರ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು  ಕೂಡಾ ಭಾಗಿಯಾಗಿದ್ದರು.