ಶೈಕ್ಷಣಿಕ ಪ್ರಗತಿಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ: ರಾಜು ಕಾಗೆ
All-round development is possible through educational progress: Raju Kage
ಕಾಗವಾಡ, 20 : ಕ್ಷೇತ್ರದ ಜನತೆ ಸರ್ಕಾರ ನೀಡುವ ಅನುದಾನವನ್ನು ಗುಡಿ-ಗುಂಡಾರ ನಿರ್ಮಾಣಕ್ಕೆ ಬಳಿಸುವುದಕ್ಕಿಂತ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬಳಸಿಕೊಳ್ಳಬೇಕು. ಶೈಕ್ಷಣಿಕ ಪ್ರಗತಿಯೊಂದಾದರೇ ಪ್ರತಿ ಕ್ಷೇತ್ರದಲ್ಲಿಯೂ ಪ್ರಗತಿ ಕಾಣಲು ಸಾಧ್ಯವಿದೆಯೆಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು, ಮಂಗಳವಾರ ದಿ. 20 ರಂದು ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ 17 ಕೋಟಿ ಅನುದಾನದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ಹಾಗೂ ಮದಭಾಂವಿ ಮತ್ತು ತೆವರಟ್ಟಿ ಗ್ರಾಮಗಳಲ್ಲಿ ತಲಾ 10 ಲಕ್ಷ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿಯ ಒಟ್ಟು 6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು ಆರು ಕೆರೆ ತುಂಬುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವದು.
ಅದರಂತೆ ಬಸವೇಶ್ವರ ಯಾತ ನೀರಾವರಿ ಯೋಜನೆಗೆ ಜಮೀನು ನೀಡಿದ ರೈತರಿಗೆ ಸುಮಾರ 400 ಕೋಟಿ ರೂಪಾಯಿ ಪರಿಹಾರ ನೀಡಬೇಕಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಹಣ ಬಿಡುಗಡೆಯಾಗುವ ನೀರೀಕ್ಷೆಯಿದೆ. ಅದು ಬಂದ ನಂತರ ಎಲ್ಲ ರೈತರಿಗೆ ಪರಿಹಾರ ನೀಡಲಾಗುವುದು.
ಕವಲಗುಡ್ಡದಲ್ಲಿಯ ಮೂರಾರ್ಜಿ ವಸತಿ ಶಾಲೆಯ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಅವಧಿಯೊಳಗೆ ಗುಣಮಟ್ಟದ ಕಟ್ಟಡ ನಿರ್ಮಿಸಬೇಕೆಂದು ಸೂಚಿಸಿದರು. ಕೌಲಗುಡ್ಡ ಸಿದ್ಧಯೋಗಿ ಶ್ರೀ ಅಮರೇಶ್ವರ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ, ಆರ್ಶಿವಚನ ನೀಡಿದರು.
ಈ ವೇಳೆ ತಾ.ಪಂ. ಇಓ ವೀರಣ್ಣಾ ವಾಲಿ, ಮಡಿವಾಳಪ್ಪಾ ಪಾಟೀಲ, ಮಾಜಿ ಜಿ.ಪಂ. ಸದಸ್ಯ ವಿನಾಯಕ ಬಾಗಡೆ, ಮದಭಾಂವಿ ಗ್ರಾ.ಪಂ ಅಧ್ಯಕ್ಷ ಮಹಾದೇವ ಕೋರೆ, ಮುಖಂಡರಾದ ಮಹಾದೇವ ಮಾಳಿ, ನಿಜಗುಣಿ ಮಗದುಮ್ಮ, ಶಂಕರ ವಾಂಡಿಮಾಳಿ, ಈಶ್ವರ ಕೋಳಿ, ಶಿವಪ್ಪ ಹಣಮರಡ್ಡಿ, ವಿಠ್ಠಲ ಐಹೊಳೆ, ಚನ್ನಪ್ಪ ಐಹೊಳೆ, ಹಣಮಂತ ಕಾಂಬಳೆ, ಲಕ್ಷ್ಮಣ ಘಟನಟ್ಟಿ, ರಾಜು ಪಾಟೀಲ, ಬಾಲಾಜಿ ಪಾಟೀಲ, ಸುರಭಿ ಕನ್ಸ್ಟ್ರಕ್ಷನ್ ಎಇಇ ಚಂದ್ರಶೇಖರ, ಎಐ ಸಂತೋಷ, ನವೀನ ನಾಗನೂರ, ಗುತ್ತಿಗೆದಾರರಾದ ಬಾಲಾಜಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 