ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸನ್ಮತಿ ವಿದ್ಯಾಲಯಕ್ಕೆ ಎಲ್ಲ ರೀತಿಯ ಸಹಕಾರ: ಉತ್ಕರ್ಷ ಪಾಟೀಲ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸನ್ಮತಿ ವಿದ್ಯಾಲಯಕ್ಕೆ ಎಲ್ಲ ರೀತಿಯ ಸಹಕಾರ: ಉತ್ಕರ್ಷ ಪಾಟೀಲ All possible cooperation to Sanmati Vidyalaya, which is trying to increase SSLC results: Utkarsha P


ಕಾಗವಾಡ 03 : ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಶ್ರಮಿಸುತ್ತಿರುವ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಸನ್ಮತಿ ವಿದ್ಯಾಲಯದ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಪಟ್ಟಣ ಪಂಚಾಯತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶೇಡಬಾಳ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ ತಿಳಿಸಿದ್ದಾರೆ. ಅವರು, ಸೋಮವಾರ ದಿ.02 ರಂದು ಸಂಜೆ ಸನ್ಮತಿ ವಿದ್ಯಾಲಯಕ್ಕೆ ಪ.ಪಂ. ಸದಸ್ಯರೊಂದಿಗೆ ಭೇಟ್ಟಿ ನೀಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ವಿಶೇಷ ತರಗತಿಗಳನ್ನು ವಿಕ್ಷಿಸಿ, ಮಾತನಾಡುತ್ತಿದ್ದರು. 

ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ಮಾತನಾಡಿ, ನಮ್ಮ ಶಾಲೆಯಲ್ಲಿ ಯಾವುದೇ ಅಂಕಗಳ ಮಾನದಂಡ ಅನುಸರಿಸದೇ ಅತೀ ಕಡಿಮೆ ಶುಲ್ಕದೊಂದಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದು, ಇದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನೀರೀಕ್ಷಿತ ಗುರಿ ಮುಟ್ಟಲ ಸಾಧ್ಯವಾಗಿರಲಿಲ್ಲ. ಇದನ್ನು ಮನಗೊಂಡ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಸೇರಿ ಪಾಲಕರ ಸಹಕಾರದೊಂದಿಗೆ ಕಳೆದ ಜನೇವರಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆಯಿಂದ ರಾತ್ರಿಯ ವರೆಗೆ ವಿಶೇಷ ತರಗತಿಗಳನ್ನು ನಡೆಸಿ, ಕಾಲಕಾಲಕ್ಕೆ ಪರೀಕ್ಷೆಗಳನ್ನು ಹಮ್ಮಿಕೊಂಡು, ಅಭ್ಯಾಸದಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ಈ ವರ್ಷ ಫಲಿತಾಂಶ ಶೇ. 100ಅ ರಷ್ಟು ಮಾಡುವ ಗುರಿ ಹೊಂದಿದ್ದೇವೆ. ಇದಕ್ಕೆ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಶಿಕ್ಷಕರು, ಪ.ಪಂ. ಸದದಸ್ಯರು ಮತ್ತು ಪಾಲಕರ ಬಹಳ ಸಹಕಾರ ನೀಡಿದ್ದಾರೆ ಎಂದರು. 

ಮುಖ್ಯೋದ್ಯಾಪಕಿ ಎಂ.ಎನ್‌. ಕಾಳೇನಟ್ಟಿ ಮಾತನಾಡಿ, ಬೆಳಿಗ್ಗೆ 4 ಗಂಟೆಗೆ ಎಲ್ಲ ವಿದ್ಯಾರ್ಥಿಗಳನ್ನು ಎಬ್ಬಿಸಿ, ನಂತರ 2 ಗಂಟೆ ವ್ಯಾಯಾಮ, ಅಭ್ಯಾಸ, ಅಲ್ಪೋಪಹಾರ ನಂತರ ಮತ್ತೆ ಅಭ್ಯಾಸ, ಮಧ್ಯಾಹ್ನ ಊಟ ರಾತ್ರಿ ಊಟ ನೀಡಿ, ರಾತ್ರಿ 10 ಗಂಟೆಯ ವರೆಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದೇವೆ ಎಂದರು. ಶಿಕ್ಷಕ ಎಸ್‌.ಪಿ. ನಾಯಿಕ ಮಾತನಾಡಿ, ನಮ್ಮ ಶಾಲೆಯಲ್ಲಿ ಒಟ್ಟು ಕನ್ನಡ ಮತ್ತು ಮರಾಠಿ ಮಾಧ್ಯಮದ 139 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಎಲ್ಲ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿ, ವಿಶೇಷ ತರಗತಿ ಮತ್ತು ಪರೀಕ್ಷೆಗಳನ್ನು ನಡೆಸಿ, ಎ, ಬಿ, ಮತ್ತು ಸಿ ಎಂದು ವಿಂಗಡಿಸಿ, ಅವರಿಗೆ ತರಬೇತಿ ನೀಡುತ್ತಿದ್ದೇವೆ. ವಿದ್ಯಾರ್ಥಿನಿಯರನ್ನು ರಾತ್ರಿ 9 ಗಂಟೆಗೆ ಅವರ ಪಾಲಕರು ಬಂದ ನಂತರ ಮನೆಗೆ ಕಳುಹಿಸಿಕೊಟ್ಟು ವಿದ್ಯಾರ್ಥಿಗಳೊಂದಿಗೆ ಪ್ರತಿ ದಿನ 2 ಶಿಕ್ಷಕರು ಶಾಲೆಯಲ್ಲಿಯೇ ಇದ್ದು, ಅಭ್ಯಾಸ ಹೇಳಿಕೊಡುತ್ತಿದ್ದೇವೆ. ಇದೆಲ್ಲದ್ದಕ್ಕೆ ಪಾಲಕರೂ ಸಹ ಬಹಳ ಸಹಕಾರ ನೀಡಿದ್ದಾರೆ ಎಂದರು. 

ಇದೇ ವೇಳೆ ಇತ್ತಿಚಿಗೆ ಸನ್ಮತಿ ವಿದ್ಯಾಲಯಕ್ಕೆ ತಾಲೂಕಿನ ಉತ್ತಮ ಶಾಲೆ ಪುರಸ್ಕಾರ ಲಭಿಸಿದ್ದಕ್ಕಾಗಿ ಶಿಕ್ಷಕರನ್ನು ಅಭಿನಂದಿಸಲಾಯಿತು. ಈ ವೇಳೆ ಪ.ಪಂ. ಸದಸ್ಯರಾದ ಸಚೀನ ಜಗತಾಪ, ಮಹಾಧವಲ ಯಾದವಾಡೆ, ಬಾಬು ಐನಾಪೂರೆ, ನಾಮದೇವ ಹೊನಕಾಂಬಳೆ, ಯಶವಂತ ಚಾವರೆ, ಸನ್ಮತಿ ಸಮಿತಿಯ ಅಧ್ಯಕ್ಷ ವ್ಹಿ.ಜೆ. ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ, ಸನ್ಮತಿ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸನ್ಮತಿ ಪಾಟೀಲ, ಸದಸ್ಯರಾದ ಅಣ್ಣಾಸಾಬ ಹಂಡಗೆ, ನೇಮಗೌಡಾ ಘೇನಪ್ಪಗೋಳ, ರಾಜು ಘೇನಪ್ಪಗೋಳ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆರ್‌.ವ್ಹಿ. ಸಂಗೋರಾಮ, ನಿರ್ದೇಶಕ ಎಂ.ಎಸ್‌. ಪಾಟೀಲ ಸೇರಿದಂತೆ ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.