ಎಲ್ಲಾ ದೇವರುಗಳು ಒಂದೇ : ಸಂಗನಬಸವ
All gods are one: Sangana Basava
ಶಿಗ್ಗಾವಿ 19 : ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯು ಜ್ಯೋತಿರಲಿಂಗಗಳ ಪ್ರದರ್ಶನ ಮೆರವಣಿಗೆಗೆ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಮೌಲ್ಯಾಧಾರಿತ ಸಮಾಜ ಸ್ಥಾಪನೆ, ದ್ವೇಷರಹಿತ ಚಿಂತೆ. ಒತ್ತಡ, ಭಯ ರಹಿತ ಸುಂದರ ಸಮಾಜ ನಿರ್ಮಾಣವೇ ಶಿವರಾತ್ರಿ ಕಾರ್ಯಕ್ರಮಗಳ ಉದ್ದೇಶವಾಗಿದೆ. ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಈಶ್ವರಿ ವಿವಿ ಈ ಕಾರ್ಯ ನಡೆಸುತ್ತಿದೆ. ಎಲ್ಲಾ ದೇವರುಗಳು ಒಂದೇ ಎಂದು ಸಾರುವ ಮೂಲಕ ಪರಮಪಿತ ಶಿವ ಪರಮಾತ್ಮನ ಕುರಿತು ತಿಳಿಸಿಕೊಡುವುದಾಗಿದೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಭಾರತಿ ಅಕ್ಕನವರು ಮಾತನಾಡಿ ಧ್ಯಾನ ಮನುಷ್ಯನ ಬದುಕಿನಲ್ಲಿ ಶಿಸ್ತು ಮತ್ತು ಜೀವನಶೈಲಿಯನ್ನು ರೂಢಿಸುತ್ತದೆ. ಅಲ್ಲದೆ ಇದು ಬದುಕಿಗೆ ಸನ್ಮಾರ್ಗವನ್ನು ತೋರುವ ಒಂದು ನಿಯಮವಾಗಿದೆ, ಶಿವರಾತ್ರಿ ಪದವು ಅಂದಕಾರವನ್ನು ಸೂಚಿಸುತ್ತದೆ. ಅಜ್ಞಾನ, ಅಂಧಕಾರ ಹಾಗೂ ಅಧರ್ಮದ ಕತ್ತಲನ್ನ ಹೋಗಲಾಡಿಸುವುದೇ ಶಿವರಾತ್ರಿಯಾಗಿದೆ ಎಂದರು. ಪಟ್ಟಣದಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಈಶ್ವರ ದೇವಸ್ಥಾನದವರೆಗೆಜ್ಯೋತಿಲಿಂರ್ಗಗಳ ಪ್ರದರ್ಶನ ಮೆರವಣಿಗೆ ಸಾಗಿಬಂದಿತು. ಮೆರವಣಿಗೆಯಲ್ಲಿ ಮುಖಂಡರಾದ ನರಹರಿ ಕಟ್ಟಿ, ಶ್ರೀಕಾಂತ ಬುಳ್ಳಕ್ಕನವರ, ಉಮೇಶ ಗೌಳಿ ಸೇರಿದಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 