ಅಕ್ಕಮಹಾದೇವಿ ಸ್ತ್ರೀ ಕುಲಕ್ಕೆ ಸ್ಫೂರ್ತಿ ಹಾಗೂ ಪ್ರೇರಣೆ- ಬಸವ ಶಾಂತಲಿಂಗ ಸ್ವಾಮೀಜಿ

ಅಕ್ಕಮಹಾದೇವಿ ಸ್ತ್ರೀ ಕುಲಕ್ಕೆ ಸ್ಫೂರ್ತಿ ಹಾಗೂ ಪ್ರೇರಣೆ- ಬಸವ ಶಾಂತಲಿಂಗ ಸ್ವಾಮೀಜಿ Akkamahadevi is an inspiration and motivation for the female race - Basava Shantalinga Swamiji

ಹಾವೇರಿ 06 : ಚಿತ್ತಶುದ್ಧಿ,ಅಚಲ ನಿಷ್ಠೆ ಹಾಗೂ ನಿಷ್ಕಲ್ಮಶವಾದ ಮನಸ್ಸಿನ ಮೂಲಕ ಅನುಭವ ಮಂಟಪದ ಮುಕುಟ ಮಣಿ ಆಗಿದ್ದ ಅಕ್ಕಮಹಾದೇವಿ ಸ್ತ್ರೀ ಕುಲಕ್ಕೆ ಸದಾ ಸ್ಫೂರ್ತಿ -ಪ್ರೇರಣೆ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.  ಇಲ್ಲಿನ ಹೊಸಮಠದಲ್ಲಿ  ಬಸವ ಕೇಂದ್ರ,ಅಕ್ಕನ ಬಳಗ, ಹೊಸಮಠ ಇವುಗಳ ಸಹಯೋಗದಲ್ಲಿ  ಜರುಗಿದ  ಶರಣಸಂಗಮ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳು  ಸಾನ್ನಿಧ್ಯವಹಿಸಿ ಮಾತನಾಡಿದರು.

ಅಕ್ಕಮಹಾದೇವಿ ಸಂಸಾರ ಬಟ್ಟೆ ಮತ್ತು ಲೌಕಿಕ ಬಂಧನವನ್ನು ತ್ಯಜಿಸಿ,ನಿಸರ್ಗದ ಮಧ್ಯೆ ಬೆಳೆದವಳು. ಅರಮನೆಯ ವೈಭವ ತಿರಸ್ಕರಿಸಿ ನಿರಾಕಾರ, ಹಾಗೂ ನಿಸರ್ಗದತ್ತ  ಆಧ್ಯಾತ್ಮಿಕ ಜೀವನ ಅರಿತು ಸಂಸ್ಕಾರದ ಹಾದಿಯಲ್ಲಿ ಸಾಗಿ ಬಂದವಳು.ಅವಳ ನಡೆ ಮತ್ತು ನುಡಿ ಆಕೆಯ ವಚನಗಳಲ್ಲಿ ಕಾಣಿಸುತ್ತದೆ ಅಂಥ ದಿಟ್ಟ ಹೆಜ್ಜೆ ಇಟ್ಟ ಅಕ್ಕಮಹಾದೇವಿ ಇಡೀ ಜಗತ್ತಿಗೆ ಅಕ್ಕನ ಸ್ಥಾನ ತುಂಬಿದವಳು ಎಂದರು. 

ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಗೀತಾ ಸುತ್ತಕೋಟಿ ಮಾತನಾಡಿ ವೈರಾಗ್ಯ ನಿಧಿ ಅಕ್ಕಮಹಾದೇವಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ಎಂದರು.ನಿಸರ್ಗ ಚಿಕಿತ್ಸಕಿ ಕೃಷ್ಣವೇಣಿ ಮಾತನಾಡಿ ಮನುಷ್ಯನ ಬದುಕಿನ ಗೊಂದಲಗಳನ್ನು ನಿವಾರಿಸುವ ಜೊತೆಗೆ ಆರೋಗ್ಯಕ್ಕೆ ಸಮಯ ಮೀಸಲಿಡಬೇಕು.ಧ್ಯಾನಕ್ಕೆ ಸಮಯ ಮಿಸಲಿಡಬೇಕು,ಆಗ ಮಾತ್ರ ಸದೃಢ ಆರೋಗ್ಯ ನಮ್ಮದಾಗಬಹುದು ಎಂದರು.ಇದೇ ಸಂದರ್ಭದಲ್ಲಿ ಪಲ್ಲಕ್ಕಿಯಲ್ಲಿ ಅಲಂಕೃತ ಅಕ್ಕಮಹಾದೇವಿ ಹಾಗೂ ಬಸವಣ್ಣನವರ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಿವಬಸವ್ವ ಲಕ್ಕಣ್ಣನವರ,ನಾಗರತ್ನಾ ಲಕ್ಕಣ್ಣನವರ, ಅಕ್ಕಮಹಾದೇವಿ ಹಾನಗಲ್ಲ ಹಾಗೂ ಮಮತಾ ನಂದಿಹಳ್ಳಿ ವಚನ ಗಾಯನ ಪ್ರಸ್ತುತ ಪಡಿಸಿದರು.ರಜನಿ ಮಡಿವಾಳ ಭರತ ನಾಟ್ಯ ಪ್ರದರ್ಶಿಸಿದರು.ರೇಖಾ ಯಡ್ರಾಮಿ, ಕಮಲಾ ಬುಕ್ಕಶೆಟ್ಟಿ, ಶಾಂತಾ ಶಿರೂರ, ಭಾರತಿ ಪಾಟೀಲ, ಗಿರಿಜಮ್ಮ ಮುಗದೂರ, ರಾಜೇಶ್ವರಿ ಹೆಸರೂರ, ಮಮತಾ ಮಠದ, ಸುಜ್ಞಾನಿದೇವಿ ಮಠದ, ಶೋಭಾ ಮೇವುಂಡಿಮಠ, ಚೈತ್ರಾ ಶೆಟ್ಟರ್,ಪವಿತ್ರಾ ರಾಜನಾಳಕರ, ಮಂಗಳಾ ಶೆಟ್ಟರ್,ರೂಪಾ ಸೋಬಾನಿ, ಲಲಿತಾ ಮಿರ್ಜಿ,ಶಶಿಕಲಾ ಬೈಲಣ್ಣನವರ, ಪಾರ್ವತಿ ತುಪ್ಪದ,ಲಲಿತಾ ಹಿರೇಮಠ ಸೇರಿದಂತೆ ಅನೇಕರಿದ್ದರು.