ಗಂಗಾವತಿಯಲ್ಲಿ ಮಹಿಳೆಯರಿಂದ ಅಕ್ಕಮಾದೇವಿ ನಾಟಕ ಪ್ರದರ್ಶನ

ಗಂಗಾವತಿಯಲ್ಲಿ ಮಹಿಳೆಯರಿಂದ ಅಕ್ಕಮಾದೇವಿ ನಾಟಕ ಪ್ರದರ್ಶನ Akkamadevi play performed by women in Gangavathi

ಗಂಗಾವತಿ 23: ಇತ್ತೀಚಿನ ದಿನಗಳಲ್ಲಿ  ರಂಗಭೂಮಿಗೆ ಪ್ತ್ರೋತ್ಸಾಹ ಕೊರತೆಯಾಗಿದೆ ಎಂದು  ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅದ್ಯಕ್ಷೆ ಮಾಲತಿ ಸುಧೀರ್ ಕಳವಳ ವ್ಯಕ್ತ ಪಡಿಸಿದರು.ನಗರದ  ಶ್ರೀಚೆನ್ನಬಸವಸ್ವಾಮಿ ಕಲಾ ಮಂದರಿದಲ್ಲಿ  ಶ್ರೀ ಮಹಾಲಕ್ಷಿ-್ಮ  ಕಲಾ ಸಂಘ ಏರಿ​‍್ಡಸಿದ್ದ  ಅಕ್ಕಮಾದೇವಿ  ಮತ್ತು  ಶಿರಿಗೇರಿಯ ಧಾತ್ರಿ ಸಂಸ್ಥೆಯ ಸಂಸಾರದಲ್ಲಿ ಸನಿದಪ ನಾಟಕವನ್ನು ಉದ್ಘಾಟಿಸಿ ಮತನಾಡಿದರು. 

ತಾವು ಈ ಹಿಂದೆ ಕಳಎದ 30-40 ವರ್ಷಗಳ ಹಿಂದೆ ಈ ಭಾಗದಲ್ಲಿ ನಾಟಕಗಳನ್ನು ಪ್ರದರ್ಶಿಸುವಾಗ ಸಾಕಷ್ಟು  ಕಲಾಭಿಮಾನಿಗಳು ಆಗಮಿಸಿ ಪ್ರೋತ್ರಾಹಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಮತ್ತು ಟಿವಿಗಳ ಹಾವಳಿಯಿಂದ   ರಂಗಭೂಮಿಗೆ ಧಕ್ಕೆ ಬಂದಿದೆ ಎಂದರು. ತಾವು ಕಷ್ಟ ಕಾಲದಲ್ಲಿ ಗಂಗಾವತಿಯಲ್ಲಿ ನಾಟಕ ಕಂಪನಿ ಹಾಕಿದ್ದ ಸಂದರ್ಭದಲ್ಲಿ ಪುಣ್ಯ ಸ್ಥಳ  ಕೈ ಹಿಡಿದು ಪ್ರೋತ್ಸಾಹಿಸಿದೆ ಎಂದರು.  ಪ್ರಸ್ತುತ ದಿನಗಳಲ್ಲಿ  ಅಂಗೈಯಲ್ಲಿ ಮನೋರಂಜನೆ ಸಿಗುತ್ತಿದ್ದು, ರಂಗ ಮಂದರಿಕ್ಕೆ  ತೆರಳಿ ನಾಟಕಗಳನ್ನು  ವೀಕ್ಷಿಸುತ್ತಿರುವ ಸಂಖ್ಯೆ ಕಡಿಮೆಯಾಗಿದೆ.  ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರೆ  ಪಾತ್ರಗಳನ್ನು ಆಯ.ಕೆ ಮಾಡಿ ಅಕ್ಕಮಾದೇವಿ ನಾಟಕ ಪ್ರದರ್ಶನಕ್ಕೆ ಮುಂದಾಗಿರುವದು ಶ್ಲಾಘನೀಯವಾಗಿದೆ ಎಂದರು.    

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ  ಗಂಗಾವತಿ ನಗರ ಕಲೆ ಸಂಸ್ಕೃತಿಯ ತವರೂರು ಎನಿಸಿಕೊಂಡಿದೆ. ಇಲ್ಲಿ ನಡೆಯುವ  ನಾಟಕ ಸೇರಿದಂತೆ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ. ಮಹಿಳೆಯರು ನಾಟಕ ಆಯೋಜಿಸಿರುವದು ಪ್ರಶಂಸನೀಯವಾಗಿದೆ ಎಂದರು. ಸಾನಿದ್ಯವನ್ನು ನಂದಿಪುರ  ಡಾ.ಮಹೇಶ್ವರ ಸ್ವಾಮೀಜಿ ವಹಿಸಿದ್ದರು. ಸಂಘದ ಅಧ್ಯಕ್ಷೆ ,.ಮಹಾಲಕ್ಷಿ-್ಮ ಕೇಸರಹಟ್ಟಿ  ಮಾತನಾಡಿ ಮಹಿಳೆಯರೇ ನಾಟಕ ಪ್ರದರ್ಶನಕ್ಕೆ ಮುಂದಾಗಿದ್ದಾರೆ.  ನಾಟಕ ಪ್ರದರ್ಶನಕ್ಕೆ ಗಣ್ಯರ ಸಹಕಾರವೇ ಕಾರಣ ಎಂದರು. 

ಈ ವೇಳೆ ನಾಟಕಕಾರ ಎಸ್ ವಿ.ಪಾಟೀಲ್ ಗುಂಡೂರು, ರೇವಣಸಿದ್ದಯ್ಯಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಂ.ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಶಂಕರಗೌಡ ಹೊಸಳ್ಳಿ,    ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್,  ಸರೋಜ  ಮಲ್ಲಿಕಾರ್ಜುನ ನಾಗಪ್ಪ,  ಜ್ಯೋತಿ  ಜಾಜಪ್ಪ ನ್ಯಾಮಗೌಡರ್, ಅನ್ನಪೂರ್ಣಸಿಂಗ್, ಶೈಲಜಾ ಹಿರೇಮಠ,  ಸುನೀತಾ ಶ್ಯಾವಿ, ಗೀತಾ ವಿಕ್ರಂ, ಶಿವಪ್ಪಗಾಳಿ, ಪತ್ರಕರ್ತರಾದ ಎಸ್‌.ಎಂ.ಪಟೇಲ್,  ರಾಮಮೂರ್ತಿ ನವಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹಾಗು ಹಿರಿಯ ರಂಗಕರ್ಮಿ ನಾಗರಾಜ ಇಂಗಳಗಿ,   ಪ್ರಸನ್ನ ದೇಸಾಯಿ,  ಕೃಷ್ಣ ವೀರಾಪುರ, ಗಿರಿಧರ ಜೂರಟಗಿ,  ರಾಘವೇಂದ್ರ ದಂಡಿನ್ , ಮಲ್ಕೇಶಿ ಕೋಟಿ, ಮಹಿಪತಿ ಕನಕಗಿರಿ, ಶ್ರವಣಕುಮಾರ ರಾಯ್ಕರ್  ಸೇರಿದಂತೆ ಪ್ರಮುಖರು ಇದ್ದರು.