ಬೆಳಗಾವಿ: ವಾಯು ಮಾಲಿನ್ಯ ಮಾರಣಾಂತಿಕವಾಗುತ್ತಿದೆ: ಪಾಟೀಲ
ಲೋಕದರ್ಶನ ವರದಿ
ಬೆಳಗಾವಿ 21: ಮಲೇರಿಯಾ, ಕ್ಷಯ ರೋಗಗಳಿಗಿಂತ ಅಧಿಕ ಸಂಖ್ಯೆಯ ಜನರು ವಾಯು ಮಾಲಿನ್ಯದಿಂದ ಸಾವಿಗೆ ತುತ್ತಾಗುತ್ತಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕ ಅಧಿಕಾರಿ ಡಾ. ಜಿ.ಎಂ. ಪಾಟೀಲ ಹೇಳಿದರು.
ನಗರದ ಜೈನ್ ಇಂಜಿನಿಯರಿಂಗ್ ಕಾಲೇಜು, ಸಾರಿಗೆ ಇಲಾಖೆ (ಆರ್ಟಿಓ) ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಾಯು ಮಾಲಿನ್ಯ ಸಮಸ್ಯೆ ತುಂಬಾ ಗಂಭೀರವಾಗಿದೆ. ಈ ಕುರಿತು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ ಎಂದರು.
ವಾಯು ಮಾಲಿನ್ಯದ ಪರಿಣಾಮವಾಗಿ ಕೆಲ ನಗರಗಳು ವರ್ಷದ ಕೆಲ ಸಮಯ ತನ್ನ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತಾಗಿದೆ. ವಿಷಕಾರಿ ಗಾಳಿಯಿಂದಾಗಿ ಸಾಮಾನ್ಯ ಕಾರ್ಯಚಟುವಟಿಕೆ ಅಸಾಧ್ಯವಾಗುತ್ತಿದೆ. ಇದಕ್ಕೆ ದೆಹಲಿ ತಾಜಾ ಉದಾಹರಣೆ ಎಂದರು.
ದೆಹಲಿ ಇಂದು ದಟ್ಟ ಹೊಗೆಯಿಂದ ಆವೃತವಾಗಿದೆ. ವಾಯು ಮಾಲಿನ್ಯದ ಅಪಾಯದ ಮಟ್ಟ 20 ಪಟ್ಟು ಅಧಿಕಗೊಂಡಿದೆ. ಅಧ್ಯಯನದ ಪ್ರಕಾರ ದೆಹಲಿಯಲ್ಲಿ ವಾಸಿಸುವ ಮಕ್ಕಳು ಬಾಲ್ಯದಲ್ಲಿಯೇ ಬದಲಾಯಿಸಲಾಗದಷ್ಟು ಶ್ವಾಸಕೋಶದ ಹಾನಿಗೆ ತುತ್ತಾಗಿದ್ದಾರೆ ಎಂದರು.
ಪರಿಸರ ಕಾಳಜಿ ಪ್ರತಿಯೊಬ್ಬರಲ್ಲಿ ಮೂಡಬೇಕಿದೆ. ಪ್ರಮುಖವಾಗಿ ವಿದ್ಯಾಥರ್ಿಗಳು ಇತ್ತ ಗಮನ ಹರಿಸಬೇಕು. ಸಾರ್ವಜನಿಕ ಮನೋಭಾವ ಬದಲಾಗಬೇಕು. ನಾವೆಲ್ಲರೂ ಆರೋಗ್ಯಕರ ವಾತಾವರಣಕ್ಕಾಗಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಅತಿಥಿಯಾಗಿದ್ದ ಬೆಳಗಾವಿ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಮಾತನಾಡಿ, ಸಾರ್ವಜನಿಕರು ಅಗತ್ಯವಿದ್ದಾಗ ಮಾತ್ರ ವಾಹನ ಬಳಕೆ ಮಾಡಬೇಕು. ನಗರ ಸಂಚಾರಕ್ಕಾಗಿ ಕೇವಲ ಬೈಸಿಕಲ್ ಬಳಸಬೇಕು ಎಂದು ಸಲಹೆ ನೀಡಿದರು.
ಜೈನ್ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಕೆ.ಜಿ. ವಿಶ್ವನಾಥ ಮಾತನಾಡಿ, ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರು ದೊಡ್ಡ ಪ್ರಮಾಣದಲ್ಲಿ ಒಗ್ಗೂಡಿ ಕೆಲಸ ಮಾಡಬೇಕು. ಪ್ರತಿಯೊಬ್ಬ ವಿದ್ಯಾಥರ್ಿಗಳು ಬೈಸಿಕಲ್ನಲ್ಲಿಯೇ ಶಾಲೆ-ಕಾಲೇಜುಗಳಿಗೆ ಬಂದು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಬೈಸಿಕಲ್ ಮೇಲೆ ಬರುವ ಜೈನ್ ಕಾಲೇಜು ವಿದ್ಯಾಥರ್ಿಗೆ ಪ್ರತ್ಯೇಕ ಪಾಕರ್ಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಸೈಕಲ್ ಮೇಲೆ ಬರುವ ವಿದ್ಯಾಥರ್ಿಗೆ 500 ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರೊ. ಶಶಾಂಕ ವನಕುದರಿ, ಪ್ರೊ. ಸಿ.ಎ. ನುನುಜಾ ಭತಿ, ಪ್ರೊ. ರವಿ ಪ್ರಕಾಶ, ವಿದ್ಯಾಥರ್ಿ ಸಂಯೋಜಕ ಆಸಿಫ್, ಯೋಗಿತಾ ಮತ್ತಿತರರು ಉಪಸ್ಥಿತರಿದ್ದರು.
ಆರ್ಟಿಓ ಇನ್ಸ್ಪೆಕ್ಟರ್ ಓಂಪ್ರಕಾಶ ಆಡಿನ್ ಸ್ವಾಗತಿಸಿ, ಪರಿಚಯಿಸಿದರು. ಪ್ರೊ. ಪ್ರಕಾಶ ಕೆ. ಸೋನ್ವಾಲ್ಕರ್ ವಂದಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 