ಇಂದು ಹುಬ್ಬಳ್ಳಿಯಲ್ಲಿ ಅಹಿಂದ್ ಸಮಾವೇಶ: ಸಿಎಂ ಸ್ಥಾನ ಬದಲಾಯಿಸಿದರೆ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ

ಇಂದು ಹುಬ್ಬಳ್ಳಿಯಲ್ಲಿ ಅಹಿಂದ್ ಸಮಾವೇಶ: ಸಿಎಂ ಸ್ಥಾನ ಬದಲಾಯಿಸಿದರೆ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ  Ahind convention in Hubballi today: Congress has no future if CM position is changed

             ರಾಣೆಬೆನ್ನೂರು 20: ಕಾಂಗ್ರೆಸ್ ಪಕ್ಷವು ಇತಿಹಾಸದಿಂದಲೂ ಯಾವುದೇ ಜಾತಿ, ಮತ, ಭೇದ,ಭಾವ ಎಣಿಸದೆ ಅಹಿಂದ ಮೂಲಕ ಸಮಾನತೆ ಮತ್ತು ಸಂಸ್ಕೃತಿಯ ಜೀವನ ನಿರ್ವಣೆಗಾಗಿ ಸಮಾನತೆ ಸಾಗುತ್ತಾ ಬಂದಿದೆ. ಅಹಿಂ ಮೂಲಕ ಜನವರಿ 21ರಂದು, ಬುಧವಾರ ಉತ್ತರ ಕರ್ನಾಟಕದ ವಾಣಿಜ್ಯ ವ್ಯವಹಾರಿಕ  ಕೇಂದ್ರ ಸ್ಥಾನವಾದ ಹುಬ್ಬಳ್ಳಿ ಗಾಜಿನ ಅರಮನೆಯಲ್ಲಿ ಉತ್ತರ ಕರ್ನಾಟಕದಲ್ಲಿ  ಅಹಿಂದ ಸಮಾವೇಶ ಆಯೋಜಿಸಲಾಗಿದೆ ಎಂದು ಅಹಿಂದ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಯಪ್ಪ ಕರಿಗಾರ ಹೇಳಿದರು. ಅವರು ಸೋಮವಾರ ಸಂಜೆ,ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಹಿಂದ್  ಸಮಾವೇಶ ಕುರಿತು ಮಾಧ್ಯಮ ಗೋಷ್ಠಿಯಲ್ಲಿ  ಮಾತನಾಡಿದರು.      ಪಟ್ಟಬದ್ಧ ಹಿತಾಶಕ್ತಿಗಳು, ಮುಖ್ಯಮಂತ್ರಿ ಸ್ಥಾನವನ್ನು ಬದಲಾಯಿಸಲು ಹೊರಟಿದ್ದಾರೆ.

             ಇದು ಸರ್ವತಾ ಸಲ್ಲದು.  ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಅದಕ್ಕೆ ಏನಾದರೂ ಪ್ರಯತ್ನಿಸಿದರೆ ಭವಿಷ್ಯದದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಭವಿಷ್ಯವಿರಲಾರದು ಎಂದು ಸ್ಪಷ್ಟಪಡಿಸಿದ ಅವರು, ಅಹಿಂ ಸಮಾವೇಶದ ಮೂಲಕ ಅಹಿಂ ಸಮುದಾಯದ ಓಮ್ಮತದ ಅಭಿಪ್ರಾಯವನ್ನು ಸಮಾವೇಶದಲ್ಲಿ ಸ್ಪಸ್ಟಿಕರಿಸಲಾಗುವುದು ಎಂದರು.      ಕರ್ನಾಟಕ ರಾಜ್ಯದಲ್ಲಿ ಒಟ್ಟು ಐದು ಭಾಗದಲ್ಲಿ ಅಹಿಂ ಸಮಾವೇಶವನ್ನು ನಡೆಸಲು ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ 21 ನಡೆಯುವ ಸಮಾವೇಶ ಪ್ರಥಮವಾಗಿದ್ದು ನಂತರ ಹಂತ ಹಂತವಾಗಿ ಬೇರೆ ಬೇರೆ ಭಾಗದಲ್ಲಿ ಸಮಾವೇಶ ನಡೆಸಲು ಸಿದ್ಧತೆ ಮಾಡಲಾಗುತ್ತದೆ. ಮಾಧ್ಯಮದವರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಣೆಬೆನ್ನೂರು ನಗರದಿಂದಲೇ 5000ಕ್ಕೂ ಹೆಚ್ಚು ಅಹಿಂದ್ ಕಾರ್ಯಕರ್ತರು ಮತ್ತು ಉತ್ತರ ಕರ್ನಾಟಕದ ಸಹಸ್ರಾರು  ಕಾರ್ಯಕರ್ತರು, ಅಹಿಂದ್ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ತಾಲೂಕಿನ ಅಹಿಂದ್ ಮುಖಂಡರಾದ ಸಿದ್ದಣ್ಣ ಅಂಬಲಿ, ದಿಳ್ಳೇಪ್ಪ ಕಟಿಗಿ, ಮಹಮ್ಮದ್ ಶರೀಫ್ ಚಾಕರಿ, ದಿಳ್ಳೇಪ್ಪ ಸತ್ಯಪ್ಪನವರ, ದಿಳ್ಳೇಪ್ಪ ಅರಸನಾಳ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.