ಕೃಷಿ’ಯ ತರಬೇತಿ ಕಾರ್ಯಕ್ರಮ
Agriculture training program
ಕೃಷಿ’ಯ ತರಬೇತಿ ಕಾರ್ಯಕ್ರಮ
ಧಾರವಾಡ 15: ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಾದ ‘ಸಿಹಿ ನೀರು ಮುತ್ತು (ಕಜಚಿಡಿಟ) ಕೃಷಿ’ಯ ಪ್ರಥಮ ತರಬೇತಿ ಕಾರ್ಯಕ್ರಮವನ್ನು ಅಕ್ಟೋಬರ್ 13 ರಂದು ಪ್ರಾರಂಭಿಸಲಾಯಿತು. ಎರಡು ದಿನಗಳ ಈ ತರಬೇತಿ ಕಾರ್ಯಕ್ರಮಕ್ಕೆ ಡಾ.ಕೆ.ವಿ.ಬಸವಕುಮಾರ ವಿದ್ಯಾಧಿಕಾರಿಗಳು(ಕೃಷಿ), ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ ಇವರು ಮುತ್ತು ಕೃಷಿಯ ಸೂಕ್ಷ್ಮ ಪರಿಚಯದೊಂದಿಗೆ ಗಣ್ಯಮಾನ್ಯರಿಗೆ ಸ್ವಾಗತವನ್ನು ಕೋರಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ಮುತ್ತು ಕೃಷಿಯ ಯೋಜನೆಯ ಅನುಷ್ಠಾನಕ್ಕೆ ಕಾರಣೀಭೂತರಾದ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ಬಿ.ಡಿ.ಬಿರಾದಾರ, ಸಂಶೋಧನಾ ನಿರ್ದೇಶಕರು, ತರಬೇತಿಯ ಹಿನ್ನಲೆ ಮತ್ತು ಉದ್ದೇಶಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಲಪತಿಗಳಾದ ಡಾ.ಪಿ.ಎಲ್.ಪಾಟೀಲ್ ಅವರು ಮುತ್ತು ಕೃಷಿ ಕೈಗೊಂಡು ಆರ್ಥಿಕ ಸ್ವಾವಲಂಬಿಗಳಾಗಲು ಸಣ್ಣ ಹಿಡುವಳಿದಾರರು, ಸ್ವಯಂ ಸಂಘಗಳು ಮತ್ತು ಮಹಿಳಾ ಉದ್ಯಮದಾರರಿಗೆ ಕರೆನೀಡಿದರು. ಕಾರ್ಯಕ್ರಮದಲ್ಲಿ ಡಾ.ಪಿ.ಯು.ಕೃಷ್ಣರಾಜ, ವಿದ್ಯಾಧಿಕಾರಿಗಳು, ಕೃಷಿ ಮಹಾವಿದ್ಯಾಲಯ, ಧಾರವಾಡ, ಡಾ. ಪ್ರಶಾಂತಿ ಎಸ್. ಕೆ, ಮುಖ್ಯಸ್ಥರು, ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ಇತರೇ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಯೋಜನೆಯ ಆಯೋಜಕರಾದ ಡಾ. ಎನ್. ಬಿ. ಮೊಗೇರ ಅವರು ವಂದನಾರೆ್ಣಯನ್ನು ಸಲ್ಲಿಸಿದರು. ರೈತರು, ಚಿಕ್ಕ ಹಿಡುವಳಿದಾರರು, ಆಸಕ್ತ ನವೋದ್ಯಮಿಗಳು ಸೇರಿದಂತೆ ಒಟ್ಟು 20 ಶಿಬಿರಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 