14ರಂದು ಮಹಾಗಣಪತಿ ಮಹೋತ್ಸವದಲ್ಲಿ ಅಘೋರಿ ನಾಗಬಾಬಾ
Aghori Naga Baba at Maha Ganapati Mahotsav on the 14th
14ರಂದು ಮಹಾಗಣಪತಿ ಮಹೋತ್ಸವದಲ್ಲಿ ಅಘೋರಿ ನಾಗಬಾಬಾ
ರಾಣೇಬೆನ್ನೂರು 12: ನಗರದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಆಯೋಜಿಸಲ್ಪಟ್ಟ "ರಾಣೇಬೆನ್ನೂರ ಕಾ ರಾಜಾ ಮಹಾಗಣಪತಿ ಮಹೋತ್ಸವ" ಕಾರ್ಯಕ್ರಮದ ಅಂಗವಾಗಿ, ಅಘೋರ ಪರಂಪರೆಯ ಪ್ರಸಿದ್ಧ ತಪಸ್ವಿ, ಅಘೋರ ಸದ್ಗುರು ನಾಗಬಾಬಾ ಧನಂಜಯ ಗುರೂಜೀ ಮಹಾರಾಜ್ ಅವರು ದಿನಾಂಕ 14. ಸೆಪ್ಟೆಂಬರ್ 2025 ರಂದು ಭಾನುವಾರ ಸಾಯಂಕಾಲ 6.30 ಗಂಟೆಗೆ, ಮಹಾಗಣಪತಿಯ ಭವ್ಯ ವೇದಿಕೆಯಲ್ಲಿ ತಮ್ಮ ದಿವ್ಯ ಸಾನ್ನಿಧ್ಯವನ್ನು ನೀಡಿ ಸಾರ್ವಜನಿಕರಿಗೆ ದರ್ಶನ ಮತ್ತು ಆಶೀರ್ವಚನ ನೀಡಲಿದ್ದಾರೆ. ಇವರ ಪಾದಸ್ಪರ್ಶ ಪ್ರಯಾಗರಾಜದಲ್ಲಿ ಅರ್ಘ್ಯ ಅರ್ಿಸಿದಂತೆ ಅತಿ ಪುಣ್ಯಫಲವನ್ನು ನೀಡುತ್ತದೆ ಎಂಬ ನಂಬಿಕೆಯಿಂದ, ಹಾಗೂ ನಮ್ಮ ರಾಣೇಬೆನ್ನೂರು ನಗರದ ಜನತೆಗೆ ಈ ದಿವ್ಯ ಅನುಭವ ಸಿಗಲೆಂಬ ಸದುದ್ದೇಶದಿಂದ, ನಮ್ಮ ವೇದಿಕೆಯು ಅವರನ್ನು ಆತ್ಮೀಯವಾಗಿ ಆಹ್ವಾನಿಸಿದೆ.ಎಲ್ಲ ಭಕ್ತರು ಮತ್ತು ಗಣಪತಿ ಸೇವಕರು ತಮ್ಮ ಕುಟುಂಬ ಸಮೇತರಾಗಿ ಬಂದು ಸದ್ಗುರುಗಳ ಆಶೀರ್ವಾದವನ್ನು ಪಡೆದು ಮಹಾಗಣಪತಿಯ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದುಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 