ಮನುಷ್ಯ ಮಾನವ ಕುಲಕ್ಕೆ ಬಂದ ನಂತರ ದಾನ-ಧರ್ಮ ಮಾಡುವುದು ತಮ್ಮ ಕರ್ತವ್ಯ : ಶ್ರೀಕಾಂತ ಕನ್ನೂರೆ
After entering the human race, it is one's duty to do charity: Srikanth Kannure
ಲೋಕದರ್ಶನ ವರದಿ
ಸಂಬರಗಿ 07 : ಮನುಷ್ಯ ಮಾನವ ಕುಲಕ್ಕೆ ಬಂದ ನಂತರ ದಾನ-ಧರ್ಮ ಮಾಡುವುದು ತಮ್ಮ ಕರ್ತವ್ಯ. ತಾವು ಕಷ್ಟಪಟ್ಟು ದುಡಿದ ಹಣದಲ್ಲಿ 51 ಸಾವಿರ ರೂಪಾಯಿಗಳನ್ನು ಹನುಮಾನ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಅನ್ನಪ್ರಸಾದಕ್ಕೆ ಸಹಾಯ ಮಾಡಿದ್ದಾರೆ. ಅಂತಹ ದಂಪತಿಗಳ ಆದರ್ಶ ಪಡೆದುಕೊಳ್ಳಬೇಕೆಂದು ಖ್ಯಾತ ವೈದ್ಯರು ಶ್ರೀಕಾಂತ ಕನ್ನೂರೆ ಹೇಳಿದರು.
ಜಂಬಗಿ ಗ್ರಾಮದಲ್ಲಿ ಹನುಮಾನ ದೇವಸ್ಥಾನಕ್ಕೆ ಹನಮಾಪೂರ ಗ್ರಾಮದ ವಿಠ್ಠಲ ಮಳವಾಡ ದಂಪತಿಗಳು ಅನ್ನ ದಾಸೋಹಕ್ಕೆ ದೇಣಿಗೆ ನೀಡಿದ ನಂತರ ದೇವಸ್ಥಾನದ ಕಮೀಟಿ ವತಿಯಿಂದ ದಂಪತಿಗಳಿಗೆ ಸತ್ಕರಿಸಿ ಮಾತನಾಡಿ ಅವರು ಮನುಷ್ಯ ಹುಟ್ಟು ಖಚಿತ, ಸಾವು ನಿಶ್ಚಿತ ಇದ್ದು, ಇದರ ಮಧ್ಯ ನಾವು ಯಾವರೀತಿ ಕೆಲಸ ಮಾಡುತ್ತಿವೋ ಅದೇ ಶಾಶ್ವತ. ದುಡ್ಡು, ಹಣ, ಸಂಪತ್ತು ಶಾಶ್ವತ ಉಳಿಯುವುದಿಲ್ಲ. ಮನುಷ್ಯನು ಹುಟ್ಟಿದ ನಂತರ ಒಳ್ಳೆಯ ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು.
ಈ ವೇಳೆ ಡಾ.ಶಶಿಧರ ಕುಂಬಾರ, ವಿಠ್ಠಲ ಕನ್ನೂರೆ, ಸುಭಾಷ ನಾಗನ್ನವರ, ಸಂಜಯ ಮಾಳಿ, ಪಿ.ಡಿ.ಓ ಸೋಮು ರಾಠೋಡ, ಪ್ರಶಾಂತ ವಾಘಮಾರೆ, ಪ್ರಕಾಶ ಪೂಜಾರಿ ಸೇರಿದಂತಗಣ್ಯರು ಉಪಸ್ಥಿತಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 